ಭಾರತದ ಪ್ರಥಮ ಡಿಜಿಟಲ್ ಕಲಿಕಾ ಬುಕ್ ಪರಿಚಯ: ಅದುವೆ ಜಿಯೋಬುಕ್: ಆಗಸ್ಟ್ 5ರಿಂದ ಜಿಯೋಬುಕ್ ಲಭ್ಯ

ಎಲ್ಲ ವಯೋಮಾನದವರ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುವ, ಕ್ರಾಂತಿಕಾರಕ ಡಿಜಿಟಲ್ ಕಲಿಕಾ ಬುಕ್ ‘ಜಿಯೋಬುಕ್’ ಅನ್ನು ರಿಲಯನ್ಸ್ ರೀಟೇಲ್ ಹೊರತಂದಿದೆ. ಅತ್ಯಾಧುನಿಕ ‘ಜಿಯೋಒಎಸ್’ ಕಾರ್ಯಾಚರಣಾ ವ್ಯವಸ್ಥೆ, ಆಕರ್ಷಕ ವಿನ್ಯಾಸ ಮತ್ತು ಸದಾ-ಸಂಪರ್ಕಿತವಾಗಿರುವ ವೈಶಿಷ್ಟ್ಯಗಳೊಂದಿಗೆ, ಪ್ರತಿಯೊಬ್ಬರ ಕಲಿಕೆಯ ಅನುಭವವನ್ನೇ ಬದಲಾಯಿಸುವ ಭರವಸೆಯನ್ನು ಜಿಯೋಬುಕ್ ನೀಡುತ್ತದೆ.

ಆನ್‌ಲೈನ್ ತರಗತಿಗಳಿಗೆ ಹಾಜರಾಗುವುದು, ಕೋಡ್ ಕಲಿಕೆ ಅಥವಾ ಯೋಗ ಸ್ಟುಡಿಯೋ ಆರಂಭಿಸುವುದು ಇಲ್ಲವೇ ಆನ್‌ಲೈನ್ ವ್ಯಾಪಾರ ಶುರು ಮಾಡುವುದು – ಎಲ್ಲ ಸಾಧ್ಯತೆಗಳಿಗೂ ಜಿಯೋಬುಕ್ ಸೂಕ್ತ ವೇದಿಕೆಯನ್ನು ಒದಗಿಸುತ್ತದೆ.

“ಕಲಿಕೆಯ ಹಾದಿಯಲ್ಲಿರುವ ಎಲ್ಲ ವಯೋಮಾನದವರಿಗೆ ಬಲ ನೀಡುವ ಮತ್ತು ಪೂರಕವಾಗುವ ನವೀನ ಉತ್ಪನ್ನಗಳನ್ನು ಪರಿಚಯಿಸಲು ನಾವು ಬದ್ಧರಾಗಿದ್ದೇವೆ. ಜಿಯೋಬುಕ್ ನಮ್ಮ ಹೊಚ್ಚ ಹೊಸ ಉತ್ಪನ್ನವಾಗಿದ್ದು, ಅತ್ಯಾಧುನಿಕ ಗುಣವೈಶಿಷ್ಟ್ಯಗಳು ಮತ್ತು ಸೀಮಾತೀತವಾದ ಸಂಪರ್ಕ ಸಂವಹನದ ಆಯ್ಕೆಗಳೊಂದಿಗೆ ಎಲ್ಲ ವಯೋಮಾನದ ಕಲಿಕಾರ್ಥಿಗಳ ಬೇಡಿಕೆಗೆ ಇದು ಸ್ಪಂದಿಸುತ್ತದೆ. ಜನರು ಕಲಿಯುವ ವಿಧಾನವನ್ನೇ ಜಿಯೋಬುಕ್ ಬದಲಾಯಿಸುತ್ತದೆ. ವೈಯಕ್ತಿಕ ಬೆಳವಣಿಗೆ ಹಾಗೂ ಕೌಶಲ್ಯಾಭಿವೃದ್ಧಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ ಎಂಬ ವಿಶ್ವಾಸ ನಮ್ಮದು” ಎಂದು ರಿಲಯನ್ಸ್ ರೀಟೇಲ್ ವಕ್ತಾರರು ತಿಳಿಸಿದ್ದಾರೆ.

ಬಳಕೆದಾರರ ಸೌಕರ್ಯ ಮತ್ತು ಅನುಕೂಲಕ್ಕೆ ಅನುಗುಣವಾಗಿ ವಿನ್ಯಾಸಗೊಂಡಿರುವ ಜಿಯೋ ಒಎಸ್ (ಕಾರ್ಯಾಚರಣಾ ವ್ಯವಸ್ಥೆ)ಯ ಪ್ರಮುಖ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:

1.4G-LTE ಹಾಗೂ ಡ್ಯುಯಲ್ ಬ್ಯಾಂಡ್ WiFi ಸಾಮರ್ಥ್ಯ – ಸೀಮಾತೀತ ಅಂತರಜಾಲ ಸಂಪರ್ಕದೊಂದಿಗೆ, ದೇಶದ ಮೂಲೆಮೂಲೆಯಲ್ಲೂ ಕಲಿಕೆಗೆ ಅಡ್ಡಿಯಿಲ್ಲದಂತೆ ಸದಾ ಸಂಪರ್ಕಿತರಾಗಿರಲು ಅನುಕೂಲ.

2.ಕಲ್ಪನೆಗೆ ಅನುಗುಣವಾಗಿ ವರ್ತಿಸುವ ಇಂಟರ್‌ಫೇಸ್

3.75+ ಕೀಬೋರ್ಡ್ ಶಾರ್ಟ್‌ಕಟ್‌ಗಳು
4. ಟ್ರ್ಯಾಕ್‌ಪ್ಯಾಡ್ ಸನ್ನೆಗಳು
5. ಸ್ಕ್ರೀನ್ ವಿಸ್ತರಣೆ
6. ವೈರ್‌ಲೆಸ್ ಪ್ರಿಂಟಿಂಗ್
7. ಮಲ್ಟಿ-ಟಾಸ್ಕಿಂಗ್ ಸ್ಕ್ರೀನ್‌ಗಳು
8.ಏಕೀಕೃತ ಚಾಟ್‌ಬಾಟ್
9. ಜಿಯೋ ಟಿವಿ ಆ್ಯಪ್ ಮೂಲಕ ಶೈಕ್ಷಣಿಕ ವಿಷಯಗಳಿಗೆ ಪ್ರವೇಶಾವಕಾಶ
10. ಜಿಯೋ ಕ್ಲೌಡ್ ಗೇಮ್ಸ್ ಮೂಲಕ ಪ್ರಮುಖ ಗೇಮ್‌ಗಳು
11. JioBIAN ಎಂಬ ಸಿದ್ಧ ಕೋಡಿಂಗ್ ವಲಯದೊಂದಿಗೆ, C/C++, ಜಾವಾ, ಪೈಥಾನ್, ಮತ್ತು ಪರ್ಲ್ ಮುಂತಾದ ವಿಭಿನ್ನ ಭಾಷೆಗಳಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಕೋಡಿಂಗ್ ಕಲಿಯಬಹುದು.

ಸರಿಸಾಟಿಯಿಲ್ಲದ ವಿನ್ಯಾಸ ಮತ್ತು ಕಾರ್ಯಕ್ಷಮತೆ:

ಜಿಯೋ ಬುಕ್‌ನ ಪ್ರಮುಖ ವೈಶಿಷ್ಟ್ಯಗಳಲ್ಲೊಂದು ಎಂದರೆ ಮ್ಯಾಟ್ ಫಿನಿಶ್, ಅಲ್ಟ್ರಾ ಸ್ಲಿಮ್ ಬಿಲ್ಟ್ ಇರುವ ಆಕರ್ಷಕ ವಿನ್ಯಾಸ, ಜೊತೆಗೆ ತೀರಾ ಹಗುರ (990 ಗ್ರಾಂ.). ಸ್ಲಿಮ್ ಆಗಿದ್ದರೂ, 2.0 GHz ಒಕ್ಟಾ ಕೋರ್ ಪ್ರೊಸೆಸರ್, 4 GB LPDDR4 RAM, 64GB (ಎಸ್‌ಡಿ ಕಾರ್ಡ್ ಮೂಲಕ 256GB ವರೆಗೂ ವಿಸ್ತರಿಸಬಹುದು) ಸ್ಟೋರೇಜ್, ಇನ್ಫಿನಿಟಿ ಕೀಬೋರ್ಡ್, ದೊಡ್ಡದಾದ, ಹಲವು ಸನ್ನೆಗಳಿಗೆ ಅನುಕೂಲವಿರುವ ಟ್ರ್ಯಾಕ್‌ಪ್ಯಾಡ್ ಮತ್ತು ಅಂತರ್-ನಿರ್ಮಿತ USB/HDMI ಪೋರ್ಟ್‌ಗಳ ಮೂಲಕ ಅದ್ಭುತ ಕಾರ್ಯನಿರ್ವಹಣೆಯನ್ನು ನೀಡುತ್ತದೆ.

ಜಿಯೋಬುಕ್ ಹಾರ್ಡ್‌ವೇರ್ ವೈಶಿಷ್ಟ್ಯಗಳು:
1. ನವೀನತಮ ಕಾರ್ಯಾಚರಣಾ ವ್ಯವಸ್ಥೆ – JioOS
2. 4G ಮತ್ತು ಡ್ಯುಯಲ್ ಬ್ಯಾಂಡ್ WiFi ಸಂಪರ್ಕತೆ
3. ಅಲ್ಟ್ರಾ ಸ್ಲಿಮ್, ಅತ್ಯಂತ ಹಗುರ (990 ಗ್ರಾಂ) ಮತ್ತು ಅತ್ಯಾಧುನಿಕ ವಿನ್ಯಾಸ
4. ಸುಲಲಿತ ಮಲ್ಟಿಟಾಸ್ಕಿಂಗ್‌ಗಾಗಿ ಶಕ್ತಿಶಾಲಿ ಒಕ್ಟಾ ಕೋರ್ ಚಿಪ್‌ಸೆಟ್
5. 11.6” (29.46CM) ಆ್ಯಂಟಿ-ಗ್ಲೇರ್ HD ಡಿಸ್‌ಪ್ಲೇ
6. ಇನ್ಫಿನಿಟಿ ಕೀಬೋರ್ಡ್ ಮತ್ತು ಅಗಲವಾದ, ಬಹು ಸನ್ನೆಗಳಿಗೆ ಅನುಕೂಲವಿರುವ ಟ್ರ್ಯಾಕ್‌ಪ್ಯಾಡ್
7. USB, HDMI ಮತ್ತು ಆಡಿಯೋ ಪೋರ್ಟ್‌ಗಳು

ಲಭ್ಯತೆ:

1. ಜಿಯೋಬುಕ್ ರೂ.16,499 ಬೆಲೆಯಲ್ಲಿ 2023 ಆಗಸ್ಟ್ 5ರಿಂದ ಲಭ್ಯವಿದೆ.
2. ಗ್ರಾಹಕರು ರಿಲಯನ್ಸ್ ಡಿಜಿಟಲ್‌ನ ಆನ್‌ಲೈನ್ ಹಾಗೂ ಆಫ್‌ಲೈನ್ ಮಳಿಗೆಗಳಿಂದ ಮತ್ತು Amazon.in ತಾಣದಿಂದ ಜಿಯೋಬುಕ್ ಖರೀದಿಸಬಹುದು.
3. ಹೆಚ್ಚಿನ ಮಾಹಿತಿಗಾಗಿ www.jiobook.com ಸಂಪರ್ಕಿಸಿ.

