ಮಲ್ಟಿ ಬ್ರ್ಯಾಂಡ್ ಬೈಕ್ ಶೋರೂಂ ಮಾಲೀಕನಿಂದ ಮಹಾ ವಂಚನೆ

ವೈಟ್ ಫಿಲ್ಡ್ ನಲ್ಲಿರೋ SMRITI MOTORS, SALES & SERVICE ಮಲ್ಟಿ ಬ್ರ್ಯಾಂಡ್ ಬೈಕ್ ಶೋರೂಂ ಮಾಲೀಕನಿಂದ ವಂಚನೆ ಆಗಿದೆ ಎಂದು ಗ್ರಾಹಕರು ದೂರಿದ್ದಾರೆ.

ಕಸ್ಟಮರ್ ಗಳಿಂದ ಲಕ್ಷಗಟ್ಟಲೇ ಅಡ್ವಾನ್ಸ್ ಹಣ ಪಡೆದು ಬೈಕ್ ನೀಡದೇ ಬೈಕ್ ಶೋರೂಂ ಮಾಲೀಕ ವಿಜಯ್ ಕುಮಾರ್ ಸದ್ಯ ಎಸ್ಕೇಪ್ ಆಗಿದ್ದಾನೆ.

ಫುಲ್ ಕ್ಯಾಷ್ ಕಟ್ಟಿರುವವರಿಗೆ ಗೊತ್ತೆ ಆಗದಂತೆ EMIಗೆ ಕನ್ವರ್ಟ್ ಮಾಡಿದ್ದ ಮಾಲೀಕ. ಕೆಲವರಿಗಂತು ಸಿಂಗಲ್ EMI ಗೆ ಡಬಲ್ EMI ಕಟ್ಟುವಂತ ಸ್ಥಿತಿ ತಂದಿಟ್ಟಿದ್ದಾನೆ. ಕೆಲವರಿಗೆ NOC ಕೊಡಿಸುತ್ತೇನೆ ಎಂದು ಮತ್ತೆ EMI ಆಕ್ಟಿವ್ ಮಾಡಿರುವ ಭೂಪ. ಹಳೇ ಲೋನ್ ಜೊತೆ ಖರೀದಿ ಮಾಡದ ಬೈಕ್ ಗೂ ಲೋನ್ ಕಟ್ಟುತ್ತಿರುವ ಕೆಲ ಗ್ರಾಹಕರು‌. ಕಸ್ಟಮರ್ ಗಳ ಬ್ಯಾಂಕ್ ಡಿಟೇಲ್ಸ್ ಪಡೆದು ವಂಚನೆ ಮಾಡುತ್ತಿದ್ದ ವಿಜಯ್ ಕುಮಾರ್.

ಲೋನ್ ಕೊಡುವ ಬ್ಯಾಂಕ್ & ಫೈನಾನ್ಸ್ ಕಂಪನಿಗಳ ಜೊತೆ ಸೇರಿ ಈ ರೀತಿ ವಂಚಿಸಿರೋ ಶಂಕೆ ವ್ಯಕ್ತವಾಗಿದೆ. ವಿಜಯ್ ಕುಮಾರ್ ತಂದಿಟ್ಟ ಪಜೀತಿಗೆ ಕಸ್ಟಮರ್ ಗಳು ಕಂಗಾಲಾಗಿದ್ದಾರೆ. ಪ್ರತಿ ತಿಂಗಳು EMI ಹಣ ಕಟ್ಟುವಂತೆ ಫೈನಾನ್ಸ್ ಕಂಪನಿಗಳು ಕಸ್ಟಮರ್ ಗಳ ಬೆನ್ನತ್ತಿವೆ.

ಸದ್ಯ 21 ಜನರಿಂದ ವೈಟ್ ಫೀಲ್ಡ್ ಠಾಣೆಯಲ್ಲಿ ದೂರಿನ ಆಧಾರದ ಮೇಲೆ ಬೈಕ್ ಶೋರೂಂ ಮಾಲೀಕನ ವಿರುದ್ಧ FIR ದಾಖಲಾಗಿದೆ.

ಇನ್ನೂ ಪತಿ ಕಾಣೆಯಾಗಿದ್ದಾರೆ ಅಂತ 1 ತಿಂಗಳ ಹಿಂದೆ ವೈಟ್ ಫಿಲ್ಡ್ ಠಾಣೆಗೆ ದೂರು ನೀಡಿರುವ ಪತ್ನಿ. ಈ ಹಿನ್ನೆಲೆ ವಿಜಯ್‌ಕುಮಾರ್ ಮತ್ತು ಇನ್ನೊಬ್ಬ ಪಾರ್ಟರ್ನ್ ಕಿಶೋರ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published. Required fields are marked *