Categories: ಕೋಲಾರ

ಮತ ಕಳ್ಳತನ: ಬಿಜೆಪಿ, ಆಯೋಗ ಶಾಮೀಲು- ಶಾಸಕ ಕೊತ್ತೂರು ಮಂಜುನಾಥ್ ಆರೋಪ

ಕೋಲಾರ: ಒಂದೇ ಮನೆಯಲ್ಲಿ ಸುಮಾರು 10 ಸಾವಿರ ಜನರ ಇದ್ದಾರೆ ಅಂತ ವಿಳಾಸ ತೋರಿಸ್ತಿದ್ದಾರೆ. ಇದು ಹೇಗೆ ಸಾಧ್ಯ? ಮತಗಳ್ಳತನ ನಡೆದಿರುವುದು ಇದರಿಂದಲೇ ತಿಳಿಯುತ್ತದೆ ಮತಗಳ್ಳತನದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ಆಗ್ರಹಿಸಿದರು.

ನಗರದ ಹೊಸ ಬಸ್ ನಿಲ್ದಾಣ ಬಳಿ
ಬಿಜೆಪಿ ಸರ್ಕಾರದ ಏಜೆಂಟ್ ನಂತೆ ವರ್ತಿಸುತ್ತಿರುವ ಚುನಾವಣಾ ಆಯೋಗದ ಮತ ಕಳ್ಳತನ ವಿರುದ್ಧ ಪ್ರತಿಭಟನೆ ಮಾಡಿ ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಅಂಬೇಡ್ಕರ್ ಕೊಟ್ಟಿರುವ ಸಂವಿಧಾನವನ್ನು ಬಿಜೆಪಿ ಅನುಸರಿಸಿದ್ದಾರಾ ದೇಶದಲ್ಲಿ ಬಿಜೆಪಿಯವರು ಮತಗಳ್ಳತನದ ಮೂಲಕ ಗೆದ್ದಿದ್ದಾರೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೆ ಮತಗಳ್ಳತನ ಆಗಿದೆ ಎಂದು ದೂರು ನೀಡಿದರೆ, ಮತಗಳ್ಳತನ ಆಗಿಲ್ಲ ಕ್ಷಮಾಪಣೆ ಕೇಳಬೇಕು ಅಂತಾರೆ. ಇಂತಹ ಅನ್ಯಾಯಗಳು ನಮ್ಮ ದೇಶದಲ್ಲಿ ನಡೆಯುತ್ತಿವೆ. ಮತಗಳ್ಳತನ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಳ್ಳಿ ಹಳ್ಳಿಗೂ ಹೋಗಿ ಮತಗಳ್ಳತನದ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಚುನಾವಣಾ ಆಯೋಗ ಬಿಜೆಪಿಯ ಅಂಗಸಂಸ್ಥೆಯಂತೆ ಕೆಲಸ ಮಾಡುತ್ತಿದೆ. ಪರಿಣಾಮ ಇಡೀ ದೇಶದ ಚುನಾವಣಾ ಪ್ರಕ್ರಿಯೆಯೇ ಬುಡಮೇಲಾಗಿದೆ. ಚುನಾವಣಾ ವ್ಯವಸ್ಥೆಯಲ್ಲೇ ಅಕ್ರಮ ಎಸಗಿಬಿಟ್ಟರೆ ಬಿಜೆಪಿಯ ಗೆಲುವು ಸುಲಭ. ಹೀಗಾಗಿ ಚುನಾವಣಾ ಆಯೋಗ ಮತ್ತು ಬಿಜೆಪಿ ಜಂಟಿಯಾಗಿಯೇ ಈ ಅಕ್ರಮದಲ್ಲಿ ಶಾಮೀಲಾಗಿದೆ ಮತದಾರರ ಪಟ್ಟಿ ನಿರ್ವಹಣೆಯಲ್ಲಿ ಅಕ್ರಮವಾಗದಂತೆ ನೋಡಿಕೊಳ್ಳುವುದು ಆಯೋಗದ ಮೊದಲ ಕರ್ತವ್ಯ. ಆದರೆ ಮಹದೇವಪುರ ಕ್ಷೇತ್ರದ ಮತದಾರರ ಪಟ್ಟಿಯಲ್ಲೇ ಚುನಾವಣಾ ಆಯೋಗ ಎಷ್ಟು ಅಕ್ರಮ ಎಸಗಿದೆ ಎಂಬುದು ಗೊತ್ತಾಗುತ್ತದೆ ಎಂದರು

ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಒಂದು ಮತಕ್ಕೆ 80 ರೂಪಾಯಿ ಕೊಟ್ಟು 6000 ಸಾವಿರ ಮತಗಳನ್ನು ಖರೀದಿ ಮಾಡಿರುವ ಸತ್ಯ ತನಿಖೆಯಿಂದ ಹೊರಬಂದಿದೆ. ಚುನಾವಣಾ ಆಯೋಗ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಒಂದು ಪಕ್ಷದ ಏಜೆಂಟ್ ರೀತಿ ಕೆಲಸ ಮಾಡಬಾರದು ಯಾವುದೋ ಒಂದು ಸರ್ಕಾರದ ಪರ ಕೆಲಸ ಮಾಡುವುದಲ್ಲ ಸಿಬಿಐ, ಇಡಿ, ಚುನಾವಣಾ ಆಯೋಗ ಸೇರಿ ಎಲ್ಲದರಲ್ಲೂ ರಾಜಕೀಯಕರಣಗೊಳಿಸಿದ್ದಾರೆ ಜೊತೆಗೆ ಸುಪ್ರೀಂಕೋರ್ಟ್ ಅನ್ನು ಸಹ ಬೇರೆ ದೃಷ್ಟಿಯಲ್ಲಿ ನೋಡುವ ಹಾಗೆ ಇಟ್ಟಿದ್ದಾರೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಭಾಪತಿ ವಿ.ಆರ್ ಸುದರ್ಶನ್, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೌತಮ್, ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್, ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ನಗರ ಬ್ಲಾಕ್ ಅಧ್ಯಕ್ಷ ಸೈಯದ್ ಅಫ್ಸರ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತ, ಮುಂತಾದವರು ಭಾಗವಹಿಸಿದ್ದರು.

