ಮಗುವಿಗೆ ಹಾವು ಕಡಿತ:‌‌ ಚಿಕಿತ್ಸೆ ಫಲಿಸದೇ ಸಾವು: ಮುಗಿಲು‌ ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಹಾವು ಕಡಿತದಿಂದ 7 ವರ್ಷದ ಮಗು ಸಾವನ್ನಪ್ಪಿರುವ ಘಟನೆ ತಾಲೂಕಿನ ಕೋಳೂರು ಗ್ರಾಮದ ತೋಟವೊಂದರಲ್ಲಿ ನಿನ್ನೆ ಸಂಜೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.

ರಾಮಾಂಜಿ, ವಿನೋದಮ್ಮ ದಂಪತಿಯ ಸುಮಾರು 7 ವರ್ಷದ ಅನುಷಾ ಸಾವನ್ನಪ್ಪಿರುವ ಮಗು.

ರಾಮಾಂಜಿ, ವಿನೋದಮ್ಮ ದಂಪತಿ ತಾಲೂಕಿನ ತೂಬಗೆರೆ ಹೋಬಳಿಯ ಟಿ.ಹೊಸಹಳ್ಳಿ ಗ್ರಾಮದ ನಿವಾಸಿಗಳಾಗಿರುತ್ತಾರೆ. ಕೋಳೂರು ಗ್ರಾಮದಲ್ಲಿರುವ ತೋಟವೊಂದರಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸವಾಗಿದ್ದರು.

ನಿನ್ನೆ ಸಂಜೆ ಸುಮಾರು 6 ಗಂಟೆ‌ ಸಮಯದಲ್ಲಿ ಮಗುವಿಗೆ ಹಾವು ಕಚ್ಚಿದ್ದು, ಅಸ್ವಸ್ಥಗೊಂಡಿರುವ ಮಗುವನ್ನು ಗಮನಿಸಿದ ಪೋಷಕರು, ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *