
ದೊಡ್ಡಬಳ್ಳಾಪುರ : ಜಾನುವಾರುಗಳಿಗೆ ಮೇವು ತರುವ ವೇಳೆ ಮಹಿಳೆಯ ಮಾಂಗಲ್ಯ ಸರ ಕದ್ದು ಕಳ್ಳರು ಪರಾರಿ ಯಾಗಿರುವ ಘಟನೆ ಡಿ.5ರ ಶುಕ್ರವಾರ ಮಧ್ಯಾಹ್ನ ಸುಮಾರು 12:30 ಗಂಟೆಯಲ್ಲಿ ಮಧುರೆ ಹೋಬಳಿಯ ಮದಗೊಂಡನಹಳ್ಳಿಯಲ್ಲಿ ನಡೆದಿದೆ.
ಲಕ್ಷಮ್ಮ (40)ಚಿನ್ನದ ಸರ ಕಳೆದುಕೊಂಡ ಮಹಿಳೆ.
ಡಿ.5ರ ಶುಕ್ರವಾರ ಮಧ್ಯಾಹ್ನದ ವೇಳೆ ಹಸುಗಳಿಗೆ ಹುಲ್ಲು ಕೊಯ್ದುಕೊಂಡು ಮನೆಗೆ ವಾಪಾಸ್ ಬರುವ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು ಮಹಿಳೆಯನ್ನು ಅಡ್ಡಗಟ್ಟಿ ಚಾಕು ತೋರಿಸಿ ಚಿನ್ನದ ಮಾಂಗಲ್ಯ, ದಪ್ಪನೆಯ 2 ಚಿನ್ನದ ಗುಂಡು, ಕರಿಮಣಿ ಸರದಲ್ಲಿದ್ದ ಚಿನ್ನದ ಚಿಕ್ಕ ಗುಂಡುಗಳು ಇದ್ದ 6 ಗ್ರಾಂ ತೂಕದ 40 ಸಾವಿರ ಮೌಲ್ಯದ ಕರಿಮಣಿ ಸರ ಕಿತ್ತು ಪರಾರಿಯಾಗಿದ್ದಾರೆ.
ಸರ ಕದ್ದ ಕಳ್ಳನು ಲಕ್ಷ್ಮಮ್ಮನ ಮನೆ ಮುಂದೆಯೇ ಹೋಗಿದ್ದಾನೆ. ಅದನ್ನ ಕಂಡ ಲಕ್ಷ್ಮಮ್ಮ ಇವನೇ ಆ ಕಳ್ಳ ಎಂದು ಕೂಗಿಕೊಂಡಾಗ ಊರಿನವರು ಕಳ್ಳನನ್ನು ಹಟ್ಟಿಸಿಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಕಳ್ಳರು ಪರಾರಿ ಯಾಗಿದ್ದಾರೆ. ಕಳ್ಳ ನಡೆದುಕೊಂಡು ಹೋಗುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ..