ಮಳೆಗಾಗಿ ಕಪ್ಪೆಗಳ ಮದುವೆ, ಕತ್ತೆಗಳ ಮದುವೆ, ಹಸು-ಕರುವಿಗೆ ಮದುವೆ ಹೀಗೆ ನಾನಾ ರೀತಿಯ ಆಚರಣೆಗಳನ್ನು ಹಿಂದಿನ ಕಾಲದಿಂದಲೂ ಗ್ರಾಮೀಣ ಪ್ರದೇಶಗಳ ಆಚರಣೆ ಮಾಡುತ್ತಾ ಬರುತ್ತಿದ್ದಾರೆ. ಅದೇರೀತಿ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೊಬಳಿಯ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಗಂಡು ಮಕ್ಕಳಿಬ್ಬರಿಗೆ ಮದುವೆ ಆಚರಣೆ ಮಾಡಿ ಮಳೆಗಾಗಿ ಪ್ರಾರ್ಥಿಸಲಾಯಿತು.
ಗ್ರಾಮಸ್ಥರು ಮಳೆಗಾಗಿ ಕಳೆದ 5 ದಿನಗಳಿಂದ ಗ್ರಾಮದ ದೊಡ್ಡಮ್ಮ ದೇವಾಲಯದ ಬಳಿ ಚಂದಾಮಾಮನ ಚಿತ್ರ ಬಿಡಿಸಿ ಪೂಜೆ ನಡೆಸಿದ್ದು, ಅಂತಿಮ ದಿನವಾದ ಮಂಗಳವಾರ ರಾತ್ರಿ ಮದುವೆ ಕಾರ್ಯಕ್ರಮ ಏರ್ಪಡಿಸಿದ್ದರು.
ಸಂಜೆ 7 ಗಂಟೆಯಿಂದಲೇ ಗ್ರಾಮದ ಮಹಿಳೆಯರು ಸೇರಿಕೊಂಡು ಗ್ರಾಮದ ಬೀದಿ ಸ್ವಚ್ಛಗೊಳಿಸಿ ಅರ್ಧ ಹಾಗೂ ಪೂರ್ಣವಾದ ಎರಡು ಚಂದ್ರನಂತೆ ರಂಗೋಲಿ ಬಿಡಿಸಿದ್ದು, ನಾನಾ ಬಗೆಯ ಪುಷ್ವಗಳಿಂದ ಅಲಂಕರಿಸಿದರು. ರಾತ್ರಿ 8.30 ರ ಬಳಿಕ ತಿಂಗಳ ಮಾಮನ ಪೂಜೆ ಆರಂಭಗೊಂಡಿತು, ಮೊದಲಿಗೆ ಸಿಂಗಾರಗೊಂಡಿದ್ದ ವಧು-ವರರನ್ನು ತಿಂಗಳ ಮಾಮನ ಎದುರು ಅಲಂಕರಿಸಿದ ಖುರ್ಚಿ ಮೇಲೆ ಕುಳ್ಳರಿಸಿ, ರಾಗಿ ರೊಟ್ಟಿ, ಚಿಗಣಿ, ತಂಬಿಟ್ಟಿನ ಆರತಿ ಹಾಗೂ ಫಲ-ಪುಷ್ವಗಳನ್ನಿಟ್ಟು ಶಾಸ್ತ್ರಗಳನ್ನು ನೆರವೇರಿಸಿದರು. ಹಿರಿಯ ತಾಯಂದಿರು ಮದುವೆಯ ಹಾಗೂ ತಿಂಗಳ ಮಾಮನ ಮೇಲೆ ಸೋಬಾನೆ ಪದ ಹಾಡಿದರೆ, ಮಹಿಳೆಯರು ವಧು-ವರನಿಗೆ ಆರತಿ ಬೆಳಗಿದರು. ಹುಡುಗರನ್ನು ವಧು-ವರನಂತೆ ಸಿಂಗರಿಸಿದ್ದು, ಸಂಪ್ರದಾಯದಂತೆ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದರು.
ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…
ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…
ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…
2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಬಿಎಲ್‌ಒ ಅಥವಾ…