ಭವಿಷ್ಯದ ದಿನಗಳು ಆರಾಮದಾಯಕವಾಗಿರ ಬೇಕು, ಅದನ್ನ ಸರಳವಾಗಿಸುವುದು ಇಂದು ನಾವು ಮಾಡಿಸುವ ವಿಮೆಗಳು, ಹೌದು ರಿಲಯನ್ಸ್ ಜನರಲ್ ಇನ್ಯೂರೆನ್ಸ್ ನವರು ವಿಮೆ ಪಾಲಿಸಿ ಬಗ್ಗೆ ಜಾಗೃತಿಯನ್ನ ಮೂಡಿಸುತ್ತಿದ್ದಾರೆ, ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ರಾಜ್ಯದಲ್ಲಿ ವಿಮೆ ಪಾಲಿಸಿಗಳ ಬಗ್ಗೆ ಪ್ರಚಾರ ಮಾಡಲು ರಿಲಯನ್ಸ್ ಜನರಲ್ ಇನ್ಯೂರೆನ್ಸ್ ನನ್ನು ಪ್ರಮುಖ ವಿಮಾದಾರರಾಗಿ ಆಯ್ಕೆ ಮಾಡಿದೆ ಎಂದು ರಿಲಯನ್ಸ್ ಜನರಲ್ ಇನ್ಯೂರೆನ್ಸ್ ಸಂಸ್ಥೆಯ ಅಧಿಕಾರಿಗಳಾದ ರಮೇಶ್ ಬಾಬು ಹೇಳಿದರು.
ದೊಡ್ಡಬಳ್ಳಾಪುರದ ಗ್ರಾಮೀಣ ಅಭ್ಯುದಯ ಸಂಸ್ಥೆಯಲ್ಲಿ ರಾಜ್ಯ ವಿಮಾ ಜಾಗೃತಿ ಯೋಜನೆಯಡಿ ಆರೋಗ್ಯ ವಿಮೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಉದ್ದೇಶ 2047ರ ಹೊತ್ತಿಗೆ ಎಲ್ಲರಿಗೂ ವಿಮೆ ಗುರಿ ಹೊಂದಿದೆ. ಈ ಹಿನ್ನೆಲೆ ರಿಲಯನ್ಸ್ ಜನರಲ್ ಇನ್ಯೂರೆನ್ಸ್ ಕರ್ನಾಟಕದಲ್ಲಿ ಜಿಲ್ಲಾ ಮಟ್ಟದ ವಿಮಾ ಜಾಗೃತಿ ಕಾರ್ಯಕ್ರಮಗಳನ್ನ ಅಯೋಜನೆ ಮಾಡುತ್ತಿದೆ, ಪ್ರಮುಖವಾಗಿ ಗ್ರಾಮೀಣ ಪ್ರದೇಶದಲ್ಲಿ ವಿಮೆ ಪಾಲಿಸಿ ಬಗ್ಗೆ ಜಾಗೃತಿ ಮೂಡಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಲ್ಲವಿ ಜೈನ್, ವಿನೋದ್, ನವೀನ್.ಕೆ.ವಿ ಸೇರಿದಂತೆ ಇತರರು ಭಾಗವಹಿಸಿದ್ದರು.