ಚಿರತೆ ಮರಿಯೊಂದು ಮರದಲ್ಲಿ ಪ್ರತ್ಯಕ್ಷಗೊಂಡಿದ್ದು, ಸತತವಾಗಿ ಒಂದು ಗಂಟೆಗಳ ಕಾಲ ಹೊಂಗೆ ಮರದ ಕೊಂಬೆಯಲ್ಲೇ ಕುಳಿತಿದೆ.
ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ ಲಕ್ಕಸಂದ್ರ ಕ್ರಾಸ್ ಬಳಿಯಲ್ಲಿ ನಡೆದಿದೆ.
ಚಿರತೆ ಪ್ರತ್ಯಕ್ಷಗೊಂಡಿರುವ ಪರಿಣಾಮ ಜನರಲ್ಲಿ ಆತಂಕ ಉಂಟು ಮಾಡಿದೆ.
ಮರದಲ್ಲಿರುವ ಚಿರತೆ ಮರಿಯನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿಯುತ್ತಿರುವ ಯುವಕರು.
ಸದ್ಯ ಚಿರತೆ ಮರಿ ಭಯದಿಂದ ಮರದಿಂದ ಇಳಿಯದೇ ಅಲ್ಲೇ ಕುಳಿತಿರುವ ದೃಶ್ಯ ಕಂಡುಬಂದಿದೆ.
ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.