
ಬಂಗಾರಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಯ ಬಾಗಿಲು ಒಡೆದು ಕೋಟ್ಯಾಂತರ ರೂಪಾಯಿ ಚಿನ್ನಾಭರಣ ಹಾಗೂ ಹಣ ದೋಚಿದ್ದ ಅಂತಾರಾಜ್ಯ ಕಳ್ಳನನ್ನು ಬಂಧನ ಮಾಡಲಾಗಿದೆ..
ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಜ್ಯೂವೆಲ್ಲರಿ ಮಾಲೀಕ ಸುನಿಲ್ ಕುಮಾರ್ ಮನೆಯಲ್ಲಿ ಕಳ್ಳತನ ನಡೆದಿತ್ತು. ಆಗಸ್ಟ್ 4, 2025 ರಂದು 1,355 ಗ್ರಾಂ ಚಿನ್ನಾಭರಣ ಹಾಗೂ 95,000 ನಗದು ದೋಷಚಲಾಗಿತ್ತು.
ಆಂಧ್ರದ ಗುಂಟೂರು ಜಿಲ್ಲೆ ರಾಯಪಾಟಿ ವೆಂಕಯ್ಯ ನನ್ನು ಬಂಧಿಸಲಾಗಿದೆ.. ಬಂಧಿತನಿಂದ ಸುಮಾರು ಒಂದು ಕೋಟಿ ಐದು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ.