
ಭ್ರಷ್ಟಾಚಾರ ನಿರ್ಮೂಲನೆಗೆ ಪ್ರತಿಯೊಬ್ಬ ವ್ಯಕ್ತಿ ತಮ್ಮ ಮನೆಯಲ್ಲೇ ಬದಲಾವಣೆ ಆರಂಭಿಸಬೇಕು. ಮಕ್ಕಳಿಗೂ ಕೂಡ ಹಿರಿಯರು ಬಾಲ್ಯದಿಂದಲ್ಲೇ ಮೌಲ್ಯಗಳನ್ನು ಕಲಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ವಿಶೇಷಚೇತನರ ಕಲ್ಯಾಣಾಕಾರಿ ಜಗದೀಶ್ ತಿಳಿಸಿದರು.
ತಾಲೂಕಿನ ಕಂಟನಕುಂಟೆಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಭರಿತ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ಮನೆಯಲ್ಲಿ ಪೋಷಕರು ಮೌಲ್ಯಗಳನ್ನು ಬಿತ್ತಿದರೆ, ಆ ಮೌಲ್ಯಗಳು ಸಮಾಜದಲ್ಲಿ ಬೃಹತ್ ಬದಲಾವಣೆ ತರುತ್ತವೆ. ನಾವು ಇಂದು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಬದ್ಧರಾಗಿಲ್ಲದಿದ್ದರೆ, ನಮ್ಮ ಮುಂದಿನ ತಲೆಮಾರಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ. ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲರೂ ಪ್ರಯತ್ನಿಸಬೇಕು ಎಂದರು.
ಜಿಕೆವಿಕೆ ವಿಶ್ವವಿದ್ಯಾಲಯದ ಪ್ರೊ. ಡಾ. ಅನಿತಾ ನಾರಾಯಣಸ್ವಾಮಿ ಮಾತನಾಡಿ, ಮಕ್ಕಳಿಗೆ ಸತ್ಯ, ನಂಬಿಕೆ, ಹಾಗೂ ಪ್ರಾಮಾಣಿಕತೆಯ ಮೌಲ್ಯಗಳನ್ನು ಕಲಿಸುವುದು ಪೋಷಕರ ಮುಖ್ಯ ಕರ್ತವ್ಯ. ನಮ್ಮ ಮಕ್ಕಳ ಗುಣವನ್ನು ಬದಲಾಯಿಸಿದರೆ, ಸಮಾಜದ ಗುಣತತ್ತ್ವವೂ ಬದಲಾಯಿಸಬಹುದು ಎಂದರು. ಜಪಾನ್ ದೇಶದ ಕಡಿಮೆ ಕಳ್ಳತನದ ಉದಾಹರಣೆ ನೀಡುತ್ತಾ, ಮಾನವ ಗುಣಗಳ ಅಳವಡಿಕೆಗೆ ಸಂಬಂಧಿಸಿದ ಜಾಗೃತಿ ಮೂಡಿಸಿದರು.
ಕೊಂಗಡಿಯಪ್ಪ ಕಾಲೇಜಿನ ಪ್ರೊ. ಮಂಜುನಾಥ್ ಬಿ. ಎಸ್ ಮಾತನಾಡಿ, ಭ್ರಷ್ಟಾಚಾರ ಅನ್ನೋದು ಒಂದು ದೊಡ್ಡ ಪಿಡುಗಾಗಿದೆ ಇದು ನಿರ್ಮೂಲನೆ ಆಗಬೇಕಾದರೆ ಮಕ್ಕಳಿಗೆ ನಾವು ಭ್ರಷ್ಟಾಚಾರದ ಬಗ್ಗೆ ಅರಿವು ಮೂಡಿಸಬೇಕು ಮತ್ತು ಮೌಲ್ಯ ಆಧಾರಿತ ಶಿಕ್ಷಣವನ್ನು ನೀಡುವುದರ ಮೂಲಕ ಮುಂದಿನ ದಿನಗಳಲ್ಲಿ ಅವರು ಯಾವುದೇ ಅಕಾರಿಯಾದರೆ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳುತ್ತಾರೆ ಹಾಗೂ ತೃಪ್ತಿಯಿಂದ ಕಾರ್ಯನಿರ್ವಹಿಸುತ್ತಾರೆ ಭ್ರಷ್ಟಾಚಾರದಿಂದ ದೂರ ಉಳಿಯುತ್ತಾರೆ ಎಂದರು.
ಈ ವೇಳೆಯಲ್ಲಿ ಭರಿತ ಟ್ರಸ್ಟ್ ಅಧ್ಯಕ್ಷೆ ಭಾರತಿ, ಉಪನ್ಯಾಸಕ ಪ್ರೊ. ಪವನ್ ಕುಮಾರ್ , ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದರು.