ಭೂ ಮಾಪನ ಕಾರ್ಯ ಸ್ಥಗಿತ, ರೈತರ ಆಕ್ರೋಶ: ಪರ್ಯಾಯ ವ್ಯವಸ್ಥೆ ಮಾಡುವಂತೆ ಒತ್ತಾಯ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ಪರವಾನಗಿ ಭೂ ಮಾಪಕರು ಎರಡು ತಿಂಗಳಿಂದ ಮುಷ್ಕರ ಹೂಡಿರುವುದರಿಂದ ಭೂ ಮಾಪನ ಇಲಾಖೆಯ ಎಲ್ಲ ಕೆಲಸಗಳು ಸ್ಥಗಿತಗೊಂಡಿದೆ. ಇದರಿಂದಾಗಿ ಭೂ ಮಾಪನ ಕಚೇರಿ ಸ್ತಬ್ಧವಾಗಿದೆ. ಭೂ ಸರ್ವೆ, ಹದ್ದುಬಸ್ತ್, ಪೋಡಿ ಸೇರಿದಂತೆ ಇತರೆ ಕೆಲಸಗಳಿಗೆ ಸಲ್ಲಿಕೆಯಾಗಿರುವ ಎರಡು ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇ ಆಗದೇ ಉಳಿದಿವೆ ಎಂದು ಕೆಸ್ತೂರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ರಮೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ನಗರದ ತಾಲ್ಲೂಕು ಕಚೇರಿಯ ಆವರಣದಲ್ಲಿರುವ ಸೋಮವಾರ ಭೂ ಮಾಪನ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಅವರು ಮಾತನಾಡಿದರು. ರೈತರ ಜಮೀನು ಮಾರಾಟ, ಹಕ್ಕು ಬದಲಾವಣೆ ಎಲ್ಲ ಕೆಲಸಗಳಿಗೂ ತೊಡಕು ಉಂಟಾಗಿದೆ. ಸರ್ಕಾರ ಕೂಡಲೇ ಭೂ ಮಾಪಕರ ಬೇಡಿಕೆ ಈಡೇರಿಸಿ ಅವರನ್ನು ಕೆಲಸಕ್ಕೆ ನಿಯೋಜಿಸಬೇಕು, ಇಲ್ಲವೇ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಸಾವಿರಾರು ಅರ್ಜಿಗಳು ಬಾಕಿ:

ಎರಡು ತಿಂಗಳಿಂದ ಭೂ ಮಾಪನ ಇಲಾಖೆಯಲ್ಲಿ ಜಮೀನು ಸರ್ವೆ, ಹದ್ದು ಬಸ್ತ್ , 11ಇ, ಪೋಡಿ, ದಾರಿ ನಕ್ಷೆಯ ಅರ್ಜಿಗಳು ಅರ್ಜಿ ವಿಲೇವಾರಿಯಾಗುತ್ತಿಲ್ಲ. ರೈತರ ಪಾಲಿಗೆ ಈ ಇಲಾಖೆ ಸತ್ತು ಹೋಗಿದೆ. ರೈತರ ಸಮಸ್ಯೆ ಯಾರೂ ಆಲಿಸುತ್ತಿಲ್ಲ. ಸರ್ವೆ ಇಲಾಖೆಯ ಈ ಸಮಸ್ಯೆಯಿಂದ ಜಮೀನುಗಳ ಮಾರಾಟ ಪ್ರಕ್ರಿಯೆ ನಡೆಯುತ್ತಿಲ್ಲ. ನಮ್ಮ ತಾಲ್ಲೂಕಿನಲ್ಲಿ 2000 ಸಾವಿರಕ್ಕೂ ಅಧಿಕ ಅರ್ಜಿಗಳ ವಿಲೇವಾರಿಯಾಗಬೇಕಿದೆ. ರೈತರು ತಮ್ಮ ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ವೆಚ್ಚ, ಮದುವೆ ಕಾರ್ಯಗಳಿಗೆ ಹಣ ಹೊಂದಿಸುವುದು ಕಷ್ಟವಾಗಿದೆ. ಸರ್ಕಾರ ಕೂಡಲೇ ಭೂ ಮಾಪಕರ ಬೇಡಿಕೆ ಈಡೇರಿಸಿ ಭೂ ಸರ್ವೆ ಕಾರ್ಯಗಳನ್ನು ಮಾಡಿಸಬೇಕು ಎಂದು ರಮೇಶ್ ಗೌಡ ಒತ್ತಾಯಿಸಿದರು.

ಬೇಸಿಗೆ ಆಗಿರುವುದರಿಂದ ರೈತರು ಬೆಳೆಗಳನ್ನ ಕಟಾವು ಮಾಡಿರುತ್ತಾರೆ. ಇದೀಗ ಜಮೀನುಗಳ ವ್ಯಾಪಾರ, ಕುಟುಂಬದಲ್ಲಿ ಆಸ್ತಿಗಳ ವಿಂಗಡಣೆ ಸೇರಿಸಂತೆ ಹಲವು ಕೆಲಸಗಳು ನಡೆಯುವ ಸಮಯವಾಗಿದೆ. ತಾಲ್ಲೂಕಿನಲ್ಲಿ ಸರ್ವೇ ಬಾಕಿ ಇರುವ ಅರ್ಜಿಗಳು 590, ಹದ್ದು ಬಸ್ತ್ , 11ಇ, ಪೋಡಿ, ದಾರಿ ನಕ್ಷೆಯ 1863 ಅರ್ಜಿಗಳು ವಿಲೇವಾರಿಯಾಗದೆ ನಿಂತಿವೆ. ಪರವಾನಗಿ ಪಡೆದ ಭೂ ಮಾಪಕರ ಪ್ರತಿಭಟನೆಯಿಂದಾಗಿ ಸಾಕಷ್ಟು ಅನಾನುಕೂಲಗಳಾಗಿವೆ. ನಮ್ಮ ಇಲಾಖೆಯ ಆಯುಕ್ತರಿಂದ ಕೆಲಸಗಳಿಗೆ ಪರ್ಯಾಯ ವ್ಯವಸ್ಥೆಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೆಶಕ ಮೋಹನ್ ಕುಮಾರ್ ಹೇಳಿದರು.

ಈ ವೇಳೆ ಕೆಸ್ತೂರು ರಮೇಶ್ ಗೌಡ, ನಾಗರಾಜು, ಶಶಿಕುಮಾರ್, ಉಮೇಶ್, ಶಿವಕುಮಾರ್ ಮತ್ತಿತ್ತರರು ಇದ್ದರು.

Ramesh Babu

Journalist

Recent Posts

ತಿಂಗಳಾಂತ್ಯಕ್ಕೆ ಮೊದಲ ಬಗರ್ ಹುಕುಂ ಸಮಿತಿ ಸಭೆ – ಶಾಸಕ ಧೀರಜ್ ಮುನಿರಾಜು

ಇದೇ ಏಪ್ರಿಲ್ ತಿಂಗಳಾಂತ್ಯಕ್ಕೆ ರೈತರಿಗೆ ಭೂ ಮಂಜೂರು ಮಾಡುವ ಬಗರ್ ಹುಕುಂ ಸಮತಿ ಸಭೆಯನ್ನು ಮಾಡಲಾಗುವುದು, ಸಭೆಯಲ್ಲಿ ಕನಿಷ್ಟ 100…

44 minutes ago

ಮಹಿಳೆಯರ ಸಬಲೀಕರಣಕ್ಕೆ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆ ಜಾರಿ- ಬಿಜೆಪಿ ರಾಜ್ಯ ವಕ್ತಾರರಾದ ಅಶ್ವಿನಿ ಶಂಕರ್

ಕೇಂದ್ರ ಸರ್ಕಾರ ಕಳೆದ ಒಂದು ದಶಕದಿಂದ ವಿವಿಧ ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಒಂದೊಂದೆ ಹೆಜ್ಜೆ ಇಟ್ಟುಕೊಂಡು ಬರುತ್ತಿದೆ ಎಂದು…

2 hours ago

ಆಶಾ ಭೋಸ್ಲೆ…..ಸುಮಾರು 12000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದವರು- ಅವರಿಗೆ ‌ಭಾವಪೂರ್ಣ ಶ್ರದ್ಧಾಂಜಲಿ……

ಆಶಾ ಭೋಸ್ಲೆ..... ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ...... ಶಬ್ದ…

13 hours ago

Документ_9

Effektives Schreiben von Hausarbeiten Das Schreiben von Hausarbeiten kann für viele Studierende eine große Herausforderung…

16 hours ago

ನಾನು ಜೆಡಿಎಸ್ ತಾಲೂಕು ಅಧ್ಯಕ್ಷ ಸ್ಥಾನಕ್ಕಾಗಿ ವರಿಷ್ಠರ ಬಳಿ ಕೇಳಿದ್ದೇನೆ- ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ- ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ

ನಾನು ಜೆಡಿಎಸ್ ತಾಲೂಕು ಅಧ್ಯಕ್ಷ ಸ್ಥಾನಕ್ಕಾಗಿ ವರಿಷ್ಠರ ಬಳಿ ಕೇಳಿದ್ದೇನೆ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಪಕ್ಷದ ವರಿಷ್ಠರು ಯಾವುದೇ…

24 hours ago

ಹೆಣ್ಣಿನ‌ ಹಿತರಕ್ಷಣೆಗಾಗಿ ಮಹಿಳಾ ಪೊಲೀಸ್ ಠಾಣೆ ಸದಾ ಸನ್ನದ್ಧ- ಮಹಿಳಾ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಪಂಕಜಾ

ಹೆಣ್ಣಿನ‌ ಹಿತರಕ್ಷಣೆಗಾಗಿ ದೊಡ್ಡಬಳ್ಳಾಪುರದಲ್ಲಿ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪನೆ ಮಾಡಲಾಗಿದೆ..ಈ ಮಹಿಳಾ ಠಾಣೆಯಲ್ಲಿ ಅತ್ಯಾಚಾರ, ವರದಕ್ಷಿಣೆ ನಿಷೇಧ ಕಾಯ್ದೆ, ಮಕ್ಕಳ…

1 day ago