ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ 2025ನೇ ಸಾಲಿನ (MPL) ಮಧುರನಹೊಸಹಳ್ಳಿ ಪ್ರಿಮೀಯರ ಲೀಗ್ ಸೀಸನ್ :-2 ಕ್ರಿಕೆಟ್ ಟೂರ್ನಿಮೆಂಟ್ ನಡೆಸಲಾಯಿತು.
3 ಟೀಮ್‌ಗಳ ನಡುವೆ 2 ದಿನಗಳ ಕಾಲ ನಡೆದ ಕ್ರಿಕೆಟ್ ಟೂರ್ನಿಮೆಂಟ್‌ನಲ್ಲಿ ಮಧುರನಹೊಸಹಳ್ಳಿ ರಾಯಲ್ ಲೆಜೆಂಡ್ಸ್ , ಮಾರುತಿ ಕ್ರಿಕೆಟ್ ಕ್ಲಬ್ ಬಾಯ್ಸ್, ಮಾರುತಿ ಯೂತ್ಸ್ ಕ್ರಿಕೆಟ್ ತಂಡಗಳ ನಡುವೆ ನಡೆದ ಕ್ರಿಕೆಟ್ ಟೂರ್ನಿಮೆಂಟ್ ನಲ್ಲಿ ಮಾರುತಿ ಯೂತ್ಸ್ ಕ್ರಿಕೆಟ್ ತಂಡವು ಉತ್ತಮ ಆಟವನ್ನು ಆಡಿ ಮೊದಲ ಬಹುಮಾನ ಹಾಗೂ ಆಕರ್ಷಕ ಟ್ರೋಫಿ, 10.000 ರೂ. ನಗದು ಪಡೆದುಕೊಂಡಿದ್ದಾರೆ.
ಮಾರುತಿ ಕ್ರಿಕೆಟ್ ಕ್ಲಬ್ ಬಾಯ್ಸ್ 2ನೇ ಬಹುಮಾನ, ಆಕರ್ಷಕ ಟ್ರೋಫಿ ಮತ್ತು 7.500 ರೂ. ನಗದು ಪಡೆದುಕೊಂಡಿದ್ದಾರೆ.
ಮಧುರನಹೊಸಹಳ್ಳಿ ರಾಯಲ್ ಲೆಜೆಂಡ್ಸ್ 3ನೇ ಸ್ಥಾನದಲ್ಲಿ ಆಕರ್ಷಕ ಟ್ರೋಫಿ, ಮತ್ತು 5.000 ರೂ. ನಗದು ಬಹುಮಾನ ಪಡೆದುಕೊಂಡಿದ್ದಾರೆ.