Ramesh Babu

Journalist

Recent Posts

ಜಿಲ್ಲೆಯಲ್ಲಿ 8,04,534 ಮತದಾರರು: 3814 ಮತದಾರರ ಹೆಸರು ಡಿಲಿಟ್

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಅಂತಿಮ ಮತದಾರರ ಪಟ್ಟಿಯುಲ್ಲಿ 8,04,534 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್…

19 hours ago

ಅತಿಯಾದ ಆತ್ಮವಿಶ್ವಾಸದಿಂದ ಕಾಂಗ್ರೆಸ್‌ಗೆ ಹಿನ್ನಡೆ: ಸಚಿವ ಚಲುವರಾಯಸ್ವಾಮಿ

ವಿಧಾನ ಪರಿಷತ್ತಿನ ಎರಡು ಶಿಕ್ಷಕರ ಹಾಗೂ ಎರಡು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿರುವುದಕ್ಕೆ ಅತಿಯಾದ ಆತ್ಮವಿಶ್ವಾಸವೂ…

20 hours ago

ಪ್ರಾಮಾಣಿಕತೆಯ ಪ್ರಾಯೋಗಿಕತೆ…….

ಪ್ರಾಮಾಣಿಕತೆ ಎಂಬುದು ಬರಹದಲ್ಲಿ - ಭಾಷಣಗಳಲ್ಲಿ ಅಥವಾ ಬೇರೆ ಯಾವುದೇ ವೇದಿಕೆಯಲ್ಲಿ ‌ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಹೇಳುವುದು ಮತ್ತು ಅದರಂತೆ…

23 hours ago

ದೇವನಹಳ್ಳಿ ಬಳಿ ಆರ್‌ಟಿಒ ಮೆಗಾ ರೇಡ್‌: 50ಕ್ಕೂ ಹೆಚ್ಚು ಬಸ್‌ಗಳಿಂದ ತೆರಿಗೆ ವಸೂಲಿ

ದೇವನಹಳ್ಳಿ: ಕರ್ನಾಟಕ ರಾಜ್ಯಕ್ಕೆ ಪಾವತಿಸಬೇಕಾದ ತೆರಿಗೆಯನ್ನು ಕಟ್ಟದೆ ಸಂಚರಿಸುತ್ತಿದ್ದ ಹೊರರಾಜ್ಯಗಳಲ್ಲಿ ನೋಂದಣಿಯಾದ ಖಾಸಗಿ ಬಸ್‌ಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು…

1 day ago

ರಸ್ತೆಗಳಲ್ಲಿ ಮೊಳೆಗಳ ರಾಶಿ: ‘ಪಂಕ್ಚರ್‌ ದಂಧೆ’ ಶಂಕೆ: ವಾಹನಗಳ ಟೈರ್‌ ಪದೇಪದೇ ಠುಸ್‌

ಜಿಲ್ಲೆಯಲ್ಲಿ ಇತ್ತೀಚೆಗೆ ವಾಹನಗಳ ಟೈರ್‌ಗಳು ಪಂಕ್ಚರ್‌ ಆಗುವ ಪ್ರಕರಣಗಳು ಹೆಚ್ಚುತ್ತಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿವೆ. ರಸ್ತೆಗಳಲ್ಲಿ ಮೊಳೆ ಹಾಗೂ ಮೊನಚಾದ…

1 day ago

ಹೊಸಹಳ್ಳಿ ಸಮೀಪ ಕರಡಿ ಪ್ರತ್ಯಕ್ಷ: ಉಜ್ಜಿನಿಯಲ್ಲಿ ಚಿರತೆಗಳ ಬೆನ್ನಲ್ಲೇ ಕರಡಿ ಪ್ರತ್ಯಕ್ಷ

ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಸಮೀಪ ಇಂದು ಮಧ್ಯಾಹ್ನ ಕರಡಿಯೊಂದು ಕಾಣಿಸಿಕೊಂಡಿದ್ದು, ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಚಿರತೆ ಕಂಡು ಭಯಭೀತರಾದ…

2 days ago