ಭರ್ಜರಿ ಬೌಲಿಂಗ್, ಗೆಲುವಿನ ಲಯಕ್ಕೆ ಮರಳಿದ ಆರ್ ಸಿಬಿ!

ಮೊಹಾಲಿ : ಆರ್ ಸಿಬಿಯ ತಾರ ಬೌಲರ್ ಮೊಹಮ್ಮದ್ ಸಿರಾಜ್ ತೋರಿದ ಉತ್ತಮ ಬೌಲಿಂಗ್ ಹಾಗೂ ಎರಡು ವರ್ಷಗಳ ನಂತರ ಮತ್ತೊಮ್ಮೆ ಆರ್ ಸಿಬಿ ತಂಡದ ನಾಯಕತ್ವ ವಹಿಸಿದ ವಿರಾಟ್ ಕೊಹ್ಲಿ ಪಡೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 24 ರನ್ ಗಳ ಭರ್ಜರಿ ಜಯ ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭ ಪಡೆಯಿತು, ನಾಯಕ ಫಾಫ್ ಡು ಪ್ಲೆಸಿಸ್ ಗಾಯದ ಕಾರಣ ಇಂಪ್ಯಾಕ್ಟ್ ಆಟಗಾರನಾಗಿ ವಿರಾಟ್ ಜೊತೆ ತಂಡಕ್ಕೆ ಉತ್ತಮ ಜೊತೆಯಾಟ ನೀಡಿದರು, ಮೊದಲನೇ ವಿಕೆಟ್ ಗೆ 137 ರನ್ ಗಳನ್ನು ಪೇರಿಸಿದ ಈ ಜೋಡಿ ಪವರ್ ಪ್ಲೇ ನಲ್ಲಿ ಪಂಜಾಬ್ ತಂಡದ ಬೌಲರ್ ಗಳನ್ನ ಬೆಂಡೆತ್ತಿದ ಇವರು ಆರು ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 59 ರನ್ ಗಳನ್ನು ಪೇರಿಸಿದರು.

ಉತ್ತಮ ಫಾರ್ಮ್ ನಲ್ಲಿದ್ದ ವಿರಾಟ್ ಮತ್ತೊಮ್ಮೆ ಆಕರ್ಷಕ ಅರ್ಧಶತಕ ಸಿಡಿಸಿದರು, 47 ಬಾಲ್ ಗೆ (59) ರನ್ ಗಳಿಸಿದರು. 16 ನೇ ಓವರ್ ನ ಮೊದಲ ಎಸೆತದಲ್ಲಿ ಪಂಜಾಬ್ ತಂಡದ ಹರ್ ಪ್ರೀತ್ ಬ್ರಾರ್ ಗೆ ವಿರಾಟ್ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಬಂದ ಮ್ಯಾಕ್ಸ್ ವೆಲ್ ಎದುರಿಸಿದ ಮೊದಲ ಎಸೆತದಲ್ಲಿ ದೊಡ್ಡ ಶಾಟ್ ಒಡೆಯುವ ಭರದಲ್ಲಿ ಅಥರ್ವ ಗೆ ಕ್ಯಾಚ್ ನೀಡಿ ಶೂನ್ಯಕ್ಕೆ ತೆರಳಿದರು.

ಸಂಘಟಿತ ಹೋರಾಟ ನಡೆಸಿದ ಡು ಪ್ಲೆಸಿಸ್ 56 ಬಾಲ್ ಗಳಲ್ಲಿ (84) ರನ್ ಗಳಿಸಿದರು, ಇದರಲ್ಲಿ 5 ಸಿಕ್ಸ್ ಹಾಗೂ 5 ಫೋರ್ ಕೂಡ ಇದ್ದವು, ಇವರ ನಂತರ ಬಂದ ಬ್ಯಾಟರ್ ಗಳಿಂದ ಯಾವುದೇ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ, ಆರ್ ಸಿ ಬಿ 20 ಓವರ್ ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 174 ಗಳಿಸಲಸ್ಟೆ ಸಾಧ್ಯವಾಯಿತು.

ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಗೆ ಆರ್ ಸಿ ಬಿ ಬೌಲರ್ ಗಳು ಶಾಕ್ ನೀಡಿದರು, ಮೊದಲ ಓವರ್ ನಲ್ಲೆ ಮಧ್ಯಮ ವೇಗಿ ಸಿರಾಜ್ ಎಸೆತಕ್ಕೆ ಎಲ್ ಬಿ ಡಬ್ಲ್ಯೂ ಬಲೆಗೆ ಸಿಕ್ಕ ಅಥರ್ವ ಥೈಡೆ ಬಹು ಬೇಗ ವಿಕೆಟ್ ಒಪ್ಪಿಸಿದರು. ನಂತರದ 3 ನೇ ಓವರ್ ನಲ್ಲಿ ವನಿಂದು ಹಸರಂಗರ ಗೂಗ್ಲಿ ಎದುರಿಸಲು ಸಾಧ್ಯವಾಗದೆ ಮ್ಯಾಥ್ಯೂ ಶಾರ್ಟ್ ಕೂಡ ವಿಕೆಟ್ ಒಪ್ಪಿಸಿದರು.

ಬಹು ನಿರೀಕ್ಷಿತ ಆಟಗಾರ ಲಿವಿಂಗ್ ಸ್ಟೋನ್ ರ ಸ್ಫೋಟಕ ಆಟಕ್ಕೆ ಸಿರಾಜ್ ಎಲ್ ಬಿ ಡಬ್ಲ್ಯೂ ಮೂಲಕ ಕಟ್ಟಿಹಾಕಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಸಂಘಟಿತ ಆಟವಾಡಿದ ಪಂಜಾಬ್ ನ ಸ್ಥಳೀಯ ಆಟಗಾರ ಪ್ರಭಸಿಮ್ರಾನ್ (46) ರನ್ ಗಳನ್ನೂ ಪರಿಸಿದರು. ಇದರಲ್ಲಿ 3 ಫೋರ್ ಹಾಗೂ 4 ಭರ್ಜರಿ ಸಿಕ್ಸರ್ ಗಳೂ ಕೂಡ ಇದ್ದವು.

ನಾಯಕ ಸ್ಯಾಮ್ ಕರನ್ ಹಾಗೂ ಶಾರುಕ್ ಖಾನ್ ಕಡೆಯಿಂದ ಉತ್ತಮ ಮೊತ್ತ ಕೂಡಿ ಬರಲು ಸಾಧ್ಯವಾಗಲಿಲ್ಲ. ಆದರೆ ಪಂಜಾಬ್ ನ ವಿಕೆಟ್ ಕೀಪರ್ ಜೀತೆಂದ್ರ ಶರ್ಮಾರ ದಿಟ್ಟ ಹೋರಾಟ ಗೆಲುವಿನತ್ತ ಕೊಂಡೊ ಯ್ಯುವಂತಿತ್ತು. ತಾವು ಎದುರಿಸಿದ 27 ಎಸೆತಗಳಲ್ಲಿ 2 ಫೋರ್ 3 ಸಿಕ್ಸರ್ ಸಮೇತ (41) ರನ್ ಗಳಿಸಿ ಹರ್ಷಲ್ ಪಟೇಲ್ ರ ಎಸೆತದಲ್ಲಿ ಶಹಾಬಾದ್ ಗೆ ಸುಲಭ ಕ್ಯಾಚ್ ನೀಡುವ ಮೂಲಕ ಪಂಜಾಬ್ ಕಿಂಗ್ಸ್ ತಂಡದ ಹೋರಾಟಕ್ಕೆ ಮುಕ್ತಾಯ ಬರೆದರು.

18.2 ಓವರ್ ಗಳಲ್ಲಿ ಕೇವಲ 150 ರನ್ ಗಳಷ್ಟೇ ಗಳಿದ ಪಂಜಾಬ್ 24 ರನ್ ಗಳ ಅಂತರದಿಂದ ಸೋಲನ್ನು ಅನುಭವಿಸಿದರು, ಸಿರಾಜ್ ತಮ್ಮ ಉತ್ತಮ ಬೌಲಿಂಗ್ ಅನ್ನು ಈ ಪಂದ್ಯದಲ್ಲೂ ಮುಂದುವರಿಸಿದರು, 4 ಓವರ್ ಗಳಲ್ಲಿ ಕೇವಲ 21 ರನ್ ಗಳನ್ನಸ್ಟೆ ಬಿಟ್ಟು ಕೊಟ್ಟು 4 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಇವರಿಗೆ ಸಾಥ್ ನೀಡಿದ ಹಸರಂಗ 2 ವಿಕೆಟ್ ಹಾಗೂ ಹರ್ಷಲ್ ಪಟೇಲ್ 1 ವಿಕೆಟ್ ಪಡೆದು ಆರ್ ಸಿ ಬಿ ಗೆಲುವಿನ ರುವಾರಿಯಾದರು. ಪಂದ್ಯದಲ್ಲಿ 2 ಆಕರ್ಷಕ ರನ್ ಔಟ್ ಕೂಡ ಮೂಡಿಬಂದವು. ಅತ್ಯುತ್ತಮವಾಗಿ ಬೌಲಿಂಗ್ ಪ್ರದರ್ಶನ ನೀಡಿದ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply

Your email address will not be published. Required fields are marked *