ಮಡಿಕೇರಿ ಹನಿ ಟ್ರ್ಯಾಪ್ ಪ್ರಕರಣ: ಬಲೆಗೆ ಬಿದ್ದರಾ ಗಣ್ಯರು?

ಇತ್ತೀಚೆಗೆ ಮಂಡ್ಯ ಮೂಲಕ ವ್ಯಕ್ತಿ ಮಹಿಳೆ ಮತ್ತು ಆಕೆಯ ಸಹಚರರ ಜಾಲಕ್ಕೆ ಸಿಲುಕಿ ಮಾರಣಾಂತಿಕ ಹಲ್ಲೆಗೆ ಒಳಗಾಗಿ ನಂತರ ಅರೆ ಬೆತ್ತಲೆಯಾಗಿ ಪೋಲೀಸ್ ಠಾಣೆಗೆ ಬಂದು ದೂರು ನೀಡಿದ್ದು ನಂತರ ಹನಿಟ್ರಾಪ್ ನಡೆಸಿದ ತಂಡ ಅರೆಸ್ಟ್ ಆಗಿದ್ದು ಸುದ್ದಿಯಾದ ಬೆನ್ನಲ್ಲೇ ಇದೀಗ ಬೆಚ್ಚಿಬೀಳಿಸುವ ಸುದ್ದಿ ಬೆಳಕಿಗೆ ಬಂದಿದೆ.

ಹನಿಟ್ರಾಪ್ ನಡೆಸಿದ ಮಹಿಳೆ ಮತ್ತು ಆಕೆಯ ತಂಡವನ್ನು ತೀವ್ರ ವಿಚಾರಣೆ ಮಾಡಿದಾಗ ಈ ತಂಡ ಮಡಿಕೇರಿ ನಗರದ ಅನೇಕ ಪ್ರಭಾವಿ ವ್ಯಕ್ತಿಗಳನ್ನು ಪಲ್ಲಂಗದಲ್ಲಿ ಬೆತ್ತಲಾಗಿಸಿ ಮಹಿಳೆಯೊಂದಿಗೆ ವೀಡಿಯೋ ಚಿತ್ರಿಸಿ ಬೆದರಿಕೆ ಹಾಕಿ ಲಕ್ಷ ಲಕ್ಷ ಹಣ ಪೀಕಿದ್ದಾರೆ ಎಂದು ತಿಳಿದುಬಂದಿದೆ.

ಇಂತವರ ವೈಯಕ್ತಿಕ ವಿಚಾರವಾದರೂ ಅವರನ್ನು ಬಲೆಗೆ ಬೀಳಿಸಿ, ಅವರಿಂದ ಲಕ್ಷಾಂತರ ಹಣ ಬ್ಲಾಕ್ ಮೇಲ್ ಮಾಡಿ ಗಿಟ್ಟಿಸಿದ್ದು ಪತ್ತೆ ಹಚ್ಚಿ ಮುಂದೆ ಈ ರೀತಿ ಆಗದ ಹಾಗೆ ಕಾನೂನು ಕ್ರಮ ಆಗಬೇಕಾಗಿದೆ.

ಮಡಿಕೇರಿ ಸ್ಟ್ಯಾಂಡಿಂಗ್ ಕಮಿಟಿ ಹಾಗೂ ನಗರದ ಬ್ಯಾಂಕ್ ಒಂದರ‌ ನಿರ್ದೇಕರಾಗಿರುವ ಪ್ರಭಾವಿ ವ್ಯಕ್ತಿಯೊಬ್ಬರು ಇವಳ ಬಲೆಗೆ ಬಿದ್ದು ಈ ಟೀಮ್ ಗೆ ಲಕ್ಷಾಂತರ ರೂ ಕಕ್ಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಖ್ಯಾತ ಗುತ್ತಿಗೆದಾರ ಹಾಗೂ ಸಮಾಜವೊಂದರ ಅಧ್ಯಕ್ಷರಾಗಿ ಐಶಾರಾಮಿ ಕಾರಿನಲ್ಲಿ ಓಡಾಡುವ ಪ್ರಭಾವಿ ವ್ಯಕ್ತಿಯನ್ನು ಬಲೆಗೆ ಕೆಡವಿ ದೊಡ್ಡ ಮೊತ್ತವನ್ನೇ ಹನಿ ಟೀಮ್ ವಸೂಲಿ ಮಾಡಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ. ಹಾಗೇಯೇ
ಸೇವಾ ಸಂಸ್ಥೆ, ಮತ್ತಿತರ ಸಂಘ ಸಂಸ್ಥೆಗಳಲ್ಲಿ ಗುರುತಿಸುಕೊಂಡಿರುವ ಉದ್ಯಮಿ,ಸರ್ಕಾರದಿಂದ ನಾಮನಿರ್ದೇಶನ ಗೊಂಡ ಸದಸ್ಯ ಹೀಗೆ ಕಾಂಗ್ರೆಸ್, ಬಿಜೆಪಿ ಎನ್ನದೆ ಪಕ್ಷಾತೀತವಾಗಿ ಬಲೆಗೆ ಹಾಕಿದ ಹನಿ ಟೀಮ್ ಭರ್ಜರಿಯಾಗಿ ಭೇಟೆಯಾಡಿ ವಸೂಲಾತಿ ಮಾಡಿರು ವ ಶಂಕೆ ವ್ಯಕ್ತವಾಗಿದೆ..

ಪೋಲೀಸರ ಬಳಿ ಎಲ್ಲಾ ವಿವರಗಳು ದೊರಕಿದ್ದು ಪ್ರಭಾವಿಗಳು ದೂರು ನೀಡದೇ ಇರುವುದರಿಂದ ಸದ್ಯಕ್ಕೆ ಕೇಸ್ ದಾಖಲಿಸಿರುವುದಿಲ್ಲ ಎಂದು ತಿಳಿದು ಬಂದಿದೆ. ಆದರೆ ಘಟನೆ ನಡೆದಿರುವುದು ಸತ್ಯ ಹಾಗೆ ಮುಂದೆ ಯಾರು ಇಂತಹ ಹನಿ ಟ್ರಾಪ್ ದಂಧೆಗೆ ಸಿಲ್ಕುದಿರಲಿ ಎಂಬುದು ಮಡಿಕೇರಿ ಜನತೆಯ ಆಶಯವಾಗಿದೆ.

Leave a Reply

Your email address will not be published. Required fields are marked *

error: Content is protected !!