ಮತ್ತೆ ಮುನ್ನೆಲೆಗೆ ಬಂದ ಮೀಟೂ ಕೇಸ್, ನಟಿ ಶೃತಿ ಹರಿಹರನ್ ಮೀಟೂ ಕೇಸ್ ಗೆ ಮತ್ತೆ ಟ್ವಿಸ್ಟ್ ಸಿಕ್ಕಿದೆ. ‘ಬಿ’ ರಿಪೋರ್ಟ್ ಚಾಲೇಂಜ್ ಮಾಡಿದ್ದ ಶೃತಿ ಹರಿಹರನ್ ಗೆ ನೋಟಿಸ್ ನೀಡಿರುವ ಕೋರ್ಟ್. ಪೊಲೀಸರಿಗೆ ಸಾಕ್ಷ್ಯಾಧಾರಗಳನ್ನು ನೀಡುವಂತೆ ನೋಟಿಸ್ ನೀಡಲಾಗಿದೆ. ಪೊಲೀಸರು ಸಲ್ಲಿಕೆ ಮಾಡಿದ್ದ ‘ಬಿ’ ರಿಪೋರ್ಟ್ ಚಾಲೆಂಜ್ ಮಾಡಿದ್ದ ನಟಿ ಶೃತಿ ಹರಿಹರನ್.
ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಬಳಿಕ ನೋಟಿಸ್ ನೀಡಲಾಗಿದೆ. 2018 ರಲ್ಲಿ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್. ಅರ್ಜುನ್ ಸರ್ಜಾ ವಿರುದ್ಧ ಸಾಕ್ಷ್ಯಾಧಾರ ಇಲ್ಲ ಎಂದು ‘ಬಿ’ ರಿಪೋರ್ಟ್ ಸಲ್ಲಿಸಿದ್ದ ಕಬ್ಬನ್ ಪಾರ್ಕ್ ಪೊಲೀಸರು.