ಮತದಾರರ ಪಟ್ಟಿ ಪರಿಷ್ಕರಣೆ-2024ರ ಸಂಬಂಧ 180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ವೀಕ್ಷಕರಾದ ಸಲ್ಮಾ. ಕೆ ಫಹೀಂ ರವರು ಡಿ.17ರಂದು ಮತಗಟ್ಟೆ ಸಂಖ್ಯೆ 67-ಕೊಡಿಗೇಹಳ್ಳಿ, 227-ಹಾದ್ರಿಪುರ, 218-ಹುಲಿಕುಂಟೆ ಮತ್ತು 19-ಗುಂಡಮಗೆರೆ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಗತಿಯ ಕುರಿತು ಪರಿಶೀಲನೆ ನಡೆಸಿದರು.
ಈ ವೇಳೆ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಸೇರಿದಂತೆ ಇತರರು ಇದ್ದರು.