ಮಗಳಿಗೆ ಈಜು ಕಲಿಸಲು ಹೋದ ತಂದೆ ಕೆರೆಯಲ್ಲಿ ಮುಳುಗಿ ಮಗಳೊಡನೆ ಸಾವು

ಚಿಕ್ಕಬಳ್ಳಾಪುರ : ಮಗಳಿಗೆ ಈಜು ಕಲಿಸಲು ಹೋದ ತಂದೆ ಕೆರೆಯಲ್ಲಿ ಮುಳುಗಿ ಮಗಳೊಡನೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ಶೆಟ್ಟಿಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ನಾಗೇಶ್ (42) ಹಾಗೂ ಧನುಶ್ರೀ(12) ಮೃತ ದುರ್ದೈವಿಗಳು.

ಕೆರೆಯಲ್ಲಿ ಹೂಳು ತುಂಬಿದ್ದ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಚಿಕ್ಕಬಳ್ಳಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಶಿಡ್ಲಘಟ್ಟದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಚಿಕ್ಕಬಳ್ಳಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *