ತಾಲೂಕಿನ ಮಧುರೆ ಹೋಬಳಿಯ ಕೋಡಿಪಾಳ್ಯ ಸಮೀಪದಲ್ಲಿಂದು ಸಂಜೆ ಸುಮಾರು 5 ಗಂಟೆಯಲ್ಲಿ ಮಧುರೆ ಕೆರೆ ಏರಿ ತಿರುವಿನಲ್ಲಿ ಸಿಮೆಂಟ್ ಬಲ್ಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.
ದೊಡ್ಡಬಳ್ಳಾಪುರದಿಂದ ನೆಲಮಂಗಲ ಕಡೆಗೆ ಹೋಗುವಾಗ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಿಮೆಂಟ್ ಬಲ್ಕರ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಲಾರಿ ಸಂಪೂರ್ಣ ಜಖಂಗೊಂಡಿದೆ.
ತಿರುವಿನಲ್ಲಿದ್ದ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಾನಿಯಾಗಿದೆ.
ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ದೌಡಾಯಿಸಿ ಹಾನಿಯಾಗಿರುವ ವಿದ್ಯುತ್ ಕಂಬವನ್ನು ತೆರವು ಮಾಡುವ ಕಾರ್ಯ ಮಾಡುತ್ತಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇಂತಹದ್ದೇ ಘಟನೆ ಇದೇ ಸ್ಥಳದಲ್ಲಿ ಅದೇ ಕಂಬಕ್ಕೆ 2024ರ ಡಿಸೆಂಬರ್ 22ರಂದು ಸಿಮೆಂಟ್ ಬಲ್ಕರ್ ಲಾರಿ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿತ್ತು.