ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಅಭಿಮಾನಿಗಳ ಕುತೂಹಲ ಕೆರಳಿಸಿದ್ದ ಭಾರತ -ಪಾಕ್ ಹೈಹೊಲ್ಟೇಜ್ ಪಂದ್ಯ ಮಳೆಯಿಂದ ರದ್ದಾಗಿದ್ದು ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಆರಂಭದಿಂದಲೂ ಮಳೆಯೂ ಕಾಟ ನೀಡಿತು. ಇದರ ಜೊತೆಗೆ ತಂಡಕ್ಕೆ ಆರಂಭಿಕ ಆಘಾತ ಎದುರಿಸಿತು.
ನಾಯಕ ರೋಹಿತ್ ಶರ್ಮಾ(11), ಆರಂಭಿಕ ಆಟಗಾರ ಶುಭಮನ್ ಗಿಲ್(10), ಹಿರಿಯ ಆಟಗಾರ ವಿರಾಟ್ ಕೊಹ್ಲಿ(4), ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್(14), ಗಳಿಸಿ ಪೆವಿಲಿಯನ್ ಕಡೆ ನಡೆದರು.
ನಂತರ ಬ್ಯಾಟಿಂಗ್ ಗೆ ಬಂದ ವಿಕೆಟ್ ಕೀಪರ್ ಇಶಾನ್ ಕಿಶನ್(82) ಮತ್ತು ಹಾರ್ದಿಕ್ ಪಾಂಡ್ಯ(87)ರವರ 138 ರನ್ ಗಳ ಜೊತೆಯಾಟ ನೆರವಿನಿಂದ ಉತ್ತಮ ಟಾರ್ಗೆಟ್ ನೀಡಲು ನೆರವಾಯಿತು.
ನಂತರ ಬ್ಯಾಟಿಂಗ್ ಗೆ ಬಂದ ಯಾವ ಬ್ಯಾಟ್ಸಮನ್ ಸಹ ಹೆಚ್ಚು ಹೊತ್ತು ಕ್ರಿಸ್ ನಲ್ಲಿ ಉಲಿಯಲಿಲ್ಲ. ಭಾರತ ತಂಡವು 266 ರನ್ ಗಳಿಗೆ ಆಲ್ ಔಟ್ ಆಯಿತು.
ಪಾಕಿಸ್ತಾನ ಪರ ವೇಗಿಗಳಾದ ಶಾಹೀನ್ ಅಫ್ರಿದಿ 4 ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ತಲಾ 3 ವಿಕೆಟ್ ಪಡೆದು ಮಿಂಚಿದರು.