ಎಲ್ಲ ವಯೋಮಾನದವರ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುವ, ಕ್ರಾಂತಿಕಾರಕ ಡಿಜಿಟಲ್ ಕಲಿಕಾ ಬುಕ್ ‘ಜಿಯೋಬುಕ್’ ಅನ್ನು ರಿಲಯನ್ಸ್ ರೀಟೇಲ್ ಹೊರತಂದಿದೆ. ಅತ್ಯಾಧುನಿಕ ‘ಜಿಯೋಒಎಸ್’ ಕಾರ್ಯಾಚರಣಾ ವ್ಯವಸ್ಥೆ, ಆಕರ್ಷಕ ವಿನ್ಯಾಸ ಮತ್ತು ಸದಾ-ಸಂಪರ್ಕಿತವಾಗಿರುವ ವೈಶಿಷ್ಟ್ಯಗಳೊಂದಿಗೆ, ಪ್ರತಿಯೊಬ್ಬರ ಕಲಿಕೆಯ ಅನುಭವವನ್ನೇ ಬದಲಾಯಿಸುವ ಭರವಸೆಯನ್ನು ಜಿಯೋಬುಕ್ ನೀಡುತ್ತದೆ.
ಆನ್‌ಲೈನ್ ತರಗತಿಗಳಿಗೆ ಹಾಜರಾಗುವುದು, ಕೋಡ್ ಕಲಿಕೆ ಅಥವಾ ಯೋಗ ಸ್ಟುಡಿಯೋ ಆರಂಭಿಸುವುದು ಇಲ್ಲವೇ ಆನ್‌ಲೈನ್ ವ್ಯಾಪಾರ ಶುರು ಮಾಡುವುದು – ಎಲ್ಲ ಸಾಧ್ಯತೆಗಳಿಗೂ ಜಿಯೋಬುಕ್ ಸೂಕ್ತ ವೇದಿಕೆಯನ್ನು ಒದಗಿಸುತ್ತದೆ.
ಬಳಕೆದಾರರ ಸೌಕರ್ಯ ಮತ್ತು ಅನುಕೂಲಕ್ಕೆ ಅನುಗುಣವಾಗಿ ವಿನ್ಯಾಸಗೊಂಡಿರುವ ಜಿಯೋ ಒಎಸ್ (ಕಾರ್ಯಾಚರಣಾ ವ್ಯವಸ್ಥೆ)ಯ ಪ್ರಮುಖ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:
1.4G-LTE ಹಾಗೂ ಡ್ಯುಯಲ್ ಬ್ಯಾಂಡ್ WiFi ಸಾಮರ್ಥ್ಯ – ಸೀಮಾತೀತ ಅಂತರಜಾಲ ಸಂಪರ್ಕದೊಂದಿಗೆ, ದೇಶದ ಮೂಲೆಮೂಲೆಯಲ್ಲೂ ಕಲಿಕೆಗೆ ಅಡ್ಡಿಯಿಲ್ಲದಂತೆ ಸದಾ ಸಂಪರ್ಕಿತರಾಗಿರಲು ಅನುಕೂಲ.
2.ಕಲ್ಪನೆಗೆ ಅನುಗುಣವಾಗಿ ವರ್ತಿಸುವ ಇಂಟರ್‌ಫೇಸ್
3.75+ ಕೀಬೋರ್ಡ್ ಶಾರ್ಟ್‌ಕಟ್‌ಗಳು
4. ಟ್ರ್ಯಾಕ್‌ಪ್ಯಾಡ್ ಸನ್ನೆಗಳು
5. ಸ್ಕ್ರೀನ್ ವಿಸ್ತರಣೆ
6. ವೈರ್‌ಲೆಸ್ ಪ್ರಿಂಟಿಂಗ್
7. ಮಲ್ಟಿ-ಟಾಸ್ಕಿಂಗ್ ಸ್ಕ್ರೀನ್‌ಗಳು
8.ಏಕೀಕೃತ ಚಾಟ್‌ಬಾಟ್
9. ಜಿಯೋ ಟಿವಿ ಆ್ಯಪ್ ಮೂಲಕ ಶೈಕ್ಷಣಿಕ ವಿಷಯಗಳಿಗೆ ಪ್ರವೇಶಾವಕಾಶ
10. ಜಿಯೋ ಕ್ಲೌಡ್ ಗೇಮ್ಸ್ ಮೂಲಕ ಪ್ರಮುಖ ಗೇಮ್‌ಗಳು
11. JioBIAN ಎಂಬ ಸಿದ್ಧ ಕೋಡಿಂಗ್ ವಲಯದೊಂದಿಗೆ, C/C++, ಜಾವಾ, ಪೈಥಾನ್, ಮತ್ತು ಪರ್ಲ್ ಮುಂತಾದ ವಿಭಿನ್ನ ಭಾಷೆಗಳಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಕೋಡಿಂಗ್ ಕಲಿಯಬಹುದು.
ಸರಿಸಾಟಿಯಿಲ್ಲದ ವಿನ್ಯಾಸ ಮತ್ತು ಕಾರ್ಯಕ್ಷಮತೆ:
ಜಿಯೋ ಬುಕ್‌ನ ಪ್ರಮುಖ ವೈಶಿಷ್ಟ್ಯಗಳಲ್ಲೊಂದು ಎಂದರೆ ಮ್ಯಾಟ್ ಫಿನಿಶ್, ಅಲ್ಟ್ರಾ ಸ್ಲಿಮ್ ಬಿಲ್ಟ್ ಇರುವ ಆಕರ್ಷಕ ವಿನ್ಯಾಸ, ಜೊತೆಗೆ ತೀರಾ ಹಗುರ (990 ಗ್ರಾಂ.). ಸ್ಲಿಮ್ ಆಗಿದ್ದರೂ, 2.0 GHz ಒಕ್ಟಾ ಕೋರ್ ಪ್ರೊಸೆಸರ್, 4 GB LPDDR4 RAM, 64GB (ಎಸ್‌ಡಿ ಕಾರ್ಡ್ ಮೂಲಕ 256GB ವರೆಗೂ ವಿಸ್ತರಿಸಬಹುದು) ಸ್ಟೋರೇಜ್, ಇನ್ಫಿನಿಟಿ ಕೀಬೋರ್ಡ್, ದೊಡ್ಡದಾದ, ಹಲವು ಸನ್ನೆಗಳಿಗೆ ಅನುಕೂಲವಿರುವ ಟ್ರ್ಯಾಕ್‌ಪ್ಯಾಡ್ ಮತ್ತು ಅಂತರ್-ನಿರ್ಮಿತ USB/HDMI ಪೋರ್ಟ್‌ಗಳ ಮೂಲಕ ಅದ್ಭುತ ಕಾರ್ಯನಿರ್ವಹಣೆಯನ್ನು ನೀಡುತ್ತದೆ.
ಜಿಯೋಬುಕ್ ಹಾರ್ಡ್‌ವೇರ್ ವೈಶಿಷ್ಟ್ಯಗಳು:
1. ನವೀನತಮ ಕಾರ್ಯಾಚರಣಾ ವ್ಯವಸ್ಥೆ – JioOS
2. 4G ಮತ್ತು ಡ್ಯುಯಲ್ ಬ್ಯಾಂಡ್ WiFi ಸಂಪರ್ಕತೆ
3. ಅಲ್ಟ್ರಾ ಸ್ಲಿಮ್, ಅತ್ಯಂತ ಹಗುರ (990 ಗ್ರಾಂ) ಮತ್ತು ಅತ್ಯಾಧುನಿಕ ವಿನ್ಯಾಸ
4. ಸುಲಲಿತ ಮಲ್ಟಿಟಾಸ್ಕಿಂಗ್‌ಗಾಗಿ ಶಕ್ತಿಶಾಲಿ ಒಕ್ಟಾ ಕೋರ್ ಚಿಪ್‌ಸೆಟ್
5. 11.6” (29.46CM) ಆ್ಯಂಟಿ-ಗ್ಲೇರ್ HD ಡಿಸ್‌ಪ್ಲೇ
6. ಇನ್ಫಿನಿಟಿ ಕೀಬೋರ್ಡ್ ಮತ್ತು ಅಗಲವಾದ, ಬಹು ಸನ್ನೆಗಳಿಗೆ ಅನುಕೂಲವಿರುವ ಟ್ರ್ಯಾಕ್‌ಪ್ಯಾಡ್
7. USB, HDMI ಮತ್ತು ಆಡಿಯೋ ಪೋರ್ಟ್‌ಗಳು
1. ಜಿಯೋಬುಕ್ ರೂ.16,499 ಬೆಲೆಯಲ್ಲಿ 2023 ಆಗಸ್ಟ್ 5ರಿಂದ ಲಭ್ಯವಿದೆ.
2. ಗ್ರಾಹಕರು ರಿಲಯನ್ಸ್ ಡಿಜಿಟಲ್‌ನ ಆನ್‌ಲೈನ್ ಹಾಗೂ ಆಫ್‌ಲೈನ್ ಮಳಿಗೆಗಳಿಂದ ಮತ್ತು Amazon.in ತಾಣದಿಂದ ಜಿಯೋಬುಕ್ ಖರೀದಿಸಬಹುದು.
3. ಹೆಚ್ಚಿನ ಮಾಹಿತಿಗಾಗಿ www.jiobook.com ಸಂಪರ್ಕಿಸಿ.
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…