ಮಡಿಕೇರಿ ಹೋಂ ಸ್ಟೇನಲ್ಲಿ ತಾಯಿ ಮಗಳು ತಂಗಿದ್ದ ಕೊಠಡಿಯ ಬಾಗಿಲು ಬಡಿದು ಕೇರ್ ಟೇಕರ್‌ನಿಂದ ಕಿರುಕುಳ: ಪೊಲೀಸರಿಗೆ ದೂರು

ಮಡಿಕೇರಿ ಹೋಂ ಸ್ಟೇನಲ್ಲಿ ಪ್ರವಾಸಿ ತಾಯಿ ಮಗಳಿಗೆ ಕೇರ್ ಟೇಕರ್‌ನಿಂದ ಕಿರುಕುಳ ನಡೆದ ಘಟನೆ ವರದಿಯಾಗಿದೆ.

ಕಾವೇರಪ್ಪ‌ ಮಾಲಿಕತ್ವದ ಈಶ್ವರ ನಿಲಯ ಎಂಬ ಹೋಮ್ಸ್ ಸ್ಟೇ ನಲ್ಲಿ ಹೋಮ್ಸ್ ಸ್ಟೇ ಕೇರ್ ಟೇಕರ್‌ನಿಂದ ರಾತ್ರಿ 2 ಗಂಟೆಯಿಂದ 4 ಗಂಟೆವರೆಗೆ ಕಿರುಕುಳ ಆಗಿದೆ ಎಂದು ದೂರು ನೀಡಲಾಗಿದೆ.

ಹೋಮ್ಸ್ ಸ್ಟೇ ಕೇರ್ ಟೇಕರ್ ಕುಮಾರ @ ಪ್ರವೀಣ್ ಎಂಬಾತನಿಂದ ಕೃತ್ಯ ನಡೆದಿದೆ ಎಂದು ಆರೋಪಸಲಾಗಿದೆ.

ಡೋರ್ ಓಪನ್ ಮಾಡುವಂತೆ ತಾಯಿ ಮಗಳಿಗೆ ಕೇರ್ ಟೇಕರ್‌ನಿಂದ ಕಿರುಕುಳ ನೀಡಲಾಗಿದೆ ಎನ್ನಲಾಗಿದೆ.

ತಾಯಿ ಮಗಳು ಇಬ್ಬರೇ ಉಳಿದುಕೊಂಡಿದ್ದ ಹೋಮ್ಸ್ ಸ್ಟೇ
ಭಯವಾಗಿ ಬಾಗಿಲು ಓಪನ್‌ ಮಾಡದ ಪ್ರವಾಸಿ ತಾಯಿ‌ ಮಗಳು, ಕುಡಿದು ಬಂದಿದ್ದ ಹೋಮ್ಸ್ ಸ್ಟೇ ಕೇರ್ ಟೇಕರ್ ಎಂದ ಪ್ರವಾಸಿ ಮಹಿಳೆ ಆರೋಪಿಸಿದ್ದಾರೆ.

ಇದು ನಮ್ಮ ಜೀವನದ ಅತ್ಯಂತ ಕೆಟ್ಟ ಅನುಭವ ಎಂದು ತಮ್ಮ ಅಸಮಾಧಾನವನ್ನು ಮಾಧ್ಯಮದವರೊಂದಿಗೆ ವ್ಯಕ್ತಪಡಿಸಿದ್ದಾರೆ.

ಓಪನ್‌ ಮಾಡದಿದ್ದಕ್ಕೆ ನಂತರ ನಾಲ್ಕು ಚಕ್ರಗಳ ಕಾರು ಪಂಕ್ಚರ್ ಮಾಡಿರುವದಾಗಿ ಅವರು ತಿಳಿಸಿದ್ದಾರೆ.

ಹೋಮ್ಸ್ ಸ್ಟೇ ಮಾಲೀಕನಿಗೆ ಕರೆ ಮಾಡಿದ್ರೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ ಅಂತ ಆರೋಪ ಮಾಡಿದ್ದಾರೆ.

ಬೆಂಗಳೂರು ಮೂಲದ ತಾಯಿ‌ ಮಗಳು ಕೊಡಗಿಗೆ ಪ್ರವಾಸಕ್ಕೆ ಬಂದಿದ್ದರು. ಊಟಿಯಿಂದ ಕೊಡಗಿಗೆ ಬಂದು ಹೋಮ್ಸ್ ಸ್ಟೇನಲ್ಲಿ ಉಳಿದುಕೊಂಡಿದ್ದರು.

ಈ ಬಗ್ಗೆ ಮಡಿಕೇರಿ ನಗರ ಠಾಣೆಗೆ ದೂರು ನೀಡಿದ ಹಿನ್ನೆಲೆ
ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *