
ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಾ ಯುವಕರು, ಪುರುಷರನ್ನು ಸೆಳೆದು ಹನಿಟ್ರ್ಯಾಪ್ ಮಾಡ್ತಿದ್ದ ಜಾಲವೊಂದನ್ನು ಕರೀಂನಗರ ಗ್ರಾಮೀಣ ಠಾಣೆ ಪೊಲೀಸರು ಭೇದಿಸಿದ್ದು, ವಿಡಿಯೋ, ಫೋಟೋ ಮಾಡಿಕೊಂಡು ಬ್ಲಾಕ್ಮೇಲ್ ಮಾಡಿ ಹಣ ಪೀಕುತ್ತಿದ್ದ ದಂಪತಿಯನ್ನು ಬಂಧಿಸಿದ್ದಾರೆ.
ಸಾಮಾನ್ಯವಾಗಿ ತನ್ನ ಪತ್ನಿಯನ್ನು ಪರಪುರುಷ ಕೆಟ್ಟದಾಗಿ ನೋಡಿದರೇ ಪತಿ ಸಹಿಸುವುದಿಲ್ಲ. ಇಂತಹ ಸಾಕಷ್ಟು ಜಗಳು ತಾರಕಕ್ಕೇರಿ ಕೊ*ಲೆಯಲ್ಲಿ ಅಂತ್ಯವಾಗಿರುವುದನ್ನೂ ನಾವು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಪತಿರಾಯ ಪತ್ನಿಯನ್ನ ಮುಂದಿಟ್ಟುಕೊಂಡು ಮಾಡಿದ್ದು ಮಾತ್ರ ಘನಘೋರ ಕೃತ್ಯ.
ಪತ್ನಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಆಕರ್ಷಕ ಫೋಟೋಗಳನ್ನು ಪೋಸ್ಟ್ ಮಾಡಿ ಯುವಕರು ಮತ್ತು ಉದ್ಯಮಿಗಳಿಗೆ ಬಲೆ ಬೀಸುತ್ತಿದ್ದಳು. ಸ್ವಲ್ಪ ಕ್ಲೋಸ್ ಆಗ್ತಿದ್ದಂತೆ ಲೈಂಗಿಕ ಕ್ರಿಯೆಗೆ ಆಹ್ವಾನಿಸುತ್ತಿದ್ದಳು. ಹೆಂಡ್ತಿ ಬೇರೊಬ್ಬನ ಜೊತೆ ಮಂಚದ ಮೇಲಿದ್ರೆ, ಗಂಡ ಆ ವಿಡಿಯೋಗಳನ್ನ ರೆಕಾರ್ಡ್ ಮಾಡಿಕೊಳ್ತಿದ್ದ. ಹೀಗೆ ದಂಪತಿ ಕಳೆದ ಮೂರು ವರ್ಷಗಳಿಂದ 150ಕ್ಕೂ ಹೆಚ್ಚು ಯುವಕರು, ಉದ್ಯಮಿಗಳು,ವಿದ್ಯಾರ್ಥಿಗಳಿಗೆ ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿ 3 ಕೋಟಿ ರೂ.ಗೂ ಅಧಿಕ ಹಣ ಸುಲಿಗೆ ಮಾಡಿದ್ದಾರೆ.

ಆಂಧ್ರ ಪ್ರದೇಶದ ಮಂಚೇರಿಯಲ್ ಜಿಲ್ಲೆಯಲ್ಲಿ ಈ ದಂಧೆ ಬಯಲಾಗಿದ್ದು,ವಂಚಕ ಗಂಡ ಹೆಂಡ್ತಿ ಈಗ ಜೈಲಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಆಂಟೆ ಮೆಸೇಜ್ ಬಂತು ಅಂತ ಹೋದ್ರೆ ಬಕ್ರಾ ಆಗ್ತೀರಿ ಹುಷಾರ್.
ತೆಲಂಗಾಣದ ಮಂಚೇರಿಯಲ್ ಮೂಲದ ಈ ದಂಪತಿ ಮಾರ್ಬಲ್ ಮತ್ತು ಇಂಟೇರಿಯರ್ ಕೆಲಸದಲ್ಲಿ ನಷ್ಟ ಅನುಭವಿಸಿದ ಬಳಿಕ ಸುಲಭವಾಗಿ ಹಣಗಳಿಸುವ ಸಲುವಾಗಿ ದಂಧೆಗೆ ಇಳಿದಿದ್ದಾರೆ. ಮಂಚೇರಿಯಲ್ನಿಂದ ಕರೀಂನಗರಕ್ಕೆ ಸ್ಥಳಾಂತರಗೊಂಡ ಬಳಿಕ ದಂಪತಿ ಅರೆಪಲ್ಲಿಯಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿದ್ದರು.
ಈ ವೇಳೆ ಪತ್ನಿಗೆ ಇನ್ಸ್ಟಾಗ್ರಾಂ ಮೂಲಕ ರೀಲ್ಸ್ ಮಾಡುತ್ತಾ, ಯುವಕರನ್ನು, ಉದ್ಯಮಿಗಳನ್ನು ಪರಿಚಯ ಮಾಡಿಕೊಂಡು, ಅವರ ಜೊತೆ ಸಂಬಂಧ ಬೆಳೆಸಲು ಪತಿಯೇ ನೆರವಾಗಿದ್ದಾನೆ. ಪತ್ನಿಯ ಅರೆನಗ್ನ ಫೋಟೋ ಗಳನ್ನು ಫೇಜ್ಗಳಲ್ಲಿ ಅಪ್ಲೋಡ್ ಮಾಡಿದ್ದ ಎನ್ನಲಾಗಿದೆ.
ದಂಪತಿಗಳು ಹೀಗೆ ಸುಮಾರು 100ಕ್ಕೂ ಹೆಚ್ಚು ಮಂದಿ ಜೊತೆ ಪತ್ನಿ ಲೈಂಗಿಕ ಕ್ರಿಯೆ ನಡೆಸಿದ್ರೆ, ಪತಿ ಅದನ್ನು ಸೆರೆ ಹಿಡಿದು ಬ್ಲಾಕ್ಮೇಲ್ ಮಾಡಿ ಹಣ ಸಂಗ್ರಹಿಸಿದ್ದಾರೆ. ಓರ್ವ ವ್ಯಕ್ತಿಯಿಂದ ಸುಮಾರು 12 ಲಕ್ಷ ರೂ.ಗಳನ್ನು ಪೀಕಿದ್ದು, ಅದರಿಂದ ಕಾರು, ರೆಫ್ರಿಜರೇಟರ್, ಹವಾನಿಯಂತ್ರಣ, ಸೋಫಾ ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದ್ದಾರೆ.
ಬಳಿಕ ಅದೇ ವ್ಯಕ್ತಿ ಮತ್ತೆ 5 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು ಕೊಲೆ ಬೆದರಿಕೆ ಹಾಕಿದ್ದಾರೆ. ಆಗ ಜೀವ ಭಯದಿಂದ ಆ ವ್ಯಕ್ತಿ ತನ್ನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ ಕರೀಂನಗರ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ಪೊಲೀಸರು ದಂಪತಿಯನ್ನು ಬಂಧಿಸಿದ್ದು, ಅವರಿಂದ ಕಾರು, ಹಣ, ಮೊಬೈಲ್ ಹಾಗೂ ಖಾಲಿ ಚೆಕ್ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.