ಭಾರೀ ಬಿರುಗಾಳಿ: ಅರಳಿಮರ ಕೊಂಬೆ ಬಿದ್ದು ವ್ಯಕ್ತಿ ಸಾವು

ದೊಡ್ಡಬಳ್ಳಾಪುರ ತಾಲೂಕಿನ ಮೇಡಿಹಳ್ಳಿ ಗ್ರಾಮದಲ್ಲಿಂದು ಸಂಜೆ ಸುಮಾರು 4 ಗಂಟೆಯಲ್ಲಿ ಬಿರುಸಾಗಿ ಬೀಸಿದ ಬಿರುಗಾಳಿಗೆ ಸುಮಾರು 500-600 ವರ್ಷದ ಅರಳಿಮರ ಕೊಂಬೆ ಅಂಗಡಿ ಬಳಿ ಕುಳಿತಿದ್ದ ವ್ಯಕ್ತಿ ಮೇಲೆ ಬಿದ್ದಿದ್ದು,  ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸುವಾಗ ಅಸುನೀಗಿದ್ದಾನೆ ಎಂದು ತಿಳಿದುಬಂದಿದೆ….

ಮೇಡಿಹಳ್ಳಿ ನಿವಾಸಿ ವೆಂಕಟರಮಣಪ್ಪ (56)‌ಮೃತ ದುರ್ದೈವಿ.

ಅರಳಿಮರ ಕೆಳಗೆ ಪೆಟ್ಟಿಅಂಗಡಿ ಇಡಲಾಗಿದೆ. ಎಂದಿನಂತೆ ಈದಿನವೂ ಸಹ ಅಂಗಡಿ ಬಳಿ ಬಂದು ವೆಂಕಟರಮಣಪ್ಪ ಕುಳಿತಿಕೊಳ್ಳುತ್ತಿದ್ದ. ದುರದೃಷ್ಟವಶಾತ್ ಇಂದು ಬೀಸಿದ ಬಿರುಗಾಳಿಗೆ ಒಣಗಿದ್ದ ಅರಳಿಮರದ‌ ಕೊಂಬೆ ವ್ಯಕ್ತಿ ಮೇಲೆ ಬಿದ್ದಿದೆ. ಪೆಟ್ಟಿಅಂಗಡಿ ಒಳಗೆ ವ್ಯಾಪಾರ ಮಾಡುತ್ತಿದ್ದ ಮಹಿಳೆ‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಗ್ರಾಮದಲ್ಲಿರುವ ಒಣಗಿರುವ ಮರಗಳನ್ನು ತೆರವು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಂಟನಕುಂಟೆ ಗ್ರಾಮಪಂಚಾಯಿತಿಗೆ ತಿಳಿಸಿಲಾಗಿತ್ತು. ಆದರೆ ನಮ್ಮ ಮನವಿಗೆ ಅಧಿಕಾರಿಗಳು ಕ್ಯಾರೆ ಎಂದಿಲ್ಲ. ಇದೀಗ ಒಂದು ಸಾವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ….

Leave a Reply

Your email address will not be published. Required fields are marked *