ಭಾರತೀಯ ಜನತಾ ಪಾರ್ಟಿ, ಬೆಂ. ಗ್ರಾ ಜಿಲ್ಲಾ ಸಂಘಟನಾ ಚುನಾವಣೆ, ಜಿಲ್ಲಾ ಅಧ್ಯಕ್ಷರು ಹಾಗೂ ಮಂಡಲ ಅಧ್ಯಕ್ಷರ ಘೋಷಣೆ ಮಾಡಲಾಗಿದೆ.
- ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ- ಎಚ್.ರಾಮಕೃಷ್ಣಪ್ಪ
- ದೊಡ್ಡಬಳ್ಳಾಪುರ ನಗರ ಮಂಡಲ ಅಧ್ಯಕ್ಷ- ಬಿ.ಮುದ್ದಪ್ಪ
- ದೊಡ್ಡಬಳ್ಳಾಪುರ ಗ್ರಾಮಾಂತರ ಅಧ್ಯಕ್ಷ- ಕೆ. ನಾಗೇಶ್
- ನೆಲಮಂಗಲ ಮಂಡಲ ಅಧ್ಯಕ್ಷ- ಜಗದೀಶ್ ಚೌದರಿ
- ದೇವನಹಳ್ಳಿ ಮಂಡಲ ಅಧ್ಯಕ್ಷ- ಎನ್.ಎಲ್. ಅಂಬರೀಷ್ ಗೌಡ
- ಹೊಸಕೋಟೆ ಮಂಡಲ ನಗರ ಅಧ್ಯಕ್ಷ- ಬಾಲಚಂದ್ರನ್ ಎನ್ ಆಯ್ಕೆ
ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಎಚ್.ರಾಮಕೃಷ್ಣಪ್ಪ ಮಾತನಾಡಿ, ಕಾರ್ಯಕರ್ತರ ಪಕ್ಷ ಭಾರತೀತ ಜನತಾ ಪಕ್ಷ. ಬಿಜೆಪಿ ಸದಸ್ಯರನ್ನ ಗುರುತಿಸುವ ಪಕ್ಷ. ಬಿಜೆಪಿ ಕಟ್ಟಕಡೆಯ ವ್ಯಕ್ತಿಯನ್ನ ಗುರುತಿಸಿ ಸ್ಥಾನಮಾನ ನೀಡುತ್ತದೆ. ಬಿಜೆಪಿ ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದರು.
ಪಕ್ಷ ಯಾರ ಪರವೂ ಇಲ್ಲ ವಿರೋಧವೂ ಇಲ್ಲ. ಪಕ್ಷ ನಿಷ್ಠರಿಗೆ ಒಳ್ಳೆ ಸ್ಥಾನಮಾನ ಸಿಗುತ್ತದೆ. ರಾಜ್ಯ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಲು ಹಗಲಿರುಳು ಕೆಲಸ ಮಾಡುತ್ತೇವೆ. ಎಲ್ಲರೂ ಸೇರಿ ಒಗ್ಗಾಟ್ಟಾಗಿ ಕೆಲಸ ಮಾಡಿ ಪಕ್ಷವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡೋಣ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಈ ವೇಳೆ ಬೆಂ.ಗ್ರಾ ಜಿಲ್ಲಾ ಚುನಾವಣಾ ಅಧಿಕಾರಿ ಅಶ್ವತ್ಥ್ ನಾರಾಯಣ್, ಮಾಜಿ ಜಿಲ್ಲಾಧ್ಯಕ್ಷ ನಾರಾಯಣ ಗೌಡ, ರಾಜ್ಯ ವೈದ್ಯಕೀಯ ಪ್ರಕೋಷ್ಟ ಸಂಚಾಲಕ ಡಾ.ನಾರಾಯಣ್ ಪರಿಶಿಷ್ಟ ಪ್ರಕೋಷ್ಠ ಸಂಚಾಲಕ ಆರ್.ಗೋವಿಂದ್ ರಾಜು, ಮಾಜಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ವತ್ಸಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.