
ಬಳ್ಳಾರಿಯಲ್ಲಿ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಣ್ಣ ಮನೆ ಮೇಲೆ ಲೋಕಾಯುಕ್ತ ದಾಳಿ ಪ್ರಕಾರಣಕ್ಕೆ ಸಂಬಂಧಿಸಿದಂತೆ ಬಗೆದೊಷ್ಟು ಬಯಲಾಗುತ್ತಿದೆ ಭ್ರಷ್ಟ ಅಧಿಕಾರಿಯ ಕರಾಳ ಮುಖ.
ಈತನ ಆಸ್ತಿ ನೋಡಿದ್ರೆ ಇಲಾಖೆಗೆ ಬಂದ ದುಡ್ಡನ್ನ ಸದುಪಯೋಗ ಮಾಡಿದ್ದಾರಾ? ಅಥವಾ ಇವರೇ ಮನೆಗೆ ಒಯ್ದ್ರಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.

ಶಿವಣ್ಣ ಮತ್ತು ಕುಟುಂಬಸ್ಥರ ಹೆಸರಿನಲ್ಲಿದ್ದ 14 ನಿವೇಶನ, 44 ಎಕರೆ ಜಮೀನು, ₹8.50 ಲಕ್ಷ ನಗದು, ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗಿದ್ದ ₹20 ಲಕ್ಷ ಹಣ, 600 ಗ್ರಾಂ ಚಿನ್ನ, ದ್ವಿಚಕ್ರ ವಾಹನಗಳು, ಹಲವು ಕಾರುಗಳು ಪತ್ತೆಯಾಗಿದೆ. ಒಟ್ಟಾರೆ ಮೌಲ್ಯ ₹2 ಕೋಟಿಗೂ ಹೆಚ್ಚಿದೆ ಎಂದು ಲೋಕಾಯುಕ್ತ ಎಸ್‌ಪಿ ವಾಸುದೇವರಾಮ್ ತಿಳಿಸಿದ್ದಾರೆ.
ಆದಾಯ ಮೀರಿದ ಶೇ 120ರಷ್ಟು ಆಸ್ತಿ ಪತ್ತೆ ಆಗಿದೆ. ಇನ್ನೂ ಬೇನಾಮಿಯಾಗಿ ಕೋಟ್ಯಾಂತರ ರೂಪಾಯಿ ಅಸ್ತಿ ಮಾಡಿದ್ದಾರಂತೆ ಅಧಿಕಾರಿ ಶಿವಣ್ಣ.