ಜಗತ್ತಿನಲ್ಲಿ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಸೋಂಕು ಎಂದರೆ ಅದು ಹೆಚ್.ಐ. ವಿ. ಇದು ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ, ಜಾಗತಿಕವಾಗಿ ಏಡ್ಸ್, ಲೈಂಗಿಕ ಶಿಕ್ಷಣಕ್ಕೆ ಹೊಸ ತುರ್ತು ಪ್ರಜ್ಞೆಯನ್ನು ನೀಡಿದೆ ಎಂದು ದೇವರಾಜ ಅರಸು ವಿದ್ಯಾ ಸಂಸ್ಥೆಯ ಉಪಾಧ್ಯಕ್ಷರಾದ ಜೆ.ರಾಜೇಂದ್ರ ಹೇಳಿದರು.
ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ, ಬೆಂಗಳೂರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಬೆಂ. ಗ್ರಾ. ಜಿಲ್ಲೆ. ನೆಹರು ಯುವ ಕೇಂದ್ರ. ಬೆಂ. ಗ್ರಾ. ಜಿಲ್ಲೆ ಮತ್ತು ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ ಹಾಗೂ ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಎಂ.ವೈ. ಕೆ ಸದಸ್ಯರಿಗೆ ಎಚ್.ಐ.ವಿ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು
ಯುವ ಮನಸ್ಸುಗಳು ಯಾವುದೇ ಮುಜುಗರ, ಮಡಿವಂತಿಕೆಯನ್ನು ಬಿಟ್ಟು ಲೈಂಗಿಕ ಶಿಕ್ಷಣ ಕುರಿತಾದ
ಲೈಂಗಿಕ ಸಂತಾನೋತ್ಪತ್ತಿ , ಸುರಕ್ಷಿತ ಲೈಂಗಿಕತೆ ಮತ್ತು ಜನನ ನಿಯಂತ್ರಣ , ಲೈಂಗಿಕ ಆರೋಗ್ಯ , ಸಂತಾನೋತ್ಪತ್ತಿ ಆರೋಗ್ಯ , ಭಾವನಾತ್ಮಕ ಸಂಬಂಧಗಳು ಮತ್ತು ಜವಾಬ್ಧಾರಿಗಳ ಬಗ್ಗೆ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕರಾದ ಸವಿತಾ ಹೆಗಡೆ ಮಾತನಾಡಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಒಬ್ಬ ವ್ಯಕ್ತಿಯು ಇನ್ನೊಬ್ಬ ಹೆಚ್.ಐ.ವಿ ಸೋಂಕಿತ ವ್ಯಕ್ತಿಯೊಂದಿಗೆ ಕಾಂಡೋಮ್ ಬಳಸದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಸೋಂಕು ತಗಲುವುದು ಎಂದರು.
ಸರಿಯಾಗಿ ಶುದ್ಧವಾಗದ ಸೂಜಿ ಮತ್ತು ಇತರೆ ಆಸ್ಪತ್ರೆಯ ಉಪಕರಣಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದರಿಂದ ಶಸ್ತ್ರ ಕ್ರಿಯೆಯ ಉಪಕರಣಗಳಾದ ಸ್ಕ್ಯಾಪಲ್, ಸೀರಂಜು ಅಥವಾ ಇನ್ನಿತರ ಕೆಲ ಉಪಕರಣಗಳನ್ನು ಸೋಂಕಿತನಿಗೆ ಬಳಸಿದ ಮೇಲೆ ಕ್ರಿಮಿ ಶುದ್ಧ ಮಾಡದೆ ಬೇರೊಬ್ಬರ ಮೇಲೆ ಉಪಯೋಗಿಸುವುದರಿಂದ, ಸುರಕ್ಷಿತವಲ್ಲದ ರಕ್ತದಿಂದ ಹೆಚ್. ಐ.ವಿ ಸೋಂಕು ಹರಡಬಹುದು,
ಸೋಂಕಿತ ತಾಯಿ ತಂದೆಯರಿಂದ ಮಗುವಿಗೆ ಸೋಂಕು ಹರಡುಬಹುದು, ಒಬ್ಬ ಹೆಚ್ ಐವಿ ಸೊಂಕಿತ ತಾಯಿಯು ಗರ್ಭಿಣಿಯಿದ್ದಾಗಲೆ ಅಥವಾ ಜನನ ಸಮಯದಲ್ಲಿ ಸೋಂಕು ಹರಡಬಹುದು ಎಂದರು.
ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ನಾಗೇಶ್ ಮಾತನಾಡಿ
ಕ್ಷಯ ರೋಗ ಎನ್ನುವುದು ಮೈಕ್ರೋ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಒಂದು ಆರೋಗ್ಯ ಸಮಸ್ಯೆ. ಕ್ಷಯ ರೋಗದ ಪ್ರಮುಖವಾದ ಲಕ್ಷಣ ಎಂದರೆ ತೀವ್ರವಾದ ಕೆಮ್ಮು. ಈ ಸಮಸ್ಯೆಯು ಮೂರು ವಾರ ಅಥವಾ ಅದಕ್ಕಿಂತಲೂ ಅಧಿಕ ಸಮಯಗಳ ಕಾಲ ಮುಂದುವರಿಯುವ ಸಾಧ್ಯತೆಗಳಿರುತ್ತವೆ. ರಕ್ತದಿಂದ ಕೂಡಿರುವ ಅಥವಾ ಬೇರೆ ಬೇರೆ ಬಣ್ಣದಲ್ಲಿ ಇರುವ ಕಫ, ಜ್ವರ, ಆಯಾಸ, ಎದೆ ನೋವು, ಉಸಿರಾಟದ ತೊಂದರೆ, ಹಸಿವಾಗದೆ ಇರುವುದು ರೋಗದ ಲಕ್ಷಣಗಳು. ಒಮ್ಮೆ ಈ ಆರೋಗ್ಯ ಸಮಸ್ಯೆ ಉಂಟಾದರೆ ಇದಕ್ಕೆ ಸುಮಾರು 9 ತಿಂಗಳುಗಳ ಕಾಲ ಚಿಕಿತ್ಸೆಯನ್ನು ನೀಡಬೇಕಾಗಬಹುವುದು, ನಂತರದ ದಿನಗಳಲ್ಲಿ ನಿಧಾನವಾಗಿ ಕ್ಷಯರೋಗವು ಗುಣಮುಖವಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಎಂ.ಚಿಕ್ಕಣ್ಣ, ಉಪಪ್ರಾಂಶುಪಾಲರಾದ ಕೆ. ದಕ್ಷಿಣಾಮೂರ್ತಿ, ಐ,ಕ್ಯೂ,ಎ,ಸಿ ಯ ಸಂಯೋಜಕರಾದ ಆರ್. ಉಮೇಶ್, ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಸಿ.ಪಿ.ಪ್ರಕಾಶ್ ಎನ್.ಎಸ್.ಎಸ್ ಅಧಿಕಾರಿಗಳಾದ ಲಕ್ಷ್ಮೀಶ ಸೇರಿದಂತೆ ಮತ್ತಿತರರು ಹಾಜರಿದ್ದರು.
18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…
ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…
ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…
ರಾಹುಲ್ ಗಾಂಧಿ...... ಬಿಹಾರ ಚುನಾವಣೆಯಲ್ಲಿ, ಸೀಟುಗಳ ಲೆಕ್ಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ನಂತರ ಶ್ರೀ ರಾಹುಲ್ ಗಾಂಧಿಯವರ ನಾಯಕತ್ವದ ಸಾಮರ್ಥ್ಯದ…
ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…
ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…