ಭಜರಂಗದಳವನ್ನ ಕೆಣಕುವ ಮುನ್ನ ಗೋದ್ರಾ ಹತ್ಯಾಕಾಂಡ, ಬಾಬರಿ ಮಸೀದಿ ಧ್ವಂಸ ಪ್ರಕರಣ ನೆನಪಿಸಿಕೊಳ್ಳಿ- ಭಜರಂಗದಳದ ಕೋಲಾರ ವಿಭಾಗದ ಸಂಯೋಜಕ ನರೇಶ್ ರೆಡ್ಡಿ

ಭಜರಂಗದಳ ಸಂಘಟನೆ ಯಾವುದೇ ದೇಶ ವಿರೋಧಿ, ಭಯೋತ್ಪಾದಕ ಚಟುವಟಿಕೆ ಮಾಡಿಲ್ಲ, ಸಮಾಜ ಘಾತುಕ ಕಾರ್ಯದಲ್ಲಿ ತೊಡಗಿಕೊಂಡಿಲ್ಲ, ಕೇವಲ ಹಿಂದೂ ಪರವಾದ ಹೋರಾಟ, ಸಾಮಾಜಿಕ ಸಾಮರಸ್ಯ, ದೇಶ ಭಕ್ತಿ ಕಾಪಾಡುವ ಸಲುವಾಗಿ ಕೆಲಸ‌ ಮಾಡಿಕೊಂಡು ಬಂದಿದೆ. ಇಂತಹ ಸಂಘಟನೆಯನ್ನು ನಿಷೇಧ ಮಾಡುವ ಭರವಸೆ ನೀಡಿರುವುದು ಖಂಡನೀಯ ಎಂದು ಭಜರಂಗದಳದ ಕೋಲಾರ ವಿಭಾಗದ ಸಂಯೋಜಕ ನರೇಶ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ಭಜರಂಗದಳವನ್ನು ನಿಷೇಧಿಸಲಾಗುವುದು ಎಂಬ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಯನ್ನು ಖಂಡಿಸಿದ ಭಜರಂಗ ದಳದ ಮುಖಂಡರು ನಗರದ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ನಂತರ ಅವರು ಮಾತನಾಡಿದರು.

ಭಜರಂಗದಳವು ಯಾವುದೇ ಮತೀಯ ದ್ವೇಷ ಬಿತ್ತುತ್ತಿಲ್ಲ, ಪಿಎಫ್ಐ ಹಾಗೂ ಭಜರಂಗದಳ ಸಂಘಟನೆಯನ್ನು ಒಂದೇ ತಕ್ಕಡಿಯಲ್ಲಿ ಹಾಕಿ ನಿಷೇಧದ ಭರವಸೆಯನ್ನ ನೀಡಿದ್ದಾರೆ ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷವು ತತಕ್ಷಣದಲ್ಲಿ ಸಂಘಟನೆಗೆ ಕ್ಷಮೆ ಕೇಳಿ ಪ್ರಣಾಳಿಕೆನ್ನು ತಿದ್ದುಪಡಿ ಮಾಡಿ ಭಜರಂಗದಳ ನಿಷೇಧದ ಭರವಸೆಯನ್ನು ಕೈಬಿಡಬೇಕು, ಇಲ್ಲದಿದ್ದಲ್ಲಿ ಕಾಂಗ್ರೆಸ್ ಕಚೇರಿಗಳನ್ನು ಸುಟ್ಟು ಭಸ್ಮ ಮಾಡುತ್ತೇವೆ, ಕಾಂಗ್ರೆಸ್ ಕಚೇರಿಗಳು, ನಾಯಕರ ಮನೆಗಳ ಮೇಲೆ ಭಜರಂಗದಳ ಧ್ವಜ ಹಾರಿಸುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಪಕ್ಷ ಚುನಾವಣೆ ಹಿನ್ನೆಲೆಯಲ್ಲಿ ಒಂದು ಸಮುದಾಯ ಓಲೈಕೆ ಮಾಡಲು ಈ ರೀತಿಯ ಘೋಷಣೆ ಮಾಡಿದೆ. ಹಿಂದೂಗಳನ್ನು ಕೆಣಕಿದರೆ ಏನಾಗಲಿದೆ ಎಂಬುದು ಗೋದ್ರಾ ಹತ್ಯಾಕಾಂಡ, ಬಾಬರಿ ಮಸೀದಿ ಧ್ವಂಸ ಪ್ರಕರಣ ನೋಡಿ ತಿಳಿಯಲಿ ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಭಜರಂಗದಳ ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗ, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಮಧುಸೂದನ್ ಗೌಡ, ಕಾರ್ಯದರ್ಶಿ ರವಿಕುಮಾರ್, ಬಜರಂಗದಳ ತಾಲೂಕು ಸಂಯೋಜಕ ಗಂಗಾಧರ್ ಸೇರಿದಂತೆ ಜಿಲ್ಲಾ ಘಟಕ, ತಾಲೂಕು ಘಟಕದ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *