ಮನೆ ಮುಂದೆ ಆಟವಾಡುತ್ತಿದ್ದ ಮಗು‌ ಮೇಲೆ ಬೀದಿ ನಾಯಿಗಳ ದಾಳಿ: ತೀವ್ರವಾಗಿ ಗಾಯಗೊಂಡ ಬಾಲಕ: ಆಸ್ಪತ್ರೆಗೆ ದಾಖಲು

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಮತ್ತೊಂದು ಬೀದಿ ನಾಯಿಗಳ ದಾಳಿ ಘಟನೆ ವರದಿಯಾಗಿದೆ. ತನ್ನ ನಿವಾಸದ ಹೊರಗೆ ಆಟವಾಡುತ್ತಿದ್ದ ಬಾಲಕನನ್ನು ಸುತ್ತುವರಿದ ಬೀದಿ ನಾಯಿಗಳು ಆತನ ಮೇಲೆ ದಾಳಿ ನಡೆಸಿವೆ.

ಬಾಲಕ ರಕ್ತಸ್ರಾವದಿಂದ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. 2 ದಿನಗಳ ಹಿಂದೆ ಸಂಗಾರೆಡ್ಡಿಯಲ್ಲಿ ಬೀದಿ ನಾಯಿಗಳ ದಾಳಿಗೆ 6 ವರ್ಷದ ಬಾಲಕ ಮೃತಪಟ್ಟಿದ್ದ. ಮಕ್ಕಳು ಹೊರಗೆ ಆಟವಾಡುವಾಗ ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು.

Leave a Reply

Your email address will not be published. Required fields are marked *