ಇಂದು ಹಠಾತ್ ನೆ ಬಂದ ಬಿರುಗಾಳಿ ಸಮೇತ ಮಳೆಗೆ ತತ್ತರಿಸಿದ ತಾಲೂಕಿನ ಜನತೆ. ತಾಲೂಕಿನ ಜಿಂಕೆಬಚ್ಚಹಳ್ಳಿ ಗ್ರಾಮದಲ್ಲಿನ ಮನೆಗಳ ಮೇಲ್ಚಾವಣಿಯ ಸೀಟುಗಳು ಹಾರಿ ಹೋಗಿದೆ. ಇದರಿಂದ ಮಳೆಯ ನೀರೆಲ್ಲ ಮನೆಯೊಳಗೆ ನುಗ್ಗಿ ವಸ್ತುಗಳಿಗೆ ಹಾನಿಯಾಗಿದೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಿಂಕೆ ಬಚ್ಚಹಳ್ಳಿ ಗ್ರಾಮದ ಕಾಂತರಾಜು, ಪ್ರಭಾಕರ್, ಮುನಿರಾಜು ಸೇರಿದಂತೆ ಹಲವು ಮನೆಗಳ ಶೀಟುಗಳು ಹಾರಿ ಹೋಗಿವೆ. ಮನೆಯಲ್ಲಿನ ಪಾತ್ರೆ ಸಾಮಾನುಗಳು ನಜ್ಜುಗುಜ್ಜಾಗಿರುವುದು ಕಂಡುಬಂದಿದೆ.
ಹಾಲಿನ ಡೇರಿ ಬಳಿ ಬೃಹತ್ ಮರ ನೆಲಕ್ಕುರಳಿ ವಿದ್ಯುತ್ ಲೈನ್ ಮೇಲೆ ಬಿದ್ದಿದೆ. ಇದರಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.
ಇದಲ್ಲದೆ ಹೂ, ಹಣ್ಣುಗಳು ಸಹ ಧರೆಗುರುಳಿದ್ದು , ರೈತ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಮಾವಿನ ಕಾಯಿ, ಅಂಜುರದಣ್ಣು ಸೇರಿದಂತೆ ಹಲವು ತರಕಾರಿ ಸಹ ಮಣ್ಣುಪಾಲಾಗಿದೆ.