ದೊಡ್ಡ ಬಳ್ಳಾಪುರ ನಗರ ಎರಡನೇ ವಾರ್ಡ್ ಬಸವೇಶ್ವರನಗರದಲ್ಲಿರುವ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಕಳ್ಳತನ ನಡೆದಿದೆ.
ಈ ಕಾರ್ಯಾಲಯದಲ್ಲಿ ಯಾರೋ ದುಷ್ಕರ್ಮಿಗಳು ಗೇಟಿನ ಬೀಗವನ್ನು ಹೊಡೆದು, ಕಚೇರಿಯ ಬಾಗಿಲನ್ನು ಮುರಿದು ಒಳಗೆ ನುಗ್ಗಿ, ಅಲಮಾರು ಬೀಗವನ್ನು ಮುರಿದು ಪಕ್ಷಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಹೊತ್ತಿಯ್ದಿದ್ದಾರೆ. ಗೇಟಿನ ಮುಂಭಾಗದಲ್ಲಿ ಮದ್ಯಪಾನ ಸೇವಿಸಿ ಬಾಟಲುಗಳನ್ನು ಸಹ ಬಿದ್ದಿವೆ.
ಕಳ್ಳತನವಾಗಿರುವ ಕುರಿತು ಇಂದು ಮಧ್ಯಾಹ್ನ 2 ಗಂಟೆಯಲ್ಲಿ ಕಾರ್ಯಾಲಯದ ಸಿಬ್ಬಂದಿಗೆ ತಿಳಿದು ಬಂದಿರುತ್ತದೆ.
ಕಳ್ಳತನವಾಗಿರುವ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ರಾಮಕೃಷ್ಣಪ್ಪ ಎಚ್ ಅವರು ದೊಡ್ಡಬಳ್ಳಾಪುರ ನಗರ ಠಾಣೆಗೆ ದೂರು ನೀಡಿದ್ದಾರೆ.