ಮನೆಗೆ ಬೆಂಕಿ‌ಬಿದ್ದು ವರ್ಷವೇ ಕಳೆದಿದೆ: ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬದ ನೆರವಿಗೆ ಯಾರೋಬ್ಬರೂ ಧಾವಿಸದಿರುವುದು ಶೋಚನೀಯ

ಕಳೆದ ವರ್ಷದ ಹಿಂದೆ ಬಡ ಕುಟುಂಬ ವಾಸ ಮಾಡುತ್ತಿದ್ದ‌ ಮನೆಗೆ ಆಕಸ್ಮಿಕವಾಗಿ ಬೆಂಕಿ‌ಬಿದ್ದು ಮನೆಯಲ್ಲಿದ್ದ ವಸ್ತುಗಳೆಲ್ಲವೂ ನಾಶವಾಗಿದ್ದವು. ಮಕ್ಕಳ ವಿದ್ಯಾಭ್ಯಾಸಕ್ಕಿಟ್ಟಿದ್ದ ಹಣ, ಆಹಾರ ಧಾನ್ಯ, ದಾಖಲೆಗಳು ಸೇರಿದಂತೆ ಜೀವನಾವಶ್ಯಕ ವಸ್ತುಗಳು ಬೆಂಕಿಯ ಜ್ವಾಲೆಯಲ್ಲಿ ಉರಿದು ಬೂದಿಯಾಗಿದ್ದವು. ಘಟನೆ ನಡೆದು ಒಂದು ವರ್ಷ ಕಳೆದರೂ ಬಡ ಕುಟುಂಬದ ನೆರವಿಗೆ ಯಾರೋಬ್ಬರೂ ಧಾವಿಸದಿರುವುದು ಶೋಚನೀಯ ಸಂಗತಿ.

ಸರ್ಕಾರ ಬಡತನ ನಿರ್ಮೂಲನೆಗಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಲೇ ಇರುತ್ತದೆ. ಸರ್ವರಿಗೂ ಸೂರು ಇರಬೇಕು ಎಂದು ಹಲವಾರು ವಸತಿ ಯೋಜನೆಗಳನ್ನು ಸಹ ರೂಪಿಸುತ್ತಿರುತ್ತದೆ. ಯಾರೂ ಸಹ ಹಸಿವಿನಿಂದ ಸಾಯಬಾರದು ಎಂದು ಆಹಾರ ಭದ್ರತಾ ಕಾಯ್ದೆ ಸೇರಿದಂತೆ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತದೆ. ಆದರೆ, ಇಲ್ಲೊಂದು ಕಡು ಬಡ ಕುಟುಂಬ ಬೆಂಕಿಗಾಹುತಿಯಾಗಿದ್ದ ಮನೆಯನ್ನು ಸರಿಪಡಿಸಿಕೊಳ್ಳಲಾಗದೇ ಸಂಕಷ್ಟದಲ್ಲಿದೆ.

ಮೊದಲೇ ಕಿತ್ತು ತಿನ್ನುವ ಬಡತನ, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಆ ಬಡ ಕುಟುಂಬ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಮಲಗಿತ್ತು. ಇದೆಲ್ಲದರ ಜೊತೆಗೆ ಮತ್ತೊಂದು ದೊಡ್ಡ ಸಮಸ್ಯೆ ಸಿಡಿಲು ಬಡಿದಂತೆ ಎರಗಿತು, ಇದ್ದ ಸೂರು ಬೆಂಕಿಗಾಹುತಿಯಾಗಿ ಇಡೀ ಕುಟುಂಬ ಬೀದಿಗೆ ಬಿದ್ದಿದೆ.

ಕಷ್ಟನೋ ಸುಖನೋ ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದ ಮಹಿಳೆಯನ್ನು ಮನೆಗೆ ಬಿದ್ದ ಬೆಂಕಿ ತಾಯಿ ಮಕ್ಕಳನ್ನು ಏಕಾಏಕಿ ಬೀದಿಗೆ ನಿಲ್ಲುವಂತೆ ಮಾಡಿದೆ.

ಹೌದು, ಹೀಗೆ ಸುಟ್ಟ ಮನೆ, ಮಾಸಿದ ಹಳೇ ಬಟ್ಟೆಯಲ್ಲೇ ನಿಂತಿರುವ ಮಕ್ಕಳು, ಮಕ್ಕಳಿಗೆ ಹೊಟ್ಟೆ ತುಂಬಿಸಲು ಆಗದ ಪರಿಸ್ಥಿತಿಯಲ್ಲಿದ್ದೇನೆ ಎಂದು ಕಣ್ಣೀರು ಹಾಕುತ್ತಿರುವ ಮಹಿಳೆ, ಈ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಪಂಚಾಯತಿಯ ಭಕ್ತರಹಳ್ಳಿ ಗ್ರಾಮದಲ್ಲಿ.