Ramesh Babu

Journalist

Recent Posts

ಮಳೆ, ಗಾಳಿ ಅವಾಂತರ: ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ: ಕುಂಟನಹಳ್ಳಿ, ಹುಸ್ಕೂರು ದಾರಿ ಬಂದ್

ನಿನ್ನೆ ರಾತ್ರಿ ಸುರಿದ ಮಳೆ, ಭೀಕರ ಗಾಳಿ ಅವಾಂತರದಿಂದಾಗಿ ತಾಲೂಕಿನಲ್ಲಿ ಅನೇಕ ಕಡೆ ವಿದ್ಯುತ್ ಕಂಬಗಳು, ಮರಗಳು, ಮನೆಗಳ ಮೇಲ್ಛಾವಣಿಗಳು,…

59 minutes ago

ಆನ್‌ಲೈನ್ ಗೇಮ್ ನಿಷೇಧ: ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ 2025’ ಜಾರಿ: ಕಾಯ್ದೆ ಉಲ್ಲಂಘಿಸಿದರೆ ಭಾರೀ ದಂಡ ಮತ್ತು ಕಠಿಣ ಶಿಕ್ಷೆ ನಿಗದಿ

ದೇಶದಲ್ಲಿ ಅಣಬೆಗಳಂತೆ ಬೆಳೆಯುತ್ತಿರುವ ಆನ್‌ ಲೈನ್ ಜೂಜಾಟ ಮತ್ತು ಹಣದ ಆಟಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೊಸದಾಗಿ…

2 hours ago

ಹೊಸಕೋಟೆ ಹೊರವಲಯದ ನೂತನ ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ವ್ಹೀಲಿಂಗ್ ಹುಚ್ಚಾಟ: ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದವರಿಗೆ ಖಾಕಿ ಪಾಠ

ಸಿಲಿಕಾನ್ ಸಿಟಿ ಹೊರವಲಯದಲ್ಲಿ ಯುವಕರಿಂದ ಡೆಡ್ಲಿ ವ್ಹೀಲಿಂಗ್ ನಡೆದಿದೆ.. ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದವರಿಗೆ ಹೊಸಕೋಟೆ ಸಂಚಾರಿ ಪೊಲೀಸರು ಬಿಸಿ…

3 hours ago

ಬಿರುಗಾಳಿ ಸಹಿತ ಮಳೆ: ನೆಲ ಕಚ್ಚಿದ ಫಸಲಿಗೆ ಬಂದಿದ್ದ  ಬಾಳೆ ಬೆಳೆ: ಲಕ್ಷಾಂತರ ರೂ. ನಷ್ಟ: ಸಂಕಷ್ಟದಲ್ಲಿ ರೈತ

ರಾತ್ರಿ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಮಳೆಯಾಗಿದ್ದು, ಇದರಿಂದ ಹಲವು ಕಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಅದರಂತೆ ದೊಡ್ಡಬಳ್ಳಾಪುರ ತಾಲೂಕಿನ…

6 hours ago

ಮಳೆ, ಗಾಳಿ ಅವಾಂತರ: ವಿದ್ಯುತ್ ತಂತಿ ಮೇಲೆ ಬಿದ್ದ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಭಾರೀ ಗಾತ್ರದ ಝಿಂಕ್ ಅಲ್ಯೂಮಿನಿಯಮ್ ಶೀಟ್‌: ರಸ್ತೆಗೆ ಅಡ್ಡಲಾಗಿ ಬಿದ್ದ 7 ವಿದ್ಯುತ್ ಕಂಬಗಳು

ನಿನ್ನೆ ರಾತ್ರಿ ಭಾರೀ ಗಾಳಿ, ಮಳೆಗೆ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಝಿಂಕ್ ಅಲ್ಯೂಮಿನಿಯಮ್ ಶೀಟ್‌ಗಳು ಹಾರಿ ವಿದ್ಯುತ್ ತಂತಿಗಳ ಮೇಲೆ…

6 hours ago

ಬಿರುಗಾಳಿ ಸಹಿತ ಜೋರು ಮಳೆ: ಧರೆಗುರುಳಿದ 2 ಟ್ರಾನ್ಸ್‌ಫಾರ್ಮರ್ (ವಿದ್ಯುತ್ ಪರಿವರ್ತಕ), 9 ವಿದ್ಯುತ್ ಕಂಬಗಳು: ತಪ್ಪಿದ ಭಾರೀ ಅನಾಹುತ

ಇಂದು ಸಂಜೆ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದು, ಭಾರೀ ಮಳೆ ಅವಾಂತರದಿಂದಾಗಿ ಕೆಲವೆಡೆ ಅನಾಹುತಗಳು ಸಂಭವಿಸಿವೆ... ದೊಡ್ಡಬಳ್ಳಾಪುರ ತಾಲೂಕಿನ…

17 hours ago