ಭಗತ್ ಸಿಂಗ್ ಕ್ರೀಡಾಂಗಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ: ಮುಂದಿನ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ನೂತನ ಉಪವಿಭಾಗಾಧಿಕಾರಿ ಕಚೇರಿಗೆ ಶೀಲಾನ್ಯಾಸ- ಶಾಸಕ ಧೀರಜ್ ಮುನಿರಾಜು

ಮುಂದಿನ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ನೂತನ ಉಪವಿಭಾಗಾಧಿಕಾರಿ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಶೀಲಾನ್ಯಾಸ ನೇರವೇರಿಸಲು ಎಲ್ಲಾ ತೊಡಕುಗಳನ್ನು ನಿವಾರಣೆ ಮಾಡಲಾಗುವುದು ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಮಂಗಳವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ‌ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ದೇಶ ಸ್ವಾತಂತ್ರ್ಯವಾಗಲು ಹಲವಾರು ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ, ಬಲಿದಾನಗಳನ್ನು ಮಾಡಿದ್ದಾರೆ. ಅದರ ಫಲವಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ ಎಂದು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.

ತಾಲೂಕಿನ ಜನತೆಯ ಸಮಸ್ಯೆಗಳನ್ನು ಉತ್ತಮವಾಗಿ ಜನಸ್ನೇಹಿಯಾಗಿ ಬಗೆಹರಿಸಲು ಯತ್ನಿಸಲಾಗುತ್ತದೆ. ಜನರ ಕುಂದುಕೊರತೆಗಳನ್ನು ಸರಕಾರದ ಗಮನಕ್ಕೆ ತರಲಾಗುತ್ತದೆ. ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ 2016ರಲ್ಲಿ ತಾಲೂಕಿಗೆ ಅನುಮೋದನೆ ಸಿಕ್ಕಿದೆ. ಮುಂದಿನ ಸ್ವಾತಂತ್ರ್ಯ ದಿನಾಚರಣೆಯನ್ನು ನಿರ್ಮಾಣಗೊಂಡ ನೂತನ ಕ್ರೀಡಾಂಗಣದಲ್ಲಿ ಮಾಡಲು ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.

ತಾಲೂಕಿನ ಬಹು ವರ್ಷದ ಬೇಡಿಕೆಯಾದ ಜಿಲ್ಲಾಸ್ಪತ್ರೆ, ಎಸ್.ಪಿ ಕಚೇರಿ, ಜಿಲ್ಲಾ ಕಾರಾಗೃಹ ವಿಚಾರಗಳಲ್ಲಿ ಜಿಲ್ಲಾಕೇಂದ್ರ ಹೋರಾಟ ಸಮಿತಿಗೆ ಶಕ್ತಿ ತುಂಬಲಾಗುತ್ತದೆ. ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕನ್ನು ಮಾದರಿ ತಾಲ್ಲೂಕು ಮಾಡಲು ಅಧಿಕಾರಿಗಳು ಸಹಕರಿಸಬೇಕಾಗಿದೆ ಎಂದರು.

ನಂತರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಮಾತನಾಡಿ, ವಿಶ್ವದಲ್ಲೇ ಪರಮಾಣು ಶಕ್ತಿ ಹೊಂದಿದ ಕೆಲವೇ ಕೆಲವು ದೇಶಗಳಲ್ಲಿ ಭಾರತವು ಒಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ದೇಶ ಅಸಾಮಾನ್ಯ ಸಾಧನೆ ಮಾಡಿದೆ. ಯುವ ಸಮುದಾಯ ಕೂಡ ದೇಶದ ಅಭಿವೃದ್ಧಿಯಲ್ಲಿ ಭಾಗವಾಗಿ ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಪ್ರಯತ್ನಿಸಬೇಕು‌. ಪ್ರತಿಯೊಬ್ಬರು ಸ್ವಾತಂತ್ರ್ಯ ಹೋರಾಟಗಾರನ್ನು ಸ್ಮರಿಸಿ‌ ಸಡಗರ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಬೇಕು ಎಂದರು.

ತಾ.ಪಂ ಇಒ ಮುನಿರಾಜು ಮಾತನಾಡಿ, ನನ್ನ ಮಣ್ಣು ನನ್ನ ದೇಶದ ಅಭಿಯಾನದ ಭಾಗವಾಗಿ ಪ್ರತಿಯೊಂದು ಗ್ರಾ.ಪಂಚಾಯಿತಿಯಿಂದಲೂ ಪವಿತ್ರವಾದ ಮಣ್ಣನ್ನಯ ಸಂಗ್ರಹಿಸಲಾಗುತ್ತಿದೆ. ಇದನ್ನು ದೆಹಲಿಗೆ ತಲುಪಿಸುವಂತ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ರಂಗಕಲೆಯ ಕೋಡಿಹಳ್ಳಿಯ ಮಾಲೂರಪ್ಪ , ಸಾಮಾಜಿಕ ಸೇವೆ ವಿಭಾಗದಲ್ಲಿ ರವಿ ಮಾವಿನಕುಂಟೆ, ಕ್ಷಯ ರೋಗಿ ದತ್ತು ಪಡೆದು ಅವರಿಗೆ ನೆರವಾದ ಶ್ರೀನಿವಾಸ ಮೂರ್ತಿ.ಎಲ್ , ಹರಿಕಥೆ ವಿಭಾಗದಲ್ಲಿ ರಾಮಮೂರ್ತಿ ಡಿ.ಆರ್ , ಜಾನಪದ ಕಲೆಯ ಜೆ.ವಿ ಸುಬ್ರಮಣ್ಯ, ಟೇಕ್ವಾಂಡೋ ವಿಭಾಗದಲ್ಲಿ ಯಶವಂತ್. ಎನ್ ಅವರಿಗೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಸಿ ನಾರಾಯಣಸ್ವಾಮಿಗೆ ವಿಶೇಷ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವಿಭಾ ರಾಠೋಡ್, ಇಓ ಮುನಿರಾಜು, ನಗರಸಭೆ ಅಧ್ಯಕ್ಷೆ ಸುಧಾರಣಿ ಲಕ್ಷ್ಮೀನಾರಾಯಣ, ಉಪಾಧ್ಯಕ್ಷೆ ಫರ್ಹಾನ್ ತಾಜ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೀನಾರಾಯಣ್, ಟಿಎಪಿಎಂಸಿಎಸ್ ಅಧ್ಯಕ್ಷ ಆಂಜನೇಗೌಡ, ಪೌರಾಯುಕ್ತ ಶಿವಶಂಕರ್, ನಗರಸಭೆ ಸದಸ್ಯರಾದ ತ.ನ ಪ್ರಭುದೇವ, ವೆಂಕಟೇಶ್, ರವಿ, ಆರ್ ಆನಂದ್ ಮೂರ್ತಿ ಸೇರಿದಂತೆ ಅನೇಕರು ಹಾಜರಿದ್ದರು.

Ramesh Babu

Journalist

Recent Posts

ಎಂಎಸ್ ಜಿಪಿ ಘಟಕಕ್ಕೆ ಬಂದ ಹೆಚ್ಚುವರಿ ಕಸದ ಲಾರಿಗಳು: ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ಲಾರಿಗಳಿಗೆ ತಡೆ

ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಮಂಕಳಾದ ಬಳಿಯ ಬೆಂಗಳೂರು ಕಸದ ವಿಲೇವಾರಿ ಘಟಕ ಎಂಎಸ್ ಜಿಪಿ ಘಟಕಕ್ಕೆ ಮಂಗಳವಾರ ಹೆಚ್ಚುವರಿ ಕಸದ ಲಾರಿಗಳು…

8 minutes ago

40 ಸಾವಿರ ಲಂಚ ಪಡೆಯುವಾಗ ವಿಶೇಷ ಭೂಸ್ವಾಧೀನಾಧಿಕಾರಿ ಸೇರಿದಂತೆ ಇಬ್ಬರು ಲೋಕಾಯುಕ್ತ ಬಲೆಗೆ.!

ಶಿವಮೊಗ್ಗ : ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಶಿವಮೊಗ್ಗ ಹಿಂದಿನ ಅಪರ ಜಿಲ್ಲಾಧಿಕಾರಿಯಾಗಿದ್ದ ಸಿದ್ದಲಿಂಗ ರೆಡ್ಡಿ ಮತ್ತು…

46 minutes ago

Accident Update: ಗುಂಡಮ್ಮಗೆರೆ ಕ್ರಾಸ್ ಬಳಿ ಬೈಕ್ -ಖಾಸಗಿ ಕಂಪನಿ ಬಸ್ ನಡುವೆ ಅಪಘಾತ‌ ಪ್ರಕರಣ: ಬೈಕ್ ಸವಾರ ಸಾವು

ಬೈಕ್ -ಖಾಸಗಿ ಕಂಪನಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ಸುಮಾರು…

1 hour ago

ಗುಂಡಮ್ಮಗೆರೆ ಕ್ರಾಸ್ ಬಳಿ ಬೈಕ್ -ಖಾಸಗಿ ಕಂಪನಿ ಬಸ್ ನಡುವೆ ಅಪಘಾತ: ಬೈಕ್ ಸವಾರನಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು

ಬೈಕ್ -ಖಾಸಗಿ ಕಂಪನಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಂದು ಸಂಜೆ ಸುಮಾರು…

1 hour ago

2026ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ದಿನಾಂಕ ಹಾಗೂ ಪರೀಕ್ಷೆ 2 ರ ವೇಳಾಪಟ್ಟಿ ಪ್ರಕಟ

2026ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ದಿನಾಂಕ ಹಾಗೂ ಪರೀಕ್ಷೆ 2 ರ ವೇಳಾಪಟ್ಟಿಯನ್ನು ಶಿಕ್ಷಣ…

4 hours ago

ಗೀತಂ ಯೂನಿವರ್ಸಿಟಿಯಲ್ಲಿ ಯುವತಿ ಆತ್ಮಹತ್ಯೆ ಪ್ರಕರಣ: ಸ್ಥಳಕ್ಕೆ ಎಸ್ಪಿ‌ ಚಂದ್ರಕಾಂತ್ ಭೇಟಿ, ಪರಿಶೀಲನೆ, ಪ್ರತಿಕ್ರಿಯೆ

ಆಕೆ ತಂದೆ ತಾಯಿಗೆ ಇದ್ದ ಏಕೈಕ‌ ಮಗಳು. ಹಾಗಾಗಿ ತಂದೆ ತಾಯಿಗೆ ಮಗಳು ಎಂದರೆ ಎಲ್ಲಿಲ್ಲದ ಪ್ರೀತಿ‌. ಮಗಳು ಚೆನ್ನಾಗಿ…

5 hours ago