ಮನೆ ಮುಂದೆ ನಿಲ್ಲಿಸಿದ ಬೈಕ್ ನ್ನು ರಾತ್ರೋರಾತ್ರಿ ಕಳವು ಮಾಡಿದ ಕಳ್ಳರು, ಕಳವು ಮಾಡಿದ ಬೈಕ್ ಅನ್ನು ಸುಟ್ಟು ಹಾಕಿರುವ ವಿಚಿತ್ರ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬೀರನಯ್ಯನಪಾಳ್ಯದ ಗೌಡನ ಕೆರೆ ಬಳಿ ಘಟನೆ ನಡೆದಿದೆ.
ಬೀರನಯ್ಯನಪಾಳ್ಯ ಗ್ರಾಮದ ರಮೇಶ್ ಎಂಬುವರ ಬೈಕ್ ಅನ್ನು ಕಳುವ ಮಾಡಿರುವ ಕಳ್ಳರು, ಕದ್ದ ಬೈಕ್ ಅನ್ನು ಗ್ರಾಮದ ಹೊರಗಿನ ಗೌಡನಕೆರೆ ಬಳಿ ಸುಟ್ಟು ಹಾಕಿದ್ದಾರೆ. ಘಟನೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾನು ನಮ್ಮ ಗ್ರಾಮದಲ್ಲಿ ಕೋಳಿ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನನ್ನ ದಿನನಿತ್ಯದ ಓಡಾಟಕ್ಕೆ, ವ್ಯಾಪಾರಕ್ಕೆ ನೀಲಿ ಬಣ್ಣದ ಬಜಾಜ್ ಡಿಸ್ಕವರ್ ಮೋಟರ್ ಸೈಕಲ್ ಅನ್ನು ಹೊಂದಿರುತ್ತೇನೆ. ಡಿ.6ರಂದು ನಾನು ಎಂದಿನಂತೆ ಕೋಳಿ ವ್ಯಾಪಾರ ಮಾಡಿಕೊಂಡು ರಾತ್ರಿ 10 ಗಂಟೆಯಲ್ಲಿ ಮನೆಗೆ ಬಂದು ಡಿಸ್ಕವರ್ ಮೋಟರ್ ಸೈಕಲ್ ಅನ್ನು ನಮ್ಮ ಮನೆಯ ಮುಂದೆ ನಿಲ್ಲಿಸಿ ಸೈಡ್ ಲಾಕ್ ಮಾಡಿಕೊಂಡು ಮನೆಯಲ್ಲಿ ಮಲಗಿಕೊಂಡೆ. ನಂತರ ಡಿ.7ರಂದು ಬೆಳಿಗ್ಗೆ 5 ಗಂಟೆಗೆ ಮಾಮೂಲಿನಂತೆ ವ್ಯಾಪಾರಕ್ಕೆ ಹೋಗಲು ಮನೆಯಿಂದ ಈಚೆ ಬಂದು ನನ್ನ ಗಾಡಿಯನ್ನು ನೋಡಿದಾಗ ಬೈಕ್ ನಿಲ್ಲಿಸಿದ ಜಾಗದಲ್ಲಿ ಕಾಣಲಿಲ್ಲ. ನಾನು ಗಾಬರಿಯಲ್ಲಿ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದೆನು. ಗ್ರಾಮದಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ನಾನು ಗಾಬರಿಯಿಂದ ಹುಡುಕುತ್ತಿದ್ದಾಗ ನಮ್ಮ ಸಂಬಂಧಿಕರೊಬ್ಬರು ನನಗೆ ಫೋನ್ ಮಾಡಿ ನಿನ್ನ ಗಾಡಿಯನ್ನು ಕೆರೆಯಲ್ಲಿ ಯಾರೋ ಬೆಂಕಿ ಹಾಕಿ ಸುಟ್ಟು ಹಾಕಿರುತ್ತಾರೆ. ಕೂಡಲೇ ಕೆರೆಯ ಹತ್ತಿರ ಬಾ ಎಂದು ತಿಳಿಸುತ್ತಾರೆ. ತಕ್ಷಣ ನಾನು ನಮ್ಮೂರಿನ ಪಕ್ಕದಲ್ಲಿರುವ ಗೌಡನ ಕೆರೆಯ ಹತ್ತಿರ ಹೋಗಿ ನೋಡಿದಾಗ ರಸ್ತೆಯಿಂದ ಸುಮಾರು 300 ಮೀಟರ್ ಕೆರೆಯ ಒಳಗೆ ನನ್ನ ಬೈಕಿಗೆ ಯಾರೋ ಬೆಂಕಿ ಇಟ್ಟು ಸುಟ್ಟು ಹಾಕಿರುತ್ತಾರೆ. ಬೆಂಕಿಯ ಕೆನ್ನಾಲಿಗೆಗೆ ನನ್ನ ಬೈಕ್ ಸಂಪೂರ್ಣ ಸುಟ್ಟು ಹೋಗಿರುತ್ತೆ. ನನ್ನ ಬೈಕಿನ ಹಿಂಭಾಗದ ಚಕ್ರವನ್ನು ಬಿಚ್ಚಿಕೊಂಡು ಹೋಗಿರುತ್ತಾರೆ ಎಂದು ರಮೇಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…
ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…
ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…
ರಾಹುಲ್ ಗಾಂಧಿ...... ಬಿಹಾರ ಚುನಾವಣೆಯಲ್ಲಿ, ಸೀಟುಗಳ ಲೆಕ್ಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ನಂತರ ಶ್ರೀ ರಾಹುಲ್ ಗಾಂಧಿಯವರ ನಾಯಕತ್ವದ ಸಾಮರ್ಥ್ಯದ…
ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…
ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…