ಮದ್ದೂರಮ್ಮ, ಮಹೇಶ್ವರಮ್ಮ ದೇವತೆಗಳಿಗೆ ಬೆಲ್ಲದಾರತಿ

ತಾಲೂಕಿನ ಪಾಲ್ ಪಾಲ್ ದಿನ್ನೆ ಗ್ರಾಮದಲ್ಲಿರುವ ಮದ್ದೂರಮ್ಮ ಹಾಗೂ ಮಹೇಶ್ವರಮ್ಮ ದೇವರಿಗೆ ಊರಿನ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ, ಬೆಲ್ಲದಾರತಿ ಬೆಳಗುವ ಮೂಲಕ ಭಕ್ತಿಯಲ್ಲಿ ಮಿಂದೆದ್ದಿದ್ದಾರೆ.

ಗ್ರಾಮದ ಹೊರವಲಯದಲ್ಲಿರುವ‌ ಸರಿ ಸುಮಾರು 50-60‌ವರ್ಷಗಳ ಇತಿಹಾಸವಿರುವ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ 45 ದಿನಗಳ‌ ಕಾಲ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಮದ್ದೂರಮ್ಮ ಹಾಗೂ ಮಹೇಶ್ವರಮ್ಮ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡುವ ಮೂಲಕ ಗ್ರಾಮಕ್ಕೆ ಕರೆತರಲಾಯಿತು.

ಊರಿನ ಮಹಿಳೆಯರು ಬೆಲ್ಲದಾರತಿ ಬೆಳಗುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಒಟ್ಟಿನಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತ್ತು. ಈ ಸಂಭ್ರಮವನ್ನ ಕಣ್ಣುತುಂಬಿಕೊಳ್ಳಲು ನಾನಾ ಕಡೆಯಿಂದ ಭಕ್ತರು ಆಗಮಿಸಿದ್ದರು.

Leave a Reply

Your email address will not be published. Required fields are marked *