ಮದುವೆಯಾಗಿ ಮೂರು ವರ್ಷಗಳಾದರೂ ಮಕ್ಕಳಾಗಿಲ್ಲವೆಂದು ಕಲಹ: ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆಗೈದ ಪತಿ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಮದುವೆಯಾಗಿ ಮೂರು ವರ್ಷಗಳಾದರೂ ಮಕ್ಕಳಾಗಿಲ್ಲವೆಂದು ಉಂಟಾದ ಗೃಹ ಕಲಹದ ಹಿನ್ನೆಲೆ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ.

ರಾಜೇಶ್ವರಿ ಫಕೀರಪ್ಪ ಗಿಲಕ್ಕನವರ (21) ಎಂಬ ಯುವತಿ ಪತಿ ಫಕೀರಪ್ಪ ಗಿಲಕ್ಕನವರಿಂದ ಹತ್ಯೆಯಾಗಿದ್ದಾಳೆ.

ಕೊಲೆ ಬಳಿಕ ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆಂದು ಪತಿ ಸಂಬಂಧಿಕರಿಗೆ ಸುಳ್ಳು ಮಾಹಿತಿ ನೀಡಿದ್ದಾನೆ.

ಅಂತ್ಯಕ್ರಿಯೆಗೆ ಬಂದ ಪೋಷಕರು ಮೃತದೇಹದ ಕೊರಳಲ್ಲಿ ಗಾಯದ ಗುರುತು ಕಂಡು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೈಲಹೊಂಗಲ ಠಾಣೆ ಪೊಲೀಸರು ಇದು ಕೊಲೆ ಎಂಬುದನ್ನು ದೃಢಪಡಿಸಿ ಆರೋಪಿ ಫಕೀರಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಎತ್ತಾ ಸಾಗುತ್ತಿದೆ ಸಮಾಜ ವಿದ್ಯೆ ಬುದ್ದಿ ಇಲ್ಲದ ಈ ಪಕೀರನಿಗೆ ಹೆಣ್ಣು ಕೊಟ್ಟು ಮದುವೆ ಮಾಡಿ ಆ ಹೆಣ್ಣುಮಗಳ ತಂದೆ ತಾಯಿಯರಿಗೆ ನೋವು ಪಾಪ….

Leave a Reply

Your email address will not be published. Required fields are marked *

error: Content is protected !!