ತಾಲೂಕಿನ ಮಧುರೆ ಸುತ್ತಮುತ್ತಲಿನ ಹೊನ್ನಾವರ, ರಾಮದೇನಹಳ್ಳಿ ಕಲ್ಲೋಡು, ಕೋಡಿಹಳ್ಳಿ, ಚೆನ್ನಾದೇವಿ ಆಗ್ರಹಾರ ಸೇರಿದಂತೆ ಇತರೆ ಗ್ರಾಮಗಳಲ್ಲಿ ಸತತವಾಗಿ ಒಂದು ಗಂಟೆ ಕಾಲ ಎಡಬಿಡದೆ ಸುರಿದ ಭಾರೀ ಮಳೆ. ಭಾರೀ ಮಳೆಯಿಂದಾಗಿ ತತ್ತರಿಸಿದ ಜನ.
ಇಂದು ಸಂಜೆ ದಿಢೀರ್ ಆಗಿ ಬಂದ ಮಳೆಗೆ ತಗ್ಗು ಪ್ರದೇಶಗಳಿಗೆ ರಭಸವಾಗಿ ಹರಿದ ಮಳೆ ನೀರು. ಭಾರೀ ಮಳೆಯಿಂದಾಗಿ ಚಿಕ್ಕಮಧುರೆ ಕೆರೆಗೆ ಒಂದು ಅಡಿಯಷ್ಟು ನೀರು ಬಂದಿದೆ ಎಂದು ತಿಳಿದುಬಂದಿದೆ. ರಸ್ತೆಯಲ್ಲಿ ನಿಂತಿರುವ ನೀರಿನಿಂದ ವಾಹನ ಸವಾರರು ಪರದಾಡುವಂತಾಯಿತು.
ಹವಾಮಾನ ವೈಪರಿತ್ಯದಿಂದಾಗಿ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೋಚಾ ಸೈಕ್ಲೋನ್ ನಂತರ ಬಿಪರ್‌ಜಾಯ್ ಚಂಡಮಾರುತ ಸೃಷ್ಟಿಯಾಗಿದ್ದು, ಬಿಪರ್‌ಜಾಯ್ ಎಫೆಕ್ಟ್ ನಾಳೆಯಿಂದ ಜೂನ್ 10ರವರೆಗೆ ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ಮೂರು ದಿನ ಜೋರು ಮಳೆಯಾಗುವ ಸಾಧ್ಯತೆ ಇದೆ.