ಮಠಕ್ಕೆ ಜಮೀನು ಕೊಡುವುದಾಗಿ ನಂಬಿಸಿ ಸ್ವಾಮೀಜಿಗೆ 35 ಲಕ್ಷ ದೋಖಾ ಮಾಡಿರುವ ವರ್ಷ ಹೆಸರಿನ ಮಹಿಳೆ. ಮಹಿಳೆಯ ಮಾತಿಗೆ ಮರಳಾಗಿ 35ಲಕ್ಷ ಹಣವನ್ನು ಹಂತಹಂತವಾಗಿ ಬ್ಯಾಂಕ್ ಖಾತೆಗೆ ಹಣ ಹಾಕಿ ಮೋಸ ಹೋಗಿರುವ ನೆಲಮಂಗಲದ ಕಂಬಾಳು ಮಠದ ಪೀಠಾಧಿಪತಿ ಚನ್ನವೀರ ಶಿವಾರ್ಚಾಯ ಸ್ವಾಮೀಜಿ.
2020ರಲ್ಲಿ ಫೇಸ್‌ಬುಕ್ ಮೂಲಕ ಸ್ವಾಮೀಜಿಗೆ ಪರಿಚಯವಾಗಿದ್ದ ವರ್ಷ ಎಂಬ ಹೆಸರಿನ ಮಹಿಳೆ. ಪರಿಚಯ ಆದ ನಂತರ ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಾ ಇನ್ನಷ್ಟು ಸ್ವಾಮೀಜಿಗೆ ಮಹಿಳೆ ಹತ್ತಿರವಾಗಿ ಹಣ ಪೀಕಲು ಪ್ರಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಆರಂಭದಲ್ಲಿ 500 ರೂ. ಮಂಜುಳ ಎಂಬ ಮಹಿಳೆಯ ಖಾತೆಗೆ ಹಣ ಪಾವತಿಸಿದ್ದ ಸ್ವಾಮೀಜಿ. ಇದೇ ಸಲುಗೆಯಿಂದ ದೊಡ್ಡ ಮಟ್ಟದ ಹಣ ಪೀಕಲು ಪ್ಲ್ಯಾನ್ ಮಾಡಿದ ಮಹಿಳೆ. ನನ್ನ ಬಳಿ 10 ಎಕರೆ ಜಮೀನು ಇದೆ, ದಾಖಲೆ ಸಮೇತ ಮಠಕ್ಕೆ ನೀಡುತ್ತೇನೆ ಎಂದು ನಂಬಿಸಿ ಬರೋಬ್ಬರಿ 35ಲಕ್ಷ ಹಣವನ್ನು ಸ್ವಾಮೀಜಿ ಬಳಿ ಪಡೆದುಕೊಂಡ ಮಹಿಳೆ.
ಹಣ ಪಡೆದುಕೊಂಡ ನಂತರ ಸ್ವಾಮೀಜಿ ಬಳಿ ನಾಟಕ ಮಾಡಲು ಶುರು ಮಾಡಿರುವ ಮಹಿಳೆ. ನನಗೆ ಹಲ್ಲೆ ಆಗಿದೆ. ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಹೇಳಿ ಸ್ವಾಮೀಜಿಯಿಂದ ದೂರವಾಗಲೂ ಪ್ರಾರಂಭಿಸಿದ್ದಾರೆ.
ಇದನ್ನು ಖಚಿತಪಡಿಸಿಕೊಳ್ಳಲು ಸ್ವಾಮೀಜಿ ಅವರು ಆಸ್ಪತ್ರೆಯಲ್ಲಿ ಪರಿಶೀಲಿಸಿದಾಗ ಆಸ್ಪತ್ರೆಯಲ್ಲಿ ವರ್ಷ ಎಂಬ ಮಹಿಳೆ ದಾಖಲಾಗಿಲ್ಲ ಎಂಬುದು ತಿಳಿದು ಬರುತ್ತದೆ.
ಈ ಎಲ್ಲಾ ಬೆಳವಣಿಗೆಗಳನ್ನ ಗಮನಿಸಿದ ಸ್ವಾಮೀಜಿ ನಾನು ಮೋಸ ಹೋಗಿದ್ದೇನೆ ಎಂದು ತಿಳಿದು ಬರುತ್ತದೆ. ನಂತರ ತಾನು ಮೋಸ ಹೋಗಿರುವ ಕುರಿತು ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ಪ್ರಕರಣ ದಾಖಲಿಸುತ್ತಾರೆ.