ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವದ ಹಬ್ಬ ಆಚರಿಸಲಾಗುತ್ತಿದ್ದು, ಆಯಾ ಕ್ಷೇತ್ರಗಳಲ್ಲಿ ಬಿರುಸಿನಿಂದ ನಡೆಯುತ್ತಿರುವ ಮತದಾನ ಪ್ರಕ್ರಿಯೆ. ಕ್ಷೇತ್ರದ ಹಲವು ಮತಗಟ್ಟೆಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಭೇಟಿ ನೀಡಿ ಮತದಾನ ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಿದರು.
ನೋಡಲ್ ಅಧಿಕಾರಿ ಶ್ರೀನಾಥ್ ಗೌಡ ಅವರಿಂದ ಕ್ಷೇತ್ರದ ಮತದಾನ ಕುರಿತು ಮಾಹಿತಿ ಪಡೆದರು. ತಮ್ಮ ಹಕ್ಕನ್ನು ಚಲಾಯಿಸಲು ಬಂದಿದ್ದ ಮತದಾರರಿಗೆ ಮತದಾನ ಬಗ್ಗೆ ಅರಿವು ಮೂಡಿಸಿ, ನಂತರ ಸಖಿ ಬೂತ್ ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.
ಈ ವೇಳೆ ಪೊಲೀಸ್ ಅಧಿಕಾರಿಗಳು, ಚುನಾವಣಾ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜಿಲ್ಲೆಯ ಶೇಕಡಾವರು ಮತದಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಧ್ಯಾಹ್ನ 3 ರವರೆಗೆ ಶೇ 60.06 ರಷ್ಟು ಮತದಾನ ದಾಖಲಾಗಿದೆ.
ನಾಲ್ಕು ತಾಲೂಕಿನ ಶೇಕಡಾವಾರು ಮತದಾನ ವಿವರ
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶೇ 6716
ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 57.8
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ 56.01
ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಶೇ 58.62 ರಷ್ಟು ಮಧ್ಯಾಹ್ನ 3ಕ್ಕೆ ಅಂತ್ಯಗೊಂಡಂತೆ ಮತದಾನ ದಾಖಲಾಗಿದೆ.