ಮದ್ಯಪಾನ ಮತ್ತು ತಂಬಾಕು ಸೇವನೆ ಮುಕ್ತ ಜೀವನಕ್ಕೆ ಒತ್ತು ನೀಡಿ- ಟಿಬಿ ಚಿಕಿತ್ಸಾ ಮೇಲ್ವಿಚಾರಕ ಆನಂದ್ ಸೂಚನೆ

ಇಂದು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ದೊಡ್ಡಬಳ್ಳಾಪುರದ ಪುಷ್ಪಾಂಡಜ ಗುರುಕುಲ ಆಶ್ರಮದಲ್ಲಿ ಆಯೋಜಿಸಿದ್ದ ಮಧ್ಯ ವರ್ಜನ ಶಿಬಿರದಲ್ಲಿ ಸಾರ್ವಜನಿಕ ಆಸ್ಪತ್ರೆ ದೊಡ್ಡಬಳ್ಳಾಪುರ ಕ್ಷಯ ರೋಗ ಘಟಕದ ವತಿಯಿಂದ ಶಿಬಿರಾರ್ಥಿಗಳಿಗೆ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಹಿರಿಯ ಟಿಬಿ ಚಿಕಿತ್ಸಾ ಮೇಲ್ವಿಚಾರಕರಾದ ಆನಂದ್ ಮಾತನಾಡಿ, ಮದ್ಯ ವ್ಯಸನಿಗಳಲ್ಲಿ ಟಿ ಬಿ ಕಾಯಿಲೆಯು ಹೆಚ್ಚು ಬೇಗನೆ ಬರುವ ಸಾದ್ಯತೆಯಿರುತ್ತದೆ. ಆದ್ದರಿಂದ ಮದ್ಯಪಾನ ಮತ್ತು ತಂಬಾಕು ಉತ್ಪನ್ನಗಳನ್ನು ಸೇವಿಸುವುದನ್ನು ಬಿಡಬೇಕು ಎಂದು ತಿಳಿಸಿದರು.

ಈಗಾಗಲೇ ಯಾರಿಗಾದರೂ ಟಿ ಬಿ ಲಕ್ಷಣಗಳಾದ ಸತತ ಕೆಮ್ಮು , ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳು ಕಂಡುಬಂದರೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

ಮೋಜು ಮಸ್ತಿ ಮುಂತಾದ ಹಲವಾರು ಕಾರಣಗಳಿಂದ ಮದ್ಯಪಾನ ಶುರುಮಾಡಿ ನಂತರ ವ್ಯಸನಿಗಳಾಗಿ ಜೀವನವನ್ನೇ ಹಾಳುಮಾಡಿಕೊಳ್ಳತ್ತಿದ್ದರೆ ಇಂತಹ ಶಿಬಿರಗಳು ಆಯೋಜಿಸುವುದರಿಂದ ವ್ಯಸನ ಮುಕ್ತರನ್ನಾಗಿ ಪರಿವರ್ತಿಸಬಹುದೆಂದು ನವೋದಯ ಟ್ರಸ್ಟಿನ ಜನಾರ್ದನ ತಿಳಿಸಿದರು.

ಈ ವೇಳೆ ಗಣೇಶ್, ಯುವರಾಜ್, ಕ್ಷಯ ರೋಗ ವಿಭಾಗದ ಸಂದರ್ಶಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!