ಮತಪೆಟ್ಟಿಗೆ ಭದ್ರತಾ ಕೊಠಡಿಗೆ ಅಧಿಕಾರಿಗಳ ಭೇಟಿ, ಪರಿಶೀಲನೆ

2023ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆ, ಚುನಾವಣಾಧಿಕಾರಿಗಳಿಂದ ಚುನಾವಣೆಯನ್ನು ಯಶಸ್ವಿಯಾಗಿ, ಪಾರದರ್ಶಕತೆ, ಮುಕ್ತ, ನ್ಯಾಯಸಮ್ಮತ, ಭಾರೀ ಭದ್ರತೆಯಿಂದ ಪರಿಪೂರ್ಣವಾಗಿ ನಡೆಸಲು ಸಕಲ ಸಿದ್ಧತೆ ನಡೆಸಲಾಗಿದೆ.

ನಗರದ ಹೊರವಲಯದಲ್ಲಿರುವ ಮಾದಗೊಂಡನಹಳ್ಳಿ‌ ಬಳಿಯ‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಮತಯಂತ್ರಗಳನ್ನು ಇರಿಸಲು ಭದ್ರತಾ ಕೊಠಡಿಯನ್ನು ಸಿದ್ಧಪಡಿಸಲಾಗಿದೆ.

ಈಗಾಗಲೇ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಭದ್ರತೆಗಾಗಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಮತಪೆಟ್ಟಿಗೆಗಳನ್ನು ಇಡಲು ಮಾರ್ಕ್ ಸಹ ಮಾಡಲಾಗಿದೆ.

ಈ ಹಿನ್ನೆಲೆ ಮತಪೆಟ್ಟಿಗೆ ಭದ್ರತಾ ಕೊಠಡಿಗಳಿಗೆ ಉಪವಿಭಾಗಾಧಿಕಾರಿ ತೇಜಸ್ ಕುಮಾರ್, ಡಿವೈಎಸ್ಪಿ ನಾಗರಾಜ್, ತಹಶಿಲ್ದಾರ್ ಮೋಹನ ಕುಮಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *