
ಭಾರತ ಸರ್ಕಾರದ ಹಣಕಾಸು ಸೇರ್ಪಡೆ ಪರಿಪೂರ್ಣ ಶಿಬಿರದಲ್ಲಿ ಅನ್ ಲೈನ್ ಹಣ ಕಬಳಿಕೆ ಬಗ್ಗೆ ಅರಿವು ಮೂಡಿಸಿದ್ದೇವೆ, ಈ ಶಿಬಿರವು ಕೇಂದ್ರ ಸರ್ಕಾರದ ಆರ್ಥಿಕ ಸೇವೆಗಳ ಇಲಾಖೆ ಅಡಿಯ ಜನ್ ಸುರಕ್ಷಾ ಶಿಬಿರವಾಗಿದೆ. ಸ್ಥಳದಲ್ಲಿ ರೀ. ಕೆವೈಸಿ ಉಪಕ್ರಮ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಜನಧನ ಯೋಜನೆ, ಅಟಲ್ ಪಿಂಚಣಿ ಯೋಜನೆ, ಪಿಎಂ ಜೀವನಜ್ಯೋತಿ ವಿಮಾ ಯೋಜನೆ, ಪಿಎಂ ಸುರಕ್ಷಾ ವಿಮಾ ಯೋಜನೆ, ಡಿಜಿಟಲ್ ಹಣಕಾಸು ವಂಚನೆ ಪ್ರಕರಣಗಳ ಕುರಿತು ಅರಿವು ಮೂಡಿಸುವುದಾಗಿದೆ ಎಂದು ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಸತ್ಯನಾರಾಯಣ ರಾಜು ಹೇಳಿದರು.
ಭಾರತ ಸರಕಾರದ ಹಣಕಾಸು ಸೇರ್ಪಡೆ ಪರಿಪೂರ್ಣ ಕಾರ್ಯಕ್ರಮವನ್ನು ಕೆನೆರಾ ಬ್ಯಾಂಕ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಾರ್ಗದರ್ಶಿ(ಲೀಡ್) ಬ್ಯಾಂಕ್ ಸಹಯೋಗದಲ್ಲಿ ಬೃಹತ್ ಶಿಬಿರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ಹೊರವಲಯದ ಕೃಷಿ ಕುಟೀರ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಬಿರದಲ್ಲಿ ಸುಮಾರು 12 ಫಲಾನುಭವಿಗಳಿಗೆ ಪಿ.ಎಂ.ಸುರಕ್ಷಾ ವಿಮಾ ಯೋಜನೆ, ಪಿ.ಎಂ.ಜೀವನಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ತಲಾ 2 ಲಕ್ಷ ಚೆಕ್ ವಿತರಣೆ ಮಾಡಿ, ಸ್ಥಳದಲ್ಲೆ 60 ಅರ್ಜಿ ನಮೂನೆಗಳು ವಿತರಿಸಲಾಗಿದೆ ಎಂದರು.

ನಂತರ ಆರ್.ಬಿ.ಐ. ಪ್ರಾದೇಶಿಕ ನಿರ್ದೇಶಕಿ ಸೋನಾಲಿ ಸಿನ್ಹಾ ಗುಪ್ತಾ ಮಾತನಾಡಿ, ಸಾರ್ವಜನಿಕರೇಲ್ಲರೂ ಬ್ಯಾಂಕಿನ ಖಾತೆ ಹೊಂದಬೇಕು. ಜನ್ ಧನ್ ಖಾತೆ ಕೈಗೊಂಡು 10 ವರ್ಷವಾಗಿದ್ದಾರೆ ರಿ ಕೆವೈಸಿ ಕೈಗೊಳ್ಳಬೇಕು. ಡಿಜಿಟಲ್ ಹಣಕಾಸು ವಂಚನೆಯಿಂದ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು. ಅಟಲ್ ಪಿಂಚಣಿ ಯೋಜನೆ, ಪಿಎಂ ಜೀವನಜ್ಯೋತಿ ವಿಮಾ ಯೋಜನೆ, ಪಿಎಂ ಸುರಕ್ಷಾ ವಿಮಾ ಯೋಜನೆ, ಡಿಜಿಟಲ್ ಹಣಕಾಸು ವಂಚನೆ ಬಗ್ಗೆ ಜಾಗೃತೆಯಿಂದ ಇರಬೇಕು ಎಂದರು.
ಬೆಂ.ಗ್ರಾ.ಜಿಲ್ಲಾ ಬ್ಯಾಂಕ್ ನ ಎಜಿಎಂ ಕೃಷ್ಣ ಚೈತನ್ಯ ರೆಡ್ಡಿ ಮಾತನಾಡಿ, ಇಂದು ಈ ಶಿಬಿರದಲ್ಲಿ ಗ್ರಾಹಕರಿಗೆ ಕೇಂದ್ರ ಸರಕಾರದ ಎಲ್ಲಾ ವಿಮಾ ಯೋಜನೆ ತಿಳಿಸಲಾಗಿದೆ. ಸ್ಥಳದಲ್ಲೇ ಗ್ರಾಹಕ ಸೇವಾ ಪ್ರತಿನಿಧಿಯಿಂದ ವಿಮೆ ಕೈಗೊಳ್ಳುವ ಅರ್ಜಿಗಳನ್ನು ಉಚಿತವಾಗಿ ವಿತರಿಸಿ, ದಾಖಲಾತಿ ಸಂಗ್ರಹಿಸಿದ್ದೇವೆ. ಆರ್.ಬಿ.ಐ. ಮುಖ್ಯಸ್ಥೆ ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದು ಸಂತಸ ತಂದಿದೆ ಎಂದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ರಾಮಾಂಜಿ ಮಾತನಾಡಿ, ಸ್ಥಳದಲ್ಲೇ ಈ ಶಿಬಿರದ ಮಹತ್ವವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಗಿದೆ, ಕೇಂದ್ರ ಸರಕಾರದ ಯೋಜನೆಯನ್ನು ಜನರು ಅರ್ಥೈಸಿಕೊಂಡಿದ್ದಾರೆ, 600 ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ, ಇದಕ್ಕೆ ಜನ ಪ್ರತಿನಿಧಿಗಳು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.
ಬೆಂ.ಗ್ರಾ.ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಜಯಶೇಖರ್ ಮಾತನಾಡಿ, ಕೇಂದ್ರ ಸರಕಾರದ ಪ್ರಧಾನ ಮಂತ್ರಿ ವಿಮಾ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಬಂದಿದೆ, ಡಿಜಿಟಲ್ ಬ್ಯಾಂಕಿಂಗ್ ನ ಉಪಯೋಗ ಮತ್ತು ದುರುಪಯೋಗದ ಬಗ್ಗೆ ತಿಳಿಸಿದ್ದೇವೆ, ಡಿಜಿಟಲ್ ಬ್ಯಾಂಕಿಂಗ್ ನಲ್ಲಿ ಹಣ ತೊಂದರೆಯಾದಾಗ 1930 ದೂರವಾಣಿ ಮಾಡಬಹುದು, ಇಂದು ಸುಮಾರು ಸಾವಿರಾರು ಮಹಿಳೆಯರಿಗೆ ಕೇಂದ್ರ ಸರಕಾರದ ಪ್ರಧಾನಮಂತ್ರಿ ವಿಮಾ ಯೋಜನೆ ಬಗ್ಗೆ ತಿಳಿಸಿದ್ದೇವೆ, ಆರ್.ಬಿ.ಐ. ಬ್ಯಾಂಕ್ ಮುಖ್ಯಸ್ಥರು ಮತ್ತು ಸಿಬ್ಬಂದಿ ಆಗಮಿಸಿರುವುದು ಸಂತಸವಾಗಿದೆ, ಜೊತೆಗೆ ಕೊಡಿಗೇಹಳ್ಳಿ ಗ್ರಾ.ಪಂ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದ ಲಾಭ ಪಡೆದರು, 12 ಫಲಾನುಭವಿಗಳಿಗೆ ಚೆಕ್ ವಿತರಿಸಿದ್ದೇವೆ ಎಂದರು.

ಕೊಡಿಗೇಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಆಶಾರಾಣಿ ಮಾತನಾಡಿ, ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಜನರು, ರೈತರಿಗೆ, ಮಹಿಳೆಯರಿಗೆ ಇಂದಿನ ಶಿಬಿರದ ಸಹಕಾರ ಪಡೆದಿದ್ದಾರೆ, ಫಲಾನುಭವಿಗಳಿಗೆ 2 ಲಕ್ಷ ದೊರೆತಿರುವುದು ಬೇರೆಯವರಿಗೆ ವಿಮೆ ಪ್ರಾರಂಭಿಸಲು ಉತ್ಸಾಹ ಬಂದಿದೆ, ಕೇಂದ್ರ ಸರಕಾರದ ಯೋಜನೆಯ ಗ್ರಾಮೀಣರಿಗೆ ಸಹಕಾರಿಯಾಗಿದೆ ಎಂದರು.
ಫಲಾನುಭವಿಗಳಾದ ಗಂಗಗುಡ್ಡಯ್ಯ, ಲಕ್ಷ್ಮೀ
ಮಾತನಾಡಿ, ಈ ಕೇಂದ್ರ ಸರಕಾರದ ಯೋಜನೆಯಿಂದ 2 ಲಕ್ಷ ನಮಗೆ ವಿಮೆ ಮೊತ್ತವಾಗಿದ್ದು, ನನ್ನ ಪತ್ನಿ ಯೋಜನೆ ಕೈಗೊಂಡು ಮೃತರಾದ ಹಿನ್ನಲೆ, ಈ 2 ಲಕ್ಷ ಹಣವನ್ನು ಮಗಳ ಮದುವೆಗೆ ಹಾಗೂ ಮಗನ ವಿದ್ಯಾಭ್ಯಾಸಕ್ಕೆ ಬಳಸಿರುವೆ ಎಂದರು.
ಕಾರ್ಯಕ್ರಮದಲ್ಲಿ ಆರ್.ಬಿ.ಐ. ಪ್ರಾದೇಶಿಕ ನಿರ್ದೇಶಕಿ ಸೋನಾಲಿ ಸಿನ್ಹಾ ಗುಪ್ತ, ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಸತ್ಯನಾರಾಯಣ ರಾಜು, ಬೆಂ.ಗ್ರಾ.ಜಿಲ್ಲಾ ಎ.ಡಿ.ಸಿ. ಸಯ್ಯಾದ್ ಆಯಿಷಾ, ಕೆನರಾ ಬ್ಯಾಂಕ್ ಸಿಜಿಎಂ ಮಹೇಶ್ ಪೈ, ಭಾಸ್ಕರ್ ಚಕ್ರಮರ್ತಿ, ಕೃಷ್ಣ ಚೈತನ್ಯ ರೆಡ್ಡಿ, ಗ್ರಾ.ಪಂ. ಪಂಚಾಯತಿ ಅಧ್ಯಕ್ಷರಾದ ಆಶಾರಾಣಿ, ಮಂಜುನಾಥ್ ಇನ್ನೀತರರಿದ್ದರು.