ಭೂ ಕಬಳಿಕೆದಾರರಿಂದ ಸರ್ಕಾರಿ ಗೋಮಾಳವನ್ನು ರಕ್ಷಿಸಿ- ದಲಿತ ಸಂಘರ್ಷ ಸಮಿತಿ (ಭೀಮಬಣ)‌ ರಾ.ಪ್ರ.ಕಾರ್ಯದರ್ಶಿ ಯು.ಮುನಿರಾಜು

ತಾಲೂಕಿನ ಕಸಬಾ ಹೋಬಳಿಯ ಪಾಲನಜೋಗಿಹಳ್ಳಿ ಗ್ರಾಮದ ಸರ್ವೆ ನಂ.21ರಲ್ಲಿ 18ಎಕರೆ 22ಗುಂಟೆ ಭೂಮಿ ಗೋಮಾಳ ಎಂದು ಸರ್ಕಾರಿ ದಾಖಲಾತಿಗಳಲ್ಲಿ ಇದೆ. 18ಎಕರೆ 22ಗುಂಟೆ ಜಮೀನಿನಲ್ಲಿ ರಂಗಮ್ಮ ಕೋಂ ವೆಂಕಟೇಶಯ್ಯ ಎಂಬುವವರಿಗೆ ತಹಶೀಲ್ದಾರ್ ಆದೇಶದಂತೆ 2ಎಕರೆಯನ್ನ ದರಖಾಸ್ತು ಮೂಲಕ ಮಂಜೂರು ಮಾಡಲಾಗಿದೆ. ಉಳಿಕೆ 16ಎಕರೆ 22ಗುಂಟೆ ಸರ್ಕಾರಿ ಗೋಮಾಳವು ಭೂಗಳ್ಳರ ಪಾಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಭೀಮ‌ ಬಣದ ರಾಜ್ಯ ಪ್ರಧಾನ‌ ಕಾರ್ಯದರ್ಶಿ ಯು.ಮುನಿರಾಜು ಆರೋಪಿಸಿದರು.

ಈ ನಗರದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಮಾಡುವ ಮೂಲಕ‌ ಭೂಗಳ್ಳರಿಂದ ಸರ್ಕಾರಿ ಗೋಮಾಳವನ್ನ ರಕ್ಷಣೆ ಮಾಡುವಂತೆ ಆಗ್ರಹಿಸಿ ಮಾತನಾಡಿದ ಅವರು, ಕೂಡಲೇ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ಸುಳ್ಳು ದಾಖಲೆ ಸೃಷ್ಠಿಸಿ ಗೋಮಾಳ ಕಬಳಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಮೂರು ಬಾರಿ ಈ ಕುರಿತು ಬೃಹತ್ ಪ್ರತಿಭಟನೆ ಮಾಡುವ ಮೂಲಕ‌ ಈ ಹಿಂದೆ ಇದ್ದ ತಹಶೀಲ್ದರ್ ಅವರ ಗಮನಕ್ಕೆ ತರಲಾಗಿತ್ತು, ನಮ್ಮ ಮನವಿ ಮೇರೆಗೆ ತಹಶೀಲ್ದರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು, ದಾಖಲಾತಿಗಳನ್ನ ಕೂಲಕಂಷವಾಗಿ ಪರೀಕ್ಷೀಸಿ ಇದು ಸರ್ಕಾರಿ ಗೋಮಾಳ ಎಂದು ಮಾಹಿತಿ ನೀಡಿದ್ದರು. ಎಂ.ಆರ್ ವಜಾಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಆದರೆ ಇದೂವರೆಗೂ ಭೂಗಳ್ಳರಿಂದ ಗೋಮಾಳವನ್ನ ಮುಟ್ಟುಗೋಲು ಹಾಕಿಕೊಳ್ಳಲಿಲ್ಲ ಎಂದು ದೂರಿದರು.

ಆದ್ದರಿಂದ ನೂತನ ತಹಶೀಲ್ದಾರ್ ಅವರು ಮತ್ತೊಮ್ಮೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ, ದಾಖಲಾತಿಗಳನ್ನ ಪರೀಕ್ಷಿಸಿ ಕಾನೂನು ಉಲ್ಲಂಘಿಸಿರುವವರ ವಿರುದ್ಧ ಕ್ರಮ ಕೈಗೊಂಡು ಸರ್ಕಾರಿ ಜಮೀನನ್ನು ಭೂ ರಹಿತರಿಗೆ ನೀಡಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನಾಕಾರರ ಮನವಿ ಸ್ವೀಕರಿ‌ ಸ್ಥಳ ಪರಿಶೀಲನೆ ನಡೆಸಿದ ನಂತರ ವರದಿಯನ್ನ ಸಿದ್ಧಪಡಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಹಶೀಲ್ದಾರ್ ಅವರು ತಿಳಿಸಿದರು

ಈ ವೇಳೆ ರಾಜ್ಯಾಧ್ಯಕ್ಷ ಎಂ.ವಿ.ಗುರುಪ್ರಕಾಶ್ ಸೇರಿದಂತೆ ಸಂಘಟನೆಯ ಸದಸ್ಯರು, ಮುಖಂಡರು ಸೇರದಂತೆ ಇತರರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ದೊಡ್ಡಬಳ್ಳಾಪುರ: ಕೊಳೆತ ಸ್ಥಿತಿಯಲ್ಲಿ ತಲೆ ಇಲ್ಲದ  ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ನೆಲಮಂಗಲ–ಮಧುರೆ ಮುಖ್ಯರಸ್ತೆಯ ಕನ್ನಮಂಗಲ ಗೇಟ್ ಸಮೀಪ…

9 hours ago

ಮಹಾಲಯ ಅಮಾವಾಸ್ಯೆ – ಪಿತೃ ಪಕ್ಷ – ಎಡೆ ಹಬ್ಬ….

ಮತ್ತೆ ಮತ್ತೆ ಕಾಲದ ಅಗ್ನಿಪರೀಕ್ಷೆಯಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಆಚರಣೆಗಳನ್ನು ಪುನರ್ ವಿಮರ್ಶೆಗೊಳಪಡಿಸಿ, ಅನುಭವದ ಆಧಾರದ ಮೇಲೆ ಸಾರ್ವತ್ರಿಕ ಸತ್ಯಗಳನ್ನು…

15 hours ago

ಯೋಗ್ಯತೆ ಇದ್ದರೆ ಎಸ್‌ಡಿಆರ್‌ಎಫ್ ಹಣ ಕೊಡಿಸಿ- ಕುಮಾರಸ್ವಾಮಿ ಟೀಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಬರ ಪರಿಹಾರದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿದ್ದ ಟೀಕೆಗೆ ಸಚಿವ…

1 day ago

ಪ್ರತಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದ ಕಾರ್ಮಿಕರ ಶಾಲೆ: ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಕಾರ್ಮಿಕರಿಗಾಗಿಯೇ ಪ್ರತಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಶಾಲೆ ತೆರೆಯಲು ಸರ್ಕಾರ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ…

1 day ago

ಸಾಗುವಳಿ ಚೀಟಿಗಳ ಅಕ್ರಮ ಮಂಜೂರಾತಿ ಬಯಲು; ಅರ್ಹರಿಗಷ್ಟೇ ಹಕ್ಕು, ಸ್ವಯಂಘೋಷಿತ ಬುದ್ಧಿವಂತರಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ನಾಗಮಂಗಲ: ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ತಾಲೂಕಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬರೋಬ್ಬರಿ 691 ಪ್ರಕರಣಗಳಲ್ಲಿ ಕಾನೂನುಬಾಹಿರವಾಗಿ ಸಾಗುವಳಿ ಚೀಟಿ…

1 day ago

ಪೋಷಕರ ಗೌರವವೇ ಬದುಕಿನ ಮೊದಲ ಪಾಠ- ಸುರೇಶ್ ಗೌಡ ಬಿ

ದೊಡ್ಡಬಳ್ಳಾಪುರ: ಯುವಕರು ಮೊದಲು ತಂದೆ-ತಾಯಿಯನ್ನು ಗೌರವಿಸುವುದನ್ನು ಕಲಿಯಬೇಕು. ನಂತರ ಪಾಠ-ಪ್ರವಚನಗಳನ್ನು ಕಲಿಯಬೇಕು ಎಂದು ಹೈಕೋರ್ಟ್ ವಕೀಲರಾದ ಸುರೇಶ್ ಗೌಡ ಬಿ.ವಿದ್ಯಾರ್ಥಿಗಳಿಗೆ…

1 day ago