ಮನ್ ಕಿ ಬಾತ್ ನೇರ ಪ್ರಸಾರ ಕಾರ್ಯಕ್ರಮ: ಬಿಜೆಪಿ ಜೆಡಿಎಸ್‌ ನಾಯಕರು ಭಾಗಿ

ಕೋಲಾರ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ನೇರಪ್ರಸಾರದ ವೀಕ್ಷಣೆ ಕಾರ್ಯಕ್ರಮದ ವ್ಯವಸ್ಥೆಯನ್ನು ಭಾನುವಾರ ಕೋಲಾರ ನಗರದ ಹೊರವಲಯದ ಆರಾಧ್ಯ ಹೋಟಲ್ ನಲ್ಲಿ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ದೇಶದಲ್ಲಿ ರೈತರು, ವ್ಯಾಪಾರಿಗಳು, ಯುವ ಸಮುದಾಯದ ಸೇರಿದಂತೆ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರ ನೇರ ಪ್ರಸಾರ ವೀಕ್ಷಣೆಯಲ್ಲಿ ಜಿಲ್ಲೆಯ ವೈದ್ಯರು, ಕಾಲೇಜು ವಿಧ್ಯಾರ್ಥಿಗಳು, ರೈತರು, ವ್ಯಾಪಾರಿಗಳು ವಕೀಲರು, ಕಾರ್ಮಿಕರು ಭಾಗಿಯಾಗಿದ್ದರು.

ಕಾರ್ಯಕ್ರಮದ ನಂತರ ಮಾಜಿ ಸಂಸದ ಎಸ್ ಮುನಿಸ್ವಾಮಿ ಮಾತನಾಡಿ ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರದ ಜನಪರವಾದ ಯೋಜನೆಗಳ ಕುರಿತು ಗುಣಗಾನ ಮಾಡಿದರು ಅಲ್ಲದೆ ಈ ಹಿಂದೆ ದೇಶದ ಶ್ರೇಷ್ಠ ಪ್ರಶಸ್ತಿಗಳನ್ನ ನೀಡುವುದು, ಕೊರೊನಾದಂತಹ ಕ್ಲಿಷ್ಟಕರ ಸಂದರ್ಭದಲ್ಲಿ ದೇಶವನ್ನು ಮುನ್ನಡೆಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ ವಿಕಸಿತ ಭಾರತದ ಕನಸಿನ ಸಂಕಲ್ಪವನ್ನು ನನಸಾಗಿಸಲು ಎನ್.ಡಿ.ಎ ಸರ್ಕಾರವನ್ನು ಬೆಂಬಲಿಸಬೇಕಾಗಿದೆ ಎಂದರು.

ಕೋಲಾರದ ನೇರ ಪ್ರಸಾರ ವೀಕ್ಷಣೆಯಲ್ಲಿ ಕೋಲಾರ ಸಂಸದ ಮಲ್ಲೇಶ್ ಬಾಬು, ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಶಾಸಕ ಬಿ.ಪಿ ವೆಂಕಟಮುನಿಯಪ್ಪ, ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಮುಖಂಡ ಸಿಎಂಆರ್ ಶ್ರೀನಾಥ್, ಜಿಪಂ ಮಾಜಿ ಸದಸ್ಯ. ಬಿ.ವಿ ಮಹೇಶ್ ಸೇರಿದಂತೆ ಬಿಜೆಪಿ ಜೆಡಿಎಸ್‌ ಮುಖಂಡರು ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *