ಮಗಳ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಕೊಂದ ಪಾಲಕರು

ತೆಲಂಗಾಣದ ತಂಗಲ್ಲಪಲ್ಲಿ ಮಂಡಲದ ನೇರೆಲ್ಲ ಗ್ರಾಮದ ರಾಜಣ್ಣ ಸಿರಿಸಿಲ್ಲ – ಚೇಪ್ಯಾಲ ನರಸಯ್ಯ ಯೆಲ್ಲವ್ವರ ಹಿರಿಯ ಮಗಳು ಪ್ರಿಯಾಂಕ (25) ಕಳೆದ ಏಳು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಹಲವು ಆಸ್ಪತ್ರೆ, ದೇವಸ್ಥಾನಗಳಿಗೆ ಕರೆದುಕೊಂಡು ಹೋಗಿದ್ದರು. ಆದರೆ ಮಾನಸ್ಥಿತಿ ಸರಿಹೋಗಿರಲಿಲ್ಲ.

2020ರಲ್ಲಿ ಪ್ರಿಯಾಂಕಾ ವಿವಾಹವಾಗಿದ್ದು, ರೋಗವು ಭಾಗಶಃ ವಾಸಿಯಾದ ನಂತರ 13 ತಿಂಗಳ ಮಗನನ್ನು ಹೊಂದಿದ್ದಾಳೆ.

ಆದರೆ, ಪ್ರಿಯಾಂಕಾಳ ಮಾನಸಿಕ ಸ್ಥಿತಿ ಕಳೆದ ಒಂದು ತಿಂಗಳಿಂದ ತೀರ ಹದೆಗೆಟ್ಟಿತ್ತು, ಎಲ್ಲರಿಗೂ ತೊಂದರೆ ನೀಡುತ್ತಿದ್ದು, ಸುತ್ತಮುತ್ತಲಿನವರನ್ನು ನಿಂದಿಸಿ ಜಗಳವಾಡುತ್ತಿದ್ದಳು ಎಂದು ಪತಿ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಆಕೆಯನ್ನು ಬುಗ್ಗರಾಜೇಶ್ವರಸ್ವಾಮಿ ದೇವಸ್ಥಾನಕ್ಕೆ ಕರೆದೊಯ್ದು ಮೂರು ದಿನಗಳ ಕಾಲ ಕೂಡಿ ಹಾಕಿದ್ದು, ಆಕೆ ಗುಣವಾಗದ ಹಿನ್ನೆಲೆಯಲ್ಲಿ ಬೇಸತ್ತ ಪೋಷಕರು ಆ.14ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ಆಕೆಯನ್ನು ಕುತ್ತಿಗೆಗೆ ದಾರ ಬಿಗಿದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *