ಮರದಲ್ಲಿದ್ದ ಬೆಕ್ಕಿನ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಯುವಕ: ವಿದ್ಯುತ್ ಸ್ಪರ್ಶಿಸಿ ಮರದಲ್ಲೇ ನೇತಾಡಿದ ಮೃತದೇಹ

ನಗರದ ಬಸವ ಭವನದ ಗ್ಯಾರೇಜ್ ಸಮೀಪದಲ್ಲಿ ಮರ ಹತ್ತಿದ್ದ ಬೆಕ್ಕಿನ ಜೀವ ಉಳಿಸಲು ಹೋಗಿ ಮರದ ಮೇಲೆ ಹಾದುಹೋಗಿದ್ದ ವಿದ್ಯುತ್ ಲೈನ್ ಸ್ಪರ್ಶಿಸಿ ತನ್ನ ಪ್ರಾಣವನ್ನೇ ಕಳೆದುಕೊಂಡ ಯುವಕ.

ಶಾಂತಿನಗರ ನಿವಾಸಿ ರೋಷನ್(20) ಮೃತಪಟ್ಟ ಯುವಕ. ಗ್ಯಾರೇಜಿನಲ್ಲಿ ಸಾಕಿದ್ದ ಬೆಕ್ಕು ಹಿಂಭಾಗದಲ್ಲಿ ಮರವೇರಿಲಾಗಿತ್ತು, ಬೆಕ್ಕಿನ ಕೊರಳಲ್ಲಿದ್ದ ಚೈನ್ ಮರಕ್ಕೆ ಸಿಕ್ಕಿಕೊಂಡಿದ್ದರಿಂದ ಬೆಕ್ಕು ಮರದ ಮೇಲೆಯೇ ಚಿರಾಡುತ್ತಿತ್ತು. ಇದನ್ನು ಗಮನಿಸಿದ ರೋಷನ್ ಮರವನ್ನ ಏರಿ ಬೆಕ್ಕನ್ನ ರಕ್ಷಿಸಲು ಮುಂದಾದಗ ಅವಘಡ ಸಂಭವಿಸಿದೆ.

ವಿದ್ಯುತ್ ಸ್ಪರ್ಶದಿಂದ ಮರದಲ್ಲೇ ಜೀವ ಕಳೆದುಕೊಂಡು ನೇತಾಡುತ್ತಿದ್ದ ಯುವಕನ ಮೃತದೇಹ. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯರ ಸಹಾಯದಿಂದ ನೇತಾಡುತ್ತಿದ್ದ ಮೃತದೇಹವನ್ನ ಕೆಳಗೆ ಇಳಿಸಲಾಯಿತು. ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.

Leave a Reply

Your email address will not be published. Required fields are marked *