ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು 5 ವಿಕೆಟ್ ನಷ್ಟಕ್ಕೆ 159 ರನ್ ಪೆರಿಸಿತು. ವೆಸ್ಟ್ ಇಂಡೀಸ್ ಪರ ಬ್ಯಾಟಿಂಗ್ ಆರಂಭಿಸಿದ ಬ್ರಾಂಡನ್ ಕಿಂಗ್ ಮತ್ತು ಕೆ ಮೇಯರ್ಸ್ ಮೊದಲ ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿದರು. ನಂತರ ಬ್ಯಾಟಿಂಗ್ ಗೆ ಬಂದ ಜೆ ಚಾರ್ಲ್ಸ್(12), ಪೂರನ್(20), ಹೆಟ್ಮೆಯರ್(9) ಹೆಚ್ಚು ಹೊತ್ತು ಕ್ರಿಸ್ ನಲ್ಲಿ ಉಳಿಯಲಿಲ್ಲ. ರೋವ್ಮನ್ ಪೊವೆಲ್ (40) ರವರ ಉತ್ತಮ ಬ್ಯಾಟಿಂಗ್ ಇಂದ ವೆಸ್ಟ್ ಇಂಡೀಸ್ ತಂಡವು 5 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.
ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಯಶಸ್ವಿ ಜೈಸ್ವಾಲ್(1), ಶುಭಮನ್ ಗಿಲ್(6) ಬೇಗನೆ ಪೆವಿಲಿಯನ್ ಸೇರಿದರು. ನಂತರ ಬ್ಯಾಟಿಂಗ್ ಗೆ ಬಂದ ಸೂರ್ಯಕುಮಾರ್ ಯಾದವ್ (83) ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಗೆಲುವಿನ ಸನಿಹ ಸೇರಿತು ಮತ್ತು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ತಿಲಕ್ ವರ್ಮ(49), ಹಾರ್ದಿಕ್ ಪಾಂಡ್ಯ(29) ಗೆಲುವಿನ ಗಡಿ ದಾಟಿಸಿದರು.
ಉತ್ತಮ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಜನಾರಾದರು.