ದೊಡ್ಡಬಳ್ಳಾಪುರ: ಬೈಕ್ ಮತ್ತು ಕಾರು ಅಪಘಾತದಲ್ಲಿ ತೀವ್ರವಾಗಿ ಯುವಕ ಗಾಯಗೊಂಡಿದ್ದ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಯುವಕ ಸಾವನ್ನಪ್ಪಿದ್ದು, ಮೃತ ಯುವಕನ ಕುಟುಂಬದವರು ಅಂಗಾಂಗ ದಾನ ಮಾಡುವ ಮೂಲಕ ಬೇರೆಯವರ ಬದುಕಿಗೆ ಬೆಳಕಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಕಂಚಿಗನಾಳ ಗ್ರಾಮದ ಅನಿಲ್ ಕುಮಾರ್ ಅಪಘಾತದಲ್ಲಿ ಮೃತ ಪಟ್ಟ ಯುವಕ, ನವೆಂಬರ್ 28 ರಂದು ರಾಜಘಟ್ಟದ ಪೆಟ್ರೋಲ್ ಬಂಕ್ ಬಳಿ ನಡೆದ ಕಾರು ಮತ್ತು ಬೈಕ್ ಅಪಘಾತದಲ್ಲಿ ಅನಿಲ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು, ಗಾಯಗೊಂಡಿದ್ದ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಪ್ರಜ್ಞೆ ಕಳೆದುಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಯುವಕನ ಬ್ರೈನ್ ಡೆತ್ ಆಗಿದೆ, ಚೇತರಿಸಿ ಕೊಳ್ಳುವ ಯಾವುದೇ ಸಾಧ್ಯತೆ ಇಲ್ಲದೆ ಇದ್ದಿದ್ದರಿಂದ ವೈದ್ಯರು ಯುವಕ ಸಾವನ್ನ ಘೋಷಿಸಿದ್ದಾರೆ.
ಮಗನ ಸಾವಿನ ನಡುವೆಯು ತಂದೆ ರಾಮಚಂದ್ರಪ್ಪ ಮತ್ತು ಕುಟುಂಬದವರು ಅಂಗಾಂಗ ದಾನ ಮಾಡುವ ತೀರ್ಮಾನ ಮಾಡಿದ್ದಾರೆ, ಮೃತ ಯುವಕನ ದೇಹದಿಂದ ಹೃದಯ, ಹೃದಯದ ನಾಳ, ಲಿವರ್, ಶ್ವಾಸಕೋಶ,ಮೂತ್ರಪಿಂಡಗಳನ್ನ ಅಗತ್ಯ ಇರುವ ರೋಗಿಗಳಿಗೆ ದಾನ ಮಾಡಲಾಗಿದೆ, ಈ ಮೂಲಕ ಬೇರೆಯವರ ಬದುಕಿನಲ್ಲಿ ಬೆಳಕಾಗುವ ಮೂಲಕ ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾನೆ.