ಉತ್ತರ ಪ್ರದೇಶದ ಇಟಾಹ್ ಎಂಬಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಮಗಳ ಪ್ರೇಮ ಪ್ರಕರಣಕ್ಕೆ ಮನನೊಂದ ತಾಯಿಯೊಬ್ಬಳು ಮಗಳನ್ನು ಕೊಲ್ಲಲು ವ್ಯಕ್ತಿಯೊಬ್ಬನನ್ನು ನೇಮಿಸಿದ್ದಾಳೆ. ಆದರೆ, ಆ ಹಂತಕ ಮಗಳ ಬದಲು ತಾಯಿಯನ್ನೇ ಕೊಂದಿದ್ದಾನೆ.
ಇಲ್ಲಿ ಟ್ವಿಸ್ಟ್ ಏನೆಂದರೆ ಮಗಳು ಪ್ರೀತಿಸಿದವನಿಗೆ ಮಗಳನ್ನು ಕೊಲ್ಲಲು ತಾಯಿ ಸುಪಾರಿ ಕೊಟ್ಟಿದ್ದಾಳೆ. ಹೀಗಾಗಿ ಮಗಳ ಬದಲು ತಾಯಿಯನ್ನೇ ಕೊಂದಿದ್ದಾನೆ… ಮೃತಳ ಮಗಳು ಮತ್ತು ಆಕೆಯ ಪ್ರೇಮಿ ಕಮ್ ಕಿಲ್ಲರ್ ಸದ್ಯ ಪೊಲೀಸರ ವಶದಲ್ಲಿದ್ದಾರೆ.
ಕಳೆದ ಭಾನುವಾರ, ಇಟಾಹ್‌ನ ರಾಗಿ ಹೊಲದಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಮಹಿಳೆಗೆ 42 ವರ್ಷ ವಯಸ್ಸಾಗಿತ್ತು. ಕೊಲೆಯಾದ ಎರಡನೇ ದಿನ ಮಹಿಳೆಯನ್ನು ರಮಾಕಾಂತ್ ಅವರ ಪತ್ನಿ ಅಲ್ಕಾ ಎಂದು ಗುರುತಿಸಲಾಗಿದೆ.
ಕಥೆ ಸಿನಿಮಾದಂತೆ ಕಂಡರೂ ವಾಸ್ತವ. ಕೆಲವು ತಿಂಗಳ ಹಿಂದೆ, ನಯಾಗಾಂವ್ ಪೊಲೀಸ್ ಠಾಣೆಯ ಅಲ್ಲಾಪುರ್ ನಿವಾಸಿ ಅಲ್ಕಾ ಅವರ ಅಪ್ರಾಪ್ತ ಮಗಳು ಅದೇ ಗ್ರಾಮದ ಅಖಿಲೇಶ್ ಜೊತೆ ಓಡಿಹೋಗಿದ್ದಳು. ಪೊಲೀಸರು ಆಕೆಯನ್ನು ವಶಪಡಿಸಿಕೊಂಡು ಆಕೆಯ ಮನೆಯವರಿಗೆ ಒಪ್ಪಿಸಿ ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ. ಅಲ್ಕಾ ತನ್ನ ಮಗಳನ್ನು ಅಕಾರಾಬಾದ್ ಸಿಕಂದರಪುರ ಖಾಸ್ ಪೊಲೀಸ್ ಠಾಣೆಯ ಕೈಮ್‌ಗಂಜ್ ಜಿಲ್ಲೆಯ ಫರೂಕಾಬಾದ್‌ನಲ್ಲಿರುವ ತನ್ನ ತಾಯಿಯ ಮನೆಗೆ ಕಳುಹಿಸಿದಳು. ಈ ಸ್ಥಳದ ನಿವಾಸಿ ಸುಭಾಷ್ ಎಂಬಾತನಿಗೆ ಅಲ್ಕಾ ಪರಿಚಯವಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ಕುಮಾರ್ ಸಿಂಗ್ ಹೇಳಿದ್ದಾರೆ.
ನಂತರ, ಸುಭಾಷ್ ಅಲ್ಕಾ ಅವರ ಮಗಳೊಂದಿಗೆ ಸಂಬಂಧವನ್ನು ಬೆಳೆಸಿದ್ದಾನೆ. ಒಂದು ದಿನ, ಅವರು ಫೋನ್‌ನಲ್ಲಿ ಮಾತನಾಡುವುದನ್ನು ನೋಡಿ, ಹುಡುಗಿಯ ತಾಯಿಯ ಚಿಕ್ಕಪ್ಪ ಅಲ್ಕಾಗೆ ಮಾಹಿತಿ ನೀಡಿದರು ಮತ್ತು ಅವಳನ್ನು ಕರೆದುಕೊಂಡು ಹೋಗುವಂತೆ ಹೇಳಿದರು. ಆದರೆ, ಆ ಹುಡುಗಿಗೆ ಸುಭಾಷ್ ಜೊತೆ ಸಂಬಂಧವಿದೆ ಎಂಬುದು ಅಲ್ಲಿಯವರೆಗೆ ಯಾರಿಗೂ ತಿಳಿದಿರಲಿಲ್ಲ.
ಸುಭಾಷ್ ಈಗಾಗಲೇ ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ವಾಸ ಅನುಭವಿಸಿದ್ದಾನೆ. ತಾಯಿ ಅಲ್ಕಾ ಅಕ್ಟೋಬರ್ 27 ರಂದು ಸುಭಾಷ್‌ಗೆ ಕರೆ ಮಾಡಿ ಮಗಳನ್ನು ಕೊಲ್ಲಲು 50,000 ರೂ. ಕೊಡುತ್ತಾಳೆ. ಈ ವಿಚಾರ ಮಗಳಿಗೆ ತಿಳಿಯುತ್ತದೆ. ಆಗ ತನ್ನ ತಾಯಿಯನ್ನು ಕೊಂದರೆ ನಿನ್ನನ್ನು ಮದುವೆಯಾಗುತ್ತೇನೆಂದು ಸುಭಾಷ್ ಚಂದ್ರನಿಗೆ ಭರವಸೆ ನೀಡುತ್ತಾಳೆ. ಆದರೆ, ಮಗಳ ಬದಲಿಗೆ ಸುಫಾರಿಕೊಟ್ಟ ತಾಯಿಯನ್ನೇ ಹಂತಕ ಕೊಲ್ಲುತ್ತಾನೆ. ಸದ್ಯ ಕೊಲೆ ಆರೋಪಿ ಪೊಲೀಸರ ವಶದಲ್ಲಿದ್ದಾನೆ….
2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮಾರ್ಚ್ 18 ಬುಧವಾರದಿಂದ ಏಪ್ರಿಲ್ 02 ಗುರುವಾರದ ವರೆಗೆ ಬೆಳಿಗ್ಗೆ 10:15 ಗಂಟೆಯಿಂದ ಮಧ್ಯಾಹ್ನ…
ಯುವ ಆಪದ್ ಮಿತ್ರ ಯೋಜನೆಯ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ದೊಡ್ಡಬಳ್ಳಾಪುರದ ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು…
ಪೊಲೀಸ್ ಠಾಣೆಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರು ಕೊಡಲು ಬಂದ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಾರೆ ಎಂಬ ಆರೋಪದ ಮೇರೆಗೆ ಮೂಡುಬಿದಿರೆ…
ಇಂದು ಸಂಜೆ ಸುಮಾರು 4:30ರಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪ್ರಾರಂಭವಾದ ಮಳೆಯು ಸತತವಾಗಿ 7ಗಂಟೆಯವರೆಗೆ ಬಿದ್ದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿತು. ಅದೇರೀತಿ…
ಬಿಸಿಲಿನ ತಾಪ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರದ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಸಂಜೆ ವರ್ಷದ ಮೊದಲ ಮಳೆ ಸುರಿಯಿತು. ಬಂಗಾಳ…