ಲಲಿತಾ ಬಾಯಿ ಎಂಬ ದಲಿತ ಮಹಿಳೆ ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದರು. 3 ಹೆಣ್ಣು ಮಕ್ಕಳು, 2 ಗಂಡು ಮಕ್ಕಳು. ಈಕೆಯ ಪತಿ ಅನಾರೋಗ್ಯದಿಂದ ತೀರಿಕೊಂಡಿದ್ದಾನೆ. ಇದ್ದ ಒಂದು‌ ಹಳೆಯ ಹಂಚಿನ ಮನೆಯಲ್ಲಿ ಮಕ್ಕಳನ್ನು‌ ಸಾಕಿಕೊಂಡಿದ್ದಳು.

ಲಲಿತಾ ಬಾಯಿ ಎಂದಿನಂತೆ ಬೆಳಗ್ಗೆ ಎದ್ದು ಕೂಲಿಗೆ ಹೋಗಿದ್ದಾಳೆ. ಮಕ್ಕಳು ಮಧ್ಯಾಹ್ನದ ಬಿಸಿ ಊಟ ತಿನ್ನಲು ಶಾಲೆ ಬಳಿ ತೆರಳಿದ್ದರು. ಸಂಜೆ ಕೂಲಿ ಮುಗಿಸಿ ಮನೆಗೆ ಬಂದ ಲಲಿತಾ ಬಾಯಿಗೆ ಬರಸಿಡಿಲು ಬಡಿದಂತಾಗಿತ್ತು.

ಮನೆಗೆ ಬೆಂಕಿ ಬಿದ್ದು ಮನೆಯಲ್ಲಿ ಇದ್ದ ರಾಗಿ, ಅಕ್ಕಿ, ಅಡುಗೆ ಸಾಮಗ್ರಿಗಳ ಜೊತೆಯಲ್ಲಿ ಬೀರು, ಚೇರ್ ಎಲ್ಲವೂ ಕೂಡ ಸಂಪೂರ್ಣವಾಗಿ ಬೆಂಕಿಗಾಹುತಿ ಆಗಿತ್ತು. ಬೆಂಕಿ ಸಂಪೂರ್ಣವಾಗಿ ಮನೆಯ ತುಂಬೆಲ್ಲಾ ಆವರಿಸಿದ ಕಾರಣ, ಹಂಚಿಗೆ ಹಾಕಿದ್ದ ಮರದ ದಿಮ್ಮಿಗಳೂ ಸಹ ಸಂಪೂರ್ಣ ಸುಟ್ಟು ಹೋಗಿದ್ದವು. ಅಲ್ಲದೆ ಬಟ್ಟೆ-ಬರೆ ಇಡುವ ಪೆಟ್ಟಿಗೆ ನಾಶವಾದ ಹಿನ್ನೆಲೆ ಮಕ್ಕಳಿಗೆ ತೊಡಲು ಬಟ್ಟೆಗಳೇ ಇಲ್ಲದಂತಾಗಿತ್ತು. ಸದ್ಯ ತಾಯಿ-ಮಕ್ಕಳು ಉಟ್ಟ ಬಟ್ಟೆಯಲ್ಲೇ ಕಾಲ ಕಳೆಯುವಂತಾಗಿದೆ. ಹರಿದ ಬಟ್ಟೆಯಲ್ಲಿರುವ ಮಕ್ಕಳಿಗೆ ಒಂದು ಜೊತೆ ಬಟ್ಟೆಯನ್ನೂ ಕೊಡಿಸಲಾಗದ ಸ್ಥಿತಿಯಲ್ಲಿ ತಾಯಿ ಇದ್ದಾಳೆ.

ಅಡುಗೆ ಮಾಡಿಕೊಳ್ಳಲು ಯಾವ ಪಾತ್ರೆ ಸಮಾನುಗಳು‌ ಇಲ್ಲದೇ ಇರುವುದರಿಂದ ಗ್ರಾಮದಲ್ಲೇ ಇರುವ ಅನಾಥ ಆಶ್ರಮದಲ್ಲಿ ಎರಡು ಹೊತ್ತು ಊಟ ಮಾಡಿ ಮಲಗುವಂತಾಗಿದೆ. ಹೇಗೋ ಹಂಚನ್ನು ಸರಿಪಡಿಸಿಕೊಂಡಿದ್ದರು. ಸದ್ಯ ಮಳೆ ಬಂದರೆ ಮನೆ ಸೋರುತ್ತದೆ. ಮಳೆಗೆ ಸೋರುವ ಮನೆಯಲ್ಲಿಯೇ ಚಿಕ್ಕಮಕ್ಕಳನ್ನು ಹಾಕಿಕೊಂಡು ಮಹಿಳೆ ಜೀವನ ಸಾಗಿಸುತ್ತಿದ್ದಾಳೆ.

ಇಷ್ಟೆಲ್ಲಾ ಆದರೂ ಕೂಡ ನಮಗೂ ಇದಕ್ಕೂ ಸಂಬಂಧ ಇಲ್ಲ ಎಂಬಂತೆ ಅಧಿಕಾರಿಗಳು, ಕಂಡೂ ಕಾಣದಂತಿರುವ ರಾಜಕಾರಣಿಗಳ ಅಸಡ್ಡೆ ಎದ್ದು ಕಾಣುತ್ತಿದೆ.

ನಮ್ದು ಬಡಕುಟುಂಬ, ಐದು ಮಂದಿ ಮಕ್ಕಳು, ಇತ್ತೀಚೆಗೆ ಆನಾರೋಗ್ಯದಿಂದ ಗಂಡ ತೀರಿಕೊಂಡಿದ್ದಾನೆ. ಈ ದು:ಖದಲ್ಲಿರುವಾಗಲೇ ಮನೆಗೆ ಬೆಂಕಿ ಬಿದ್ದಿದೆ. ಬೆಂಕಿಗಾಹುತಿಯಾಗಿರುವ ಮನೆಯನ್ನು ಸರಿಪಡಿಸಿಕೊಳ್ಳುವಷ್ಟು ನನ್ನ ಬಳಿ ಹಣವಿಲ್ಲ. ಕೂಲಿ ಮಾಡಿ ಐವರು ಮಕ್ಕಳನ್ನು ಸಾಕಬೇಕು. ಈಗ ಮಳೆಗೆ ಮನೆ ಸೋರುತ್ತಿದೆ. ದಯಮಾಡಿ ನಮಗೆ ಸೂರು ಕಲ್ಪಿಸಿಕೊಡಿ ಎಂದು ಲಲಿತಾಬಾಯಿ ಮನವಿ ಮಾಡಿದ್ದಾರೆ.

ಒಟ್ಟಾರೆ, ಕೂಲಿ ನಾಲಿ ಮಾಡಿ ಮಕ್ಕಳಿಗೆ ಮೂರು ಹೊತ್ತು ಹೊಟ್ಟೆ ತುಂಬಾ ಊಟ ಹಾಕುತ್ತಿದ್ದ ಮಹಿಳೆ ಈಗ ಮಕ್ಕಳ ತುತ್ತಿನ ಚೀಲ ತುಂಬಿಸಲು ಪರದಾಡುತ್ತಿದ್ದಾಳೆ. ಜೊತೆಗೆ ಇದ್ದ ಸೂರು ಕಳೆದುಕೊಂಡು ತಾಯಿ-ಮಕ್ಕಳು ಬೀದಿಗೆ ಬಂದಿದ್ದಾರೆ. ಕಡು ಕಷ್ಟದಲ್ಲಿರುವ ಲಲಿತಾಬಾಯಿ ಕುಟುಂಬಕ್ಕೆ ಅಧಿಕಾರಿಗಳ ಸಹಕಾರದ ಜೊತೆಗೆ ಸಹೃದಯಿಗಳ ಸಹಾಯ ಅಗತ್ಯವಾಗಿದೆ ಯಾರಾದರೂ ಮಹಿಳೆಯ ಸಂಕಷ್ಟಕ್ಕೆ ಸ್ಪಂದಿಸುತ್ತಾರಾ..? ಕಾದು ನೋಡಬೇಕಿದೆ.

Ramesh Babu

Journalist

Recent Posts

ಕೆ.ಸಿ.ವ್ಯಾಲಿಯಿಂದ ಜಿಲ್ಲೆಯ ರೈತರ ಬದುಕು ಹಸನು- ಕಾಂಗ್ರೆಸ್‌ ಮುಖಂಡ ಜನಪಹಳ್ಳಿ ನವೀನ್‌

ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್‌ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…

7 hours ago

ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು  ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…

8 hours ago

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆ: ಮಕ್ಕಳು, ಶಿಕ್ಷಕ ಭಾವುಕ

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…

10 hours ago

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.‌ ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…

18 hours ago

ಚುನಾವಣಾ ಫಲಿತಾಂಶದ ವಿಶ್ಲೇಷಣೆ…..

ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…

20 hours ago

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್: ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸಲು ಸಭೆ

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…

1 day ago