ಭೂ ಸರ್ವೇಗೆ ಡಿಜಿಟಲ್ ಸ್ಪರ್ಶ: ಇನ್ಮುಂದೆ 8 ನಿಮಿಷದಲ್ಲಿ ಮುಗಿಯಲಿದೆ ಜಮೀನು ಸರ್ವೇ ವರ್ಕ್: ವೇಗ, ನಿಖರತೆ, ದಕ್ಷತೆ ಭೂ ಸರ್ವೇಗೆ ರೋವರ್ ತಂತ್ರಜ್ಞಾನ ಬಳಕೆ

ಜಮೀನು ಸರ್ವೇ ವಿಚಾರದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ತಡೆಗೆ ಇನ್ಮುಂದೆ ರೋವರ್‌ ತಂತ್ರಜ್ಞಾನವನ್ನು ಸರ್ಕಾರ ಬಳಸಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ಇದರಿಂದ ಭೂಮಿ ಸರ್ವೇ ಕಾರ್ಯ ಕೇವಲ ಎಂಟು ನಿಮಿಷಗಳಲ್ಲೇ ಮುಗಿಯಲಿದೆ. ಕಡಿಮೆ ಅವಧಿಯಲ್ಲಿ ಸರ್ವೇ ಕೆಲಸ ಮುಗಿಯುವುದರಿಂದ ಸರ್ವೇಯರ್‌ಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಸ್ಯಾಟಲೈಟ್‌ನಿಂದ ಮಾಹಿತಿ ಪಡೆದು ಸ್ವಯಂಚಾಲಿತವಾಗಿ ನಕ್ಷೆ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ.

ಹಿಂದಿನಿಂದಲೂ ಚೈನ್ ಹಿಡಿದೇ ಭೂಮಿ ಅಳೆಯುವ ಸಂಪ್ರದಾಯ ಚಾಲ್ತಿಯಲ್ಲಿದೆ. ಹೆಚ್ಚಾಗಿ ಮನುಷ್ಯನ ಹಸ್ತಕ್ಷೇಪ ಇರುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶವಿತ್ತು. ಒಂದು ನಕ್ಷೆ ತಯಾರಿಸಲು ಮೂವರು 50 ರಿಂದ 70 ನಿಮಿಷ ಭೂಮಿ ಸರ್ವೇ ನಡೆಸಿ ಬಳಿಕ ಕಚೇರಿಗೆ ಬಂದು ನಕ್ಷೆ ಬಿಡಿಸಲು 3 ತಾಸು ಬೇಕಾಗಿತ್ತು. ಆದರೆ, ಈಗ ರೋವ‌ರ್ ಬಳಕೆಯಿಂದ 8 ನಿಮಿಷದಲ್ಲಿ ಎಲ್ಲವೂ ಮುಗಿಯಲಿದೆ. ಸ್ಯಾಟಲೈಟ್‌ನಿಂದ ಮಾಹಿತಿ ಪಡೆದು ಸ್ವಯಂಚಾಲಿತವಾಗಿ ನಕ್ಷೆ ಸಿದ್ಧಪಡಿಸಲಿದೆ. ಅಧಿಕಾರಿಗಳಿಗೆ ಲಂಚ ನೀಡಿ ಬೇಕಾದ ರೀತಿ ನಕ್ಷೆ ಪಡೆಯುವ ಕ್ರಮಕ್ಕೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಕಡಿಮೆ ಅವಧಿಯಲ್ಲಿ ಸರ್ವೇ ಕೆಲಸ ಮುಗಿಯಲಿದ್ದು, ಸರ್ವೇಯರ್‌ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ತಿಳಿಸಿದರು.

ಸರ್ಕಾರಿ ಮತ್ತು ಪರವಾನಗಿ ಹೊಂದಿರುವ ಸರ್ವೇಯರ್‌ಗಳಿಗೂ ವಿತರಿಸಲು 5 ಸಾವಿರ ರೋವರ್ ಖರೀದಿಗೆ ನಿರ್ಧರಿಸಲಾಗಿದೆ. ಮುಂದಿನ 8 ತಿಂಗಳ ಒಳಗಾಗಿ ಸರ್ವೇ ಕೆಲಸ ಸಂಪೂರ್ಣ ಡಿಜಿಟಲ್ ಆಗಬೇಕೆಂಬುದು ನಮ್ಮ ಆಶಯ ಎಂದರು.

ರೋವ‌ರ್ ತಂತ್ರಜ್ಞಾನ ವಿಶೇಷತೆ…

ಸರ್ವೇಯರ್‌ಗಳಿಗೆ 5 ಕೆಜಿ ತೂಕದ ಚೈನ್ ಹಿಡಿದು ಜಮೀನು ಅಳೆಯುವುದು ಸವಾಲಿನ ಕೆಲಸವಾಗಿತ್ತು. ಗುಡ್ಡಗಾಡು, ಕೆರೆ, ಅರಣ್ಯ ಪ್ರದೇಶಗಳಲ್ಲಿ ಸರ್ವೇ ಕ್ಲಿಷ್ಟರವಾಗಿತ್ತು. ಇದೀಗ ರೋವರ್ ಉಪಕರಣದಿಂದ ಸುಲಭವಾಗಿದೆ. ಇದು 800 ಗ್ರಾಂ ಇದ್ದು, ಆಧುನಿಕ ತಂತ್ರಜ್ಞಾನ ಉಪಕರಣವಾಗಿದೆ. ಸರ್ವೇ ಆಫ್ ಇಂಡಿಯಾ ರಾಜ್ಯದಲ್ಲಿ 49 ಕಂಟಿನ್ಯೂಸ್ಲಿ ಅಪರೇಟಿಂಗ್ ರೆಫರೆನ್ಸ್ ಸ್ಟೇಷನ್ (ಸಿಒಆರ್‌ಎಸ್) ಸ್ಥಾಪನೆ ಮಾಡಿದೆ. ಇದರೊಂದಿಗೆ ರೋವರ್ ಸಂಪರ್ಕ ಕಲ್ಪಿಸಿ ಜಮೀನು ಸರ್ವೇ ನಡೆಸಿದಾಗ ಸ್ವಯಂಚಾಲಿತವಾಗಿ ಗಡಿ ಗುರುತು ಮಾಡಿ ಟ್ಯಾಬ್‌ಗೆ ಸಂಪರ್ಕ ನೀಡಲಿದೆ. 2 ಸೆಂಟಿ ಮೀಟರ್ ಮಾತ್ರ ವ್ಯತ್ಯಾಸ ಬರಲಿದೆ. 6 ತಿಂಗಳಿಂದ ಪ್ರಾಯೋಗಿಕವಾಗಿ ಬಳಕೆ ಮಾಡಿದ್ದು, ಸರ್ವೇಯರ್ ಗಳಿಗೆ ತರಬೇತಿ ನೀಡಲಾಗಿದೆ. ರೋವರ್ ಒಂದಕ್ಕೆ 3.50 ಲಕ್ಷ ರೂ. ಆಗಲಿದೆ ಎಂದು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತ ಜೆ. ಮಂಜುನಾಥ್ ಮಾಹಿತಿ ನೀಡಿದರು.

Ramesh Babu

Journalist

Recent Posts

ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು- ಎಸ್ಪಿ ಸಿ.ಕೆ ಬಾಬಾ

ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನಿಗೆ ಸಂಬಂಧಿತ ಸಮಸ್ಯೆಗಳ…

10 hours ago

ಗೊತ್ತಿರದ ವಿಷಯ ಕಲಿಯುವ ಕಡೆ ಗಮನ ಕೇಂದ್ರೀಕರಿಸಿ- ಡಾ. ಸೀಮಾ ಚೋಪ್ರಾ

"ನೀವು ಮಾಡುವ ಕೆಲಸವನ್ನು ಪ್ರೀತಿಸಿ. ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಕಲಿಯುವ ಕಡೆಗೆ ಗಮನ ಕೇಂದ್ರೀಕರಿಸಿ ಮತ್ತು ಜೀವನಪರ್ಯಂತ ಕಲಿಯುತ್ತಲೇ ಇರಿ,…

11 hours ago

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನಿಂದ ಕ್ರೂರವಾಗಿ ಹಲ್ಲೆ: ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು: ಒಬ್ಬ ಬಾಲಕ ಜೀವನ್ಮರಣ ಹೋರಾಟ

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…

19 hours ago

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

1 day ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

2 days ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

2 days ago