ಮನೆ ಬಾಗಿಲು ಒಡೆದು ನಗ, ನಗದು ದೋಚಿದ ಕಳ್ಳರು

ಖತರ್ನಾಕ್ ಕಳ್ಳರು ಮನೆಯ ಬಾಗಿಲು ಒಡೆದು ಲಕ್ಷಾಂತರ ರೂ. ಮೌಲ್ಯದ ನಗ, ನಗದು ಕದ್ದು ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಹುಡ್ಯ ಗ್ರಾಮದಲ್ಲಿರುವ ಸೋಮಣ್ಣ ಎನ್ನುವವರ ಮನೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ನಿನ್ನೆ ಸೋಮಣ್ಣ ಅವರ ಕುಟುಂಬ ಮೊಮ್ಮಗನ ಜನ್ಮದಿನದ ಕಾರಣ ಸುರದೇನಪುರಕ್ಕೆ ತೆರಳಿದ್ದರಂತೆ ಇದನ್ನೆ ಹೊಂಚು ಹಾಕಿರುವ ದುಷ್ಕರ್ಮಿಗಳು, ಮನೆ ಬಾಗಿಲು, ಬೀಗವನ್ನು ಆರೆಕೋಲು ಬಳಸಿ ಮೀಟಿ ಮನೆಗೆ ನುಗ್ಗಿ, ಸುಮಾರು 130 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ ,ಎಟಿಎಂ ಕಾರ್ಡ್ ಗಳು, 50 ಸಾವಿರ ನಗದು ಹಣವನ್ನು ಕದ್ದು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ…

ಇನ್ನೂ ಒಡವೆಗಳನ್ನು ಇಡಲಾಗಿದ್ದ ಬ್ಯಾಗ್‌ ಹಾಗೂ ಬಾಕ್ಸ್‌ಗಳನ್ನು ಮನೆಯ ಸಮೀಪದಲ್ಲಿಯೇ ಎಸೆದು ಹೋಗಿದ್ದಾರೆಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇಂದು ಬೆಳಗ್ಗೆ ಸೋಮಣ್ಣ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಚಿನ್ನಾ, ಬೆಳ್ಳಿ, ನಗದು ಕಳೆದುಕೊಂಡ ಮನೆಯವರು ಚಿಂತಾಕ್ರಾಂತರಾಗಿದ್ದಾರೆ. ಪೊಲೀಸರು ಕಳ್ಳರ ಜಾಡು ಪತ್ತೆ ಮಾಡಲು ವಿವಿಧ ಆಯಾಮಗಳಲ್ಲಿ ತನಿಖೆ ಪ್ರಾರಂಭಿಸಿದ್ದಾರೆ…

